ಬ್ಯಾಂಕಾಕ್​ನಲ್ಲಿ ಕಾಣೆಯಾದವರು; ಚಂದನ್ ಶೆಟ್ಟಿ, ಅಲೋಕ್ ಜತೆಯಾಗಿ ಗಾಯನ

Rap Song
Published on

ಬೆಂಗಳೂರು: ಕನ್ನಡದಲ್ಲಿ ರ್ಯಾಪ್ ಹಾಡುಗಳಿಗೆ ದೊಡ್ಡ ಹೆಸರು ತಂದುಕೊಟ್ಟವರು ಚಂದನ್ ಶೆಟ್ಟಿ ಮತ್ತು ಆಲ್ ಓಕೆ ಖ್ಯಾತಿಯ ಅಲೋಕ್. ಈಗ ಬಹಳ ದಿನಗಳ ನಂತರ ಇಬ್ಬರೂ ಒಂದೇ ಹಾಡಿಗೆ ಧ್ವನಿಯಾಗಿದ್ದಾರೆ. ‘ಕಾಣೆಯದವರ ಬಗ್ಗೆ ಪ್ರಕಟಣೆ’ ಚಿತ್ರದ ಬ್ಯಾಂಕಾಕ್ ಹಾಡನ್ನು ಇಬ್ಬರೂ ಜತೆಯಾಗಿ ಹಾಡಿದ್ದಾರೆ.

ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಹೇ ನೋಡಿಲ್ಲಿ ಹುಡ್ಗೀರ್ ಹಿಂಡು, ಇಲ್ಲಿ ಸಿಗೋವ್ಳೆ ಹೊಸ ಗರ್ಲ್​ಫ್ರೆಂಡು, ಇವ್ಳು ನಮ್ ಪಾಲಿಗೆ ಚಂದ್ರನ್ ತುಂಡು...’ ಎಂದು ಸಾಗುವ ಈ ಹಾಡನ್ನು ಬ್ಯಾಂಕಾಕ್​ನಲ್ಲಿ ಚಿತ್ರೀಕರಿಸಲಾಗಿದ್ದು, ರವಿಶಂಕರ್, ರಂಗಾಯಣ ರಘು, ಚಿಕ್ಕಣ್ಣ ಮತ್ತು ತಬಲಾ ನಾಣಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಮೂರು ದಿನಗಳ ಹಿಂದೆ ಯೂಟ್ಯೂಬ್​ನ ಎ2 ಮ್ಯೂಸಿಕ್ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ಅರ್ಜುನ್

ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ. ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದವರು ‘ರ್ಯಾಂಬೋ 2’ ಖ್ಯಾತಿಯ ಅನಿಲ್ ಕುಮಾರ್. ನಿರ್ದೇಶನದ ಜತೆಗೆ ಅವರು ಈ ಚಿತ್ರದಲ್ಲಿ ನಟನೆಯನ್ನೂ ಮಾಡಿದ್ದಾರೆ. ಅವರ ಜತೆಗೆ ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ ಮುಂತಾದವರಿದ್ದು, ಆಶಿಕಾ ರಂಗನಾಥ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿತೇಂದ್ರ ಮಂಜುನಾಥ್ ನಿರ್ವಿುಸಿರುವ ಈ ಚಿತ್ರ ಇದೇ ಶುಕ್ರವಾರ (ಮೇ 27) ಬಿಡುಗಡೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net