

ಮುಂಬೈ: ಕೆಲವು ದಿನಗಳ ಹಿಂದಷ್ಟೇ, ತಮ್ಮ ಹೊಸ ಚಿತ್ರದಲ್ಲಿ ರಾವಣನ ಮಾನವೀಯ ಗುಣಗಳನ್ನು ತೋರಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ಆ ವಿಷಯವಾಗಿ ವಕೀಲರೊಬ್ಬರು ಸೈಫ್ ಮೇಲೆ ಕೇಸ್ ಹಾಕಿದ್ದಾರೆ.
ಇದನ್ನೂ ಓದಿ: ಕನ್ನಡದ ಸಾಧಕನ ಬಯೋಪಿಕ್, ‘ದಿ ಬ್ರಿಡ್ಜ್ ಮ್ಯಾನ್’
'ಆದಿಪುರುಷ್' ಚಿತ್ರದಲ್ಲಿ ಸೈಫ್ ಅಲಿ ಖಾನ್, ರಾವಣನ ಪಾತ್ರ ಮಾಡುತ್ತಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು, ಚಿತ್ರದಲ್ಲಿ ರಾವಣನ ಮಾನವೀಯ ಗುಣಗಳನ್ನು ತೋರಿಸುವ ಪ್ರಯತ್ನವಾಗುತ್ತಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಲಕ್ಷ್ಮಣನು ಶೂರ್ಪನಖಿಯ ಮೂಗು ಕತ್ತರಿಸಿದ್ದರಿಂದಲೇ ರಾವಣ, ಸೀತೆಯನ್ನು ಅಪಹರಿಸಿದ ಎಂದು ಹೇಳುವ ಮೂಲಕ ರಾವಣನ ಕೆಲಸವನ್ನು ಸಮರ್ಥಿಸಿಕೊಂಡಿದ್ದರು.
ಈ ಸಂದರ್ಶನ ಪ್ರಕಟವಾದ ಸಂದರ್ಭದಲ್ಲೇ, ಇಂಟರ್ನೆಟ್ನಲ್ಲಿ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈಗ ಹಿಮಾಂಶು ಶ್ರೀವಾತ್ಸವ ಎನ್ನುವವರು ಉತ್ತರ ಪ್ರದೇಶದ ಜಾನ್ಪುರ್ ಜಿಲ್ಲೆಯ ಅಡಿಷನಲ್ ಚೀಫ್ ಜುಡಿಶಿಯಲ್ ಮೆಜಿಸ್ಟ್ರೇಟ್ ಕೋರ್ಟ್ನಲ್ಲಿ ಸೈಫ್ ವಿರುದ್ಧ ಕೇಸ್ ಹಾಕಿದ್ದಾರೆ ಮತ್ತು ಡಿಸೆಂಬರ್ 23ರಂದು ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ಹೃತಿಕ್ ರೋಷನ್ ಕಾಲೆಳೆದ ಕಂಗನಾ ರಣಾವತ್!
ಅದೇನೋ ಗೊತ್ತಿಲ್ಲ, ಸೈಫ್ ಅಲಿ ಖಾನ್ ಇತ್ತೀನಚಿನ ದಿನಗಳಲ್ಲಿ ಒಂದಲ್ಲ ಒಂದು ವಿವಾದದಲ್ಲಿ ಸಿಕ್ಕಿಬೀಳುತ್ತಿದ್ದಾರೆ. ಎರಡು ತಿಂಗಳುಗಳ ಹಿಂದೆ ಆತ್ಮಚರಿತ್ರೆ ಬರೆಯುವುದಾಗಿ ಸೈಫ್ ಹೇಳಿಕೊಂಡಿದ್ದರು. ಸೈಫ್ ಅದೇನು ಸಾಹಸ ಮಾಡಿದ್ದಾರೆ ಎಂಬ ಕಾರಣಕ್ಕೆ ಆತ್ಮಚರಿತ್ರೆ ಬರೆದುಕೊಳ್ಳುತ್ತಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದರು. ಕೊನೆಗೆ, ಆತ್ಮಚರಿತ್ರೆಯನ್ನು ಸದ್ಯ ಬರೆಯುತ್ತಿಲ್ಲ ಎಂದು ಹೇಳುವ ಮೂಲಕ ಈ ವಿವಾದ ಬಗೆಹರಿದಿತ್ತು.