ಬಿಪಿ, ಹೃದಯ ಬಡಿತ ನಾರ್ಮಲ್​ ಇತ್ತು: ಪುನೀತ್​ ಸಾವಿಗೂ ಮುನ್ನ ಪರೀಸಿದ ವೈದ್ಯ ರಮಣರಾವ್​ ಮಾತು

Puneeth Doctor
Published on

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಕುಟುಂಬದ ವೈದ್ಯರಾದ ಡಾ. ಬಿ. ರಮಣ ರಾವ್​ ಅವರ ಕ್ಲಿನಿಕ್​ಗೆ ಬಂದಿದ್ದರು. ಪರೀೆ ನಡೆಸಿದಾಗ ಹೃದಯ ಬಡಿತ, ನಾಡಿ ಮಿಡಿತ ಹಾಗೂ ರಕ್ತದ ಒತ್ತಡ ಎಲ್ಲವೂ ಸಾಮಾನ್ಯವಾಗಿತ್ತು.

ಇಸಿಜಿ ಮಾಡಿದಾಗ ಸಮಸ್ಯೆ ಇರುವುದು ಗೊತ್ತಾಯಿತು. ನಂತರ ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದರು. ಅ. 29ರ ಬೆಳಗ್ಗೆ 11.20ರ ಸುಮಾರಿಗೆ ಪುನೀತ್​ ರಾಜ್​ಕುಮಾರ್​ ಬಂದಾಗ ಆಯಾಸವಾಗಿದೆ ಎಂದು ಹೇಳಿದರು. ಪರೀೆ ನಡೆಸಿದಾಗ ಎಲ್ಲವೂ ಸಾಮಾನ್ಯವಾಗಿತ್ತು. ಇಸಿಜಿ ವರದಿಯಲ್ಲಿ ಒತ್ತಡ "ಸ್ಟ್ರೆ$ನ್​' ಇರುವುದನ್ನು ತೋರಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆ ತಲುಪುವಷ್ಟರಲ್ಲಿ ಹೃದಯ ಸ್ತಂಭನವಾಗಿದೆ ಎಂದು ಡಾ. ಬಿ. ರಮಣ ರಾವ್​ ಹೇಳಿದ್ದಾರೆ.

ಪುನೀತ್​ ಅವರು ಪತ್ನಿ ಅಶ್ವಿನಿಯೊಂದಿಗೆ ಕ್ಲಿನಿಕ್​ಗೆ ಬಂದಾಗ, ಸ್ವಲ್ಪ ಆಯಾಸವಾಗಿದೆ ಎಂದು ಹೇಳಿದರು. ಪರೀೆಯಲ್ಲಿ ಅವರ ರಕ್ತದೊತ್ತಡ 150/92 ಇತ್ತು. ಇದು ಸಾಮಾನ್ಯವಾಗಿದೆ. ಅವರು ಬೆವರುತ್ತಿರುವ ಬಗ್ಗೆ ಕೇಳಿದಾಗ, ವ್ಯಾಯಾಮ ಮಾಡಿದ್ದರಿಂದ ಸಾಮಾನ್ಯವಾಗಿ ಬೆವರು ಬರುತ್ತದೆ. ಮತ್ತು ಜಿಮ್​ನಿಂದ ನೇರವಾಗಿ ಬಂದಿರುವೆ ಎಂದು ಹೇಳಿದರು. ಆದರೆ ನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಅಲ್ಲದೇ ಅವರ ಹೃದಯಬಡಿತ ಸಾಮಾನ್ಯವಾಗಿಯೇ ಇತ್ತು. ಶ್ವಾಸಕೋಶಗಳು ಸಹ ಸಹಜಸ್ಥಿತಿಯಲ್ಲಿತ್ತು. ಎಂದಿನಂತೆ ವ್ಯಾಯಾಮ ಹಾಗೂ ಬಾಕ್ಸಿಂಗ್​ ನಂತರ ಸ್ಪಲ್ಪ ಹಬೆಯನ್ನು ತೆಗೆದುಕೊಂಡಿದ್ದಾಗಿ ತಿಳಿಸಿದರು. ತಕ್ಷಣವೇ ಇಸಿಜಿ ಮಾಡಲಾಯಿತು. ವರದಿಯಲ್ಲಿ ಒತ್ತಡ ಇರುವುದು ತಿಳಿದು, ವಿಕ್ರಂ ಆಸ್ಪತ್ರೆಗೆ ಸೂಚಿಸಿದೆ. ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದರು. ಆದರೆ ದುರಾದೃಷ್ಟವಶಾತ್​ ಅಷ್ಟ್ರರಲ್ಲಿ ಅವರ ಹೃದಯ ಸ್ತಂಭನವಾಗಿತ್ತು. ಅವರು ಬದುಕುಳಿಯಲಿಲ್ಲ ಎಂದು ವಿವರಿಸಿದರು.

ಇದೇ ವೇಳೆ ಡಾ. ರಾಜ್​ಕುಮಾರ್​ ಅವರು ನಿಧನ ಆಗಿದ್ದ ಸಂದರ್ಭವನ್ನು ಸ್ಮರಿಸಿದ ಅವರು, ಪುನೀತ್​ ಆರೋಗ್ಯವಾಗಿದ್ದಂತಹ ವ್ಯಕ್ತಿ, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಸಕಾರಾತ್ಮಕ ಅಲೋಚನೆಗಳೊಂದಿಗೆ ಸಂತೋಷದ ಮನೋಭಾವ ಹೊಂದಿದ್ದ ಅವರು ಈ ರೀತಿ ಅಗಲುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ಗದ್ಗದಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net