ಮನೆಯಲ್ಲೇ ಇದ್ದು ದೀಪ ಬೆಳಗಿಸಲು ದರ್ಶನ್ ಕರೆ ... ಪಿಡುಗಿನಿಂದ ಪಾರಾಗುವ ಭರವಸೆ ಮೂಡಿಸೋಣ ಎಂದ ಡಿಬಾಸ್

Darshan Final
Published on

ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಮನೆಯಲ್ಲೇ ಇದ್ದು ದೀಪ ಬೆಳಗಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಕರೆ ನೀಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ಇದಕ್ಕೆ ಬೆಂಬಲ ಸೂಚಿಸುವುದರ ಜತೆಗೆ, ಮನೆಯಲ್ಲೇ ಇದ್ದು ದೀಪ ಬೆಳಗಿಸಲು ಮನವಿ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ನಮ್ಮ ಪ್ರಧಾನಿಗಳ ಕರೆಯಂತೆ ಕರೊನಾ ವೈರಸ್‌ಯಿಂದ ತುಂಬಿರುವ ಅಂಧಕಾರವನ್ನು, ಏಪ್ರಿಲ್ 5 ರಾತ್ರಿ 9 ಗಂಟೆಗೆ ನಿಮ್ಮ ಮನೆಯಂಗಳದಿಂದಲೇ ಮೋಂಬತ್ತಿ ಅಥವಾ ದೀಪಗಳನ್ನು ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆ ಎಲ್ಲರಲ್ಲೂ ಮೂಡಿಸೋಣ’ ಎಂದು ಹೇಳಿದ್ದಾರೆ.

ಈ ವಿಷಯವಾಗಿ ಇನ್ನೊಂದು ಟ್ವೀಟ್ ಮಾಡಿದ ಅವರು, ‘ಎಲ್ಲಾ ಭಾರತೀಯರ ಒಗ್ಗಟ್ಟಿನಿಂದ ಮಾತ್ರ ಈ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ. ಮನೆಯಲ್ಲಿಯೇ ಭದ್ರವಾಗಿರಿ, ನಿಮ್ಮ ನೆರೆಹೊರೆಯ ಜನರಿಗೆ ಬೆನ್ನೆಲುಬಾಗಿರಿ’ ಎಂದು ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net