ನಿನ್ನೆ (ಡಿ.15) ಟ್ರೇಲರ್ ಬಿಡುಗಡೆಗೊಳಿಸಿರುವ 45 ಚಿತ್ರವು, ಶಿವರಾಜ್ಕುಮಾರ್, ರಾಜ್ ಬಿ.ಶೆಟ್ಟಿ ಮತ್ತು ಉಪೇಂದ್ರ ಅವರ ಸಂಗಮಕ್ಕೆ ಸಾಕ್ಷಿಯಾಗಿದೆ. ಸ್ಯಾಂಡಲ್ವುಡ್ನ ಸ್ಟಾರ್ ನಟರ ಕಾಂಬೊ ಮೇಲೆ ಸದ್ಯ ಚಿತ್ರಪ್ರೇಮಿಗಳ ಕಣ್ಣು ಬಿದ್ದಿದ್ದು, ಈಗಾಗಲೇ ಹೊರಬಿದ್ದಿರುವ ಟ್ರೇಲರ್ ಹಲವು ವಿಶೇಷತೆಗಳಿಂದ ಕೂಡಿದ್ದು, ವಿಎಫ್ಎಕ್ಸ್ ಕೆಲಸಗಳಿಂದ ನೋಡುಗರ ಗಮನವನ್ನು ಸೆಳೆದಿದೆ.