ಸುಶಾಂತ್ ಹಣವನ್ನು ರಿಯಾ ದುರ್ಬಳಕೆ ಮಾಡಿಕೊಂಡಿದ್ದಿಕ್ಕೆ ಯಾವುದೇ ಸಾಕ್ಷ್ಯವಿಲ್ಲ: ಸಿಬಿಐ

Rhea Chakraborty-Final
Published on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಅಸಹಜ ಸಾವಿನ ತನಿಖೆ ಮಾಡುತ್ತಿರುವ ಸಿಬಿಐ, ಸುಶಾಂತ್​ ಅವರ ಹಣವನ್ನು ಅವರ ಗೆಳತಿ ರಿಯಾ ಚಕ್ರವರ್ತಿ ದುರ್ಬಳಕೆ ಮಾಡಿಕೊಂಡಿದ್ದಿಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಹೇಳಿಲ್ಲ.

ಈ ಹಿಂದೆ, ಸುಶಾಂತ್​ ಅವರ ತಂದೆ ಕೆಕೆ ಸಿಂಗ್​ ಅವರು ರಿಯಾ ಚಕ್ರವರ್ತಿ ಮತ್ತು ಇತರರ ವಿರುದ್ಧ ಸುಶಾಂತ್​ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರ ಕುರಿತಾ ಆರೋಪ ಮಾಡಿದ್ದರು. ಈ ವಿಷಯವಾಗಿ ಅವರು ಜುಲಥ 25ರಂದು ಬಿಹಾರ ಪೊಲೀಸರಿಗೆ ದೂರು ನೀಡಿದ್ದರು.

ತಮ್ಮ ದೂರಿನಲ್ಲಿ ರಿಯಾ ಚಕ್ರವರ್ತಿ, ಸುಶಾಂತ್​ ಬ್ಯಾಂಕ್​ ಖಾತೆಗಳಿಗೆ 15 ಕೋಟಿಯಷ್ಟು ಹಣವನ್ನು ಬೇರೆಬೇರೆ ಖಾತೆಗಳಿಗೆ ವರ್ಗಾಯಿಸುವುದರ ಜತೆಗೆ, ಆ ಹಣವನ್ನು ದುರ್ಬಳಕೆ ಮಾಡಿದ್ದಾರೆ ಮತ್ತು ಸುಶಾಂತ್​ ಆತ್ಮಹತ್ಯೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದರು.

ಈ ಕುರಿತು ತನಿಖೆ ನಡೆಸಿದ ಸಿಬಿಐಗೆ ಹಣ ದುರ್ಬಳಕೆ ಮಾಡಿಕೊಂಡ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲವಂತೆ. ಹಾಗೆಯೇ ಸುಶಾಂತ್​ ಮತ್ತು ಅವರ ಮ್ಯಾನೇಜರ್​ ದಿಶಾ ಸಾಲಿಯಾನ್​ ಅವರ ಸಾವಿಗೆ ನಂಟಿತ್ತಿದೆಂದು ಸುದ್ದಿಯಾಗಿತ್ತು. ಆದರೆ, ಸಿಬಿಐ ಈ ವಿಷಯವನ್ನು ಸಹ ತಳ್ಳಿ ಹಾಕಿದ್ದು, ಸುಶಾಂತ್​ ಸಾವು ಮತ್ತು ದಿಶಾ ಸಾಲಿಯಾನ್​ ಅವರ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇನ್ನು ಸುಶಾಂತ್​ಗಿದ್ದ ಮಾನಸಿಕ ಖಾಯಿಲೆ, ಡ್ರಗ್ಸ್​ ಚಟ ಮುಂತಾದ ವಿಷಯಗಳ ಕುರಿತು ಸಿಬಿಐ ಇದೀಗ ತನಿಖೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net