ಇವರು ಒಂದು ತಿಂಗಳ ಊಟಕ್ಕೆ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ? ... ಬೆಚ್ಚಿ ಬೀಳಿಸತ್ತೆ ಸೆಲೆಬ್ರಿಟಿಗಳ ತಿಂಗಳ ಫುಡ್ ಬಿಲ್

Ranveer - Deepika Final
Published on

ಸೆಲೆಬ್ರಿಟಿಗಳು ತಮ್ಮ ಉಡುಗೆ-ತೊಡುಗೆಗಳಿಗೆ ಎಷ್ಟು ಖರ್ಚು ಮಾಡುತ್ತಾರೆ ಅಂತ ಗೊತ್ತು. ಆದರೆ, ಅವರು ಒಂದು ತಿಂಗಳಿಗೆ ಊಟಕ್ಕೆ ಎಷ್ಟು ಖರ್ಚು ಮಾಡುತ್ತಾರೆ ಎಂದು ಗೊತ್ತಾ? ಗೊತ್ತಾದರೆ ಒಂದು ಕ್ಷಣ ಬೆಚ್ಚಿ ಬೀಳೋದು ಸತ್ಯ. ಬಾಲಿವುಡ್‌ನ ಸ್ಟಾರ್ ಕಪಲ್ ಎಂದನಿಸಿಕೊಂಡಿರುವ ರಣವೀರ್ ಸಿಂಗ್ ಮತ್ತು ದೀಪಿಕಾ ಪುಡಕೋಣೆ, ಒಂದು ತಿಂಗಳಿಗೆ ಊಟಕ್ಕೆಂದೇ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ.

ಬಾಡಿ, ವೇಯ್ಟ ಅಂತ ಹುಷಾರಾಗಿರೋ ಮಂದಿ, ಅಷ್ಟೆಲ್ಲಾ ಏನು ತಿನ್ನುತ್ತಾರೆ ಎಂಬ ಪ್ರಶ್ನೆ ಬರೋದು ಸಹಜ. ವಿಷಯ ಏನೆಂದರೆ, ಈ ಸೆಲೆಬ್ರಿಟಿಗಳ ಆಹಾರ ಪದ್ಧತಿ ಮತ್ತು ಅವರ ಡಯಟ್ ನೋಡಿಕೊಳ್ಳುವುದಕ್ಕೆ ಪರ್ಸನಲ್ ಆಪ್ಟಿಮೈಸ್ಡ್​ ಡಯಟ್ ಎಂಬ ಸಂಸ್ಥೆ ಇದೆ. ಈ ಸಂಸ್ಥೆಯು ಸೆಲೆಬ್ರಿಟಿಗಳ ಆಹಾರದ ಬಗ್ಗೆ ಕಾಳಜಿ ವಹಿಸುತ್ತಿದ್ದು, ಯಾರು ಎಷ್ಟು ತಿನ್ನಬೇಕು, ಎಷ್ಟು ಡಯಟ್ ಮಾಡಬೇಕು, ಡಯಟ್ ಮಾಡುವಾಗ ಯಾವ ಆಹಾರ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡುತ್ತದಂತೆ. ಅಷ್ಟೇ ಅಲ್ಲ, ಆಹಾರ ಸರಬರಾಜು ಮಾಡುತ್ತದಂತೆ.

ಮೂಲಗಳ ಪ್ರಕಾರ, ರಣವೀರ್ ಮತ್ತು ದೀಪಿಕಾ ಪಡುಕೋಣೆ ಪ್ರತಿ ತಿಂಗಳಿಗೆ ಫೋರ್-ಮೀಲ್ ಪ್ಲಾನ್ ತೆಗೆದುಕೊಂಡಿದ್ದು, ಒಂದು ಮೀಲ್‌ಗೆ 90 ಸಾವಿರ ಖರ್ಚಾಗುತ್ತದಂತೆ. ಇದು ಮನೆಗೆ ನೇರವಾಗಿ ಫುಡ್​ ಕಳುಹಿಸಿದರೆ ತಗಲುವ ಶುಲ್ಕ. ಇನ್ನು ಸೆಲೆಬ್ರಿಟಿಗಳು ಔಟ್‌ಡೋರ್‌ಗೆ ಹೋದಾಗ, ಅವರಿಗೆ ಡಯಟ್ ಪ್ಲಾನ್ ಮಾಡುವುದಕ್ಕೆಂದೇ ಒಬ್ಬ ಚೆಫ್​ ಕರೆದುಕೊಂಡು ಹೋಗಬಹುದಂತೆ. ಆ ಚೆಫ್​ ತಗಲುವ ವೆಚ್ಚ ದಿನಕ್ಕೆ 12 ಸಾವಿರ.

ರಣವೀರ್ ಮತ್ತು ದೀಪಿಕಾ ಮಾತ್ರವಲ್ಲ, ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಅನಿಲ್ ಕಪೂರ್ ಮುಂತಾದವರು ಸಹ ಈ ಸಂಸ್ಥೆಯಿಂದ ಡಯಟ್ ಫುಡ್ ತರಿಸಿಕೊಳ್ಳುತ್ತಿದ್ದು, ತಮ್ಮ ತಿಂಗಳ ಊಟಕ್ಕೆ ಇಷ್ಟೊಂದು ಖರ್ಚು ಮಾಡುತ್ತಾರೆ ಎನ್ನುವುದು ವಿಶೇಷವೋ, ವಿಚಿತ್ರವೋ ಗೊತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net