ರಶ್ಮಿಕಾ ಹುಟ್ಟುಹಬ್ಬಕ್ಕೆ ಸಿಡಿಪಿ ಬಿಡುಗಡೆ

Rashmika CDP Final
Published on

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ (ಭಾನುವಾರ ಏಪ್ರಿಲ್ 5) ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸಬೇಕು ಎಂದು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಆಸೆಪಟ್ಟಿದ್ದರಾದರೂ, ಕರೊನಾ ಕಾಟದಿಂದ ಅದು ಸಾಧ್ಯವಾಗಲಿಲ್ಲ. ಸಂಭ್ರಮಾಚರಣೆಯಂತೂ ಆಗಲಿಲ್ಲ, ಕೊನೆಯ ಪಕ್ಷ ಅಭಿಮಾನಿಗಳೆಲ್ಲಾ ಒಂದು ಕಾಮನ್ ಡಿಸ್‌ಪ್ಲೇ ಪಿಕ್ಚರ್ (ಸಿಡಿಪಿ) ಹಾಕಿಕೊಳ್ಳೋಣ ಎಂದು ನಿರ್ಧರಿಸಿರುವ ರಶ್ಮಿಕಾ ಅಭಿಮಾನಿಗಳು ಇಂದು ಸಿಡಿಪಿ ಬಿಡುಗಡೆ ಮಾಡಿಸಿದ್ದಾರೆ.

ಶನಿವಾರ ಸಂಜೆ ಆರಕ್ಕೆ ಈ ಸಿಡಿಪಿ ಬಿಡುಗಡೆ ಕಾರ್ಯಕ್ರಮವಿತ್ತು. ಕನ್ನಡದಿಂದ ‘ಪೈಲ್ವಾನ್’ ಕೃಷ್ಣ, ತೆಲುಗಿನಿಂದ ನಿರ್ದೇಶಕ ವೆಂಕಿ ಕುಡುಮುಲ ಮತ್ತು ತಮಿಳಿನಿಂದ ನಿರ್ಮಾಪಕ ಎಸ್.ಆರ್. ಪ್ರಭು ಈ ಸಿಡಿಪಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಮೂಲಕ ಬಿಡುಗಡೆ ಮಾಡುವುದರ ಜತೆಗೆ, ರಶ್ಮಿಕಾಗೆ ಶುಭ ಕೋರಿದ್ದಾರೆ.

ಈಗಾಗಲೇ ರಶ್ಮಿಕಾ ಕರ್ನಾಟಕ ಫ್ಯಾನ್ಸ್ ಕ್ಲಬ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಅಭಿಮಾನಿ ಸಂಘಗಳು ಮತ್ತು ಸದಸ್ಯರು ಈ ಸಿಡಿಪಿ ಹಾಕಿಕೊಂಡು, ರಶ್ಮಿಕಾ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net