ತಾತನ ಹುಟ್ಟುಹಬ್ಬಕ್ಕೆ ಮೊಮ್ಮಗನ ಸಂಭ್ರಮ ... ನಾಳೆ ಸಿಹಿಸುದ್ದಿ ಕೊಡ್ತಾರಂತೆ ಯುವ ರಾಜಕುಮಾರ್

Yuva Final
Published on

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಪ್ರತಿವರ್ಷದಂತೆ ಈ ವರ್ಷ ಸಹ ನಾಳೆ (ಏಪ್ರಿಲ್ 24) ಡಾ. ರಾಜಕುಮಾರ್ ಪ್ರಯುಕ್ತ ಇಡೀ ರಾಜ್ಯದಲ್ಲಿ ಸಂಭ್ರಮ ಮನೆಮಾಡಿರುತಿತ್ತು. ಆದರೆ, ಕೋವಿಡ್-19 ಮತ್ತು ಲಾಕ್‌ಡೌನ್ ಭಯದಿಂದ ಈ ವರ್ಷ ಅಷ್ಟೇನೂ ಸಂಭ್ರಮಗಳಿರುವುದಿಲ್ಲ.

ಈ ಮಧ್ಯೆ, ಡಾ. ರಾಜಕುಮಾರ್ ಅವರ ಮೊಮ್ಮಗ ಯುವ ರಾಜಕುಮಾರ್ ಕಡೆಯಿಂದ ಒಂದು ಸುದ್ದಿ ಬಂದಿದೆ. ನಾಳೆ ಯುವ ರಾಜಕುಮಾರ್ ಅವರ ಸ್ಟ್ ಲುಕ್ ಪೋಸ್ಟರ್ ಸಂಜೆ ನಾಲ್ಕು ಗಂಟೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗಲಿದೆ. ಈ ಕುರಿತು ಯುವ ಅವರ ತಂದೆ ರಾಘವೇಂದ್ರ ರಾಜಕುಮಾರ್, ಫೇಸ್‌ಬುಕ್‌ನಲ್ಲಿ ಒಂದು ವೀಡಿಯೋ ಬಿಡುಗಡೆ ಮಾಡಿದ್ದು, ‘ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ’ ಎಂದು ಕೇಳಿದ್ದಾರೆ.

ಯುವ ರಾಜಕುಮಾರ್ ಹೀರೋ ಆಗುವ ವಿಷಯ ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಹೀರೋ ಆಗುವುದಕ್ಕೆ ಕಳೆದ ಹಲವು ತಿಂಗಳುಗಳಿಂದ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುವ ಯುವ, ಇದೀಗ ತೆರೆಯ ಮೇಲೆ ಕಾಣಿಸಿಕೊಳ್ಳುವುದಕ್ಕೆ ತಯಾರಾಗಿದ್ದಾರೆ. ಇದರ ಮೊದಲ ಹಂತವಾಗಿ, ಅವರ ಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಯುವ ಅಭಿನಯದ ಮೊದಲ ಚಿತ್ರ ಯಾವುದು, ಅದರಲ್ಲಿ ಅವರು ಹೇಗೆ ಕಾಣುತ್ತಾರೆ ಎಂಬೆಲ್ಲಾ ಪ್ರಶ್ನೆಗಳಿಗೆ ಏಪ್ರಿಲ್ 24ರ ಸಂಜೆ ನಾಲ್ಕಕ್ಕೆ ಉತ್ತರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net