ವಂದೇ ಮಾತರಂ ವಿವಾದ: ಬೇರೆ ಧರ್ಮದವರು ಹಾಡಲ್ಲ ಎಂದು ನಿಮಗೆ ಹೇಗೆ ಗೊತ್ತು? ಶರ್ಮಿಳಾ ಟ್ಯಾಗೋರ್ ವಿರುದ್ಧ ಮುಗಿಬಿದ್ದ ಮುಖೇಶ್ ಖನ್ನಾ! Vande Mataram controversy
ಶರ್ಮಿಳಾ ಟ್ಯಾಗೋರ್ ವಿರುದ್ಧ ಮುಗಿಬಿದ್ದ ಮುಖೇಶ್ ಖನ್ನಾ!
Published on:
Copied
Follow Us
ಮುಂಬೈ: ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಕುರಿತ ಚರ್ಚೆ (Vande Mataram controversy) ಯಲ್ಲಿ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ನೀಡಿದ ಹೇಳಿಕೆ ಈಗ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಶರ್ಮಿಳಾ ಟ್ಯಾಗೋರ್ ಮಾತಿಗೆ 'ಮಹಾಭಾರತ' ಖ್ಯಾತಿಯ ಭೀಷ್ಮ 'ಶಕ್ತಿಮಾನ್' ಮುಖೇಶ್ ಖನ್ನಾ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ನಟಿಯ ಹಿನ್ನೆಲೆಯನ್ನು ಕೆದಕಿ ನೇರವಾಗಿಯೇ ಪ್ರಶ್ನೆ ಮಾಡಿರುವ ಮುಖೇಶ್ ಖನ್ನಾ ಅವರ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿವೆ.
ಭಾರತದ ಧಾರ್ಮಿಕ ವೈವಿಧ್ಯತೆ ಮತ್ತು ಬೇರೆ ಬೇರೆ ಸಮುದಾಯಗಳ ಮನಸ್ಸಿನಲ್ಲಿರುವ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, 'ವಂದೇ ಮಾತರಂ' ಗೀತೆಯ ಕೇವಲ ಆರಂಭಿಕ ಚರಣಗಳನ್ನು ಮಾತ್ರ ಹಾಡಬೇಕು ಎನ್ನುವುದು ಶರ್ಮಿಳಾ ಟ್ಯಾಗೋರ್ ಅವರ ವಾದವಾಗಿತ್ತು.
ಶರ್ಮಿಳಾ ವಿರುದ್ಧ ಮುಖೇಶ್ ಖನ್ನಾ ಗರಂ!
ಮುಖೇಶ್ ಖನ್ನಾ, ಶರ್ಮಿಳಾ ಟ್ಯಾಗೋರ್ ಅವರ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಬೇರೆ ಧರ್ಮದವರು ಇದನ್ನು ಒಪ್ಪುವುದಿಲ್ಲ ಅಂತ ಇವರೇಕೆ ಅಂದುಕೊಳ್ಳಬೇಕು? ಎಂದು ಪ್ರಶ್ನಿಸಿದ ಮುಖೇಶ್, ನೇರವಾಗಿ ಅವರ ವೈಯಕ್ತಿಕ ಬದುಕಿನ ಉದಾಹರಣೆಗಳನ್ನು ಮುಂದಿಟ್ಟಿದ್ದಾರೆ.
ಮದುವೆಯಾದ ಮೇಲಷ್ಟೇ ನಿಮಗೆ ಇಸ್ಲಾಂ ಧರ್ಮದ ಬಗ್ಗೆ ಗೊತ್ತಾಯ್ತಾ? ಪಟೌಡಿ ಕುಟುಂಬದ ಜೊತೆ ಮದುವೆಯಾಗಿ ಆಯೇಷಾ ಬೇಗಂ ಆದ ಮೇಲೆ, ಮುಸ್ಲಿಮರ ನಂಬಿಕೆಗಳು ಬೇರೆ ಅಂತ ಈಗ ನಿಮಗೆ ನೆನಪಾಯ್ತಾ? ಇಡೀ ಜೀವನ ಹಿಂದೂ ಸಂಪ್ರದಾಯದೊಂದಿಗೆ ಬದುಕಿ, ಈಗ ಇದ್ದಕ್ಕಿದ್ದಂತೆ ಬೇರೆ ಧರ್ಮದವರ ಕಾಳಜಿ ಏಕೆ ಮಾಡುತ್ತಿದ್ದೀರಿ? ಎಂದು ಮುಖೇಶ್ ಖನ್ನಾ ಖಡಕ್ ಆಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ನೀವು ಬೆಳೆದಿದ್ದು ಬಂಗಾಳದಲ್ಲಿ. ಅಲ್ಲಿ ಕಾಳಿ ಪೂಜೆಯನ್ನು ಎಷ್ಟು ಭಕ್ತಿ ಮತ್ತು ದೊಡ್ಡ ಮಟ್ಟದಲ್ಲಿ ಆಚರಿಸುತ್ತಾರೆ ಅನ್ನೋದು ನಿಮಗೆ ಗೊತ್ತಿಲ್ಲವೇ? ಬಂಗಾಳಿ ಸಂಸ್ಕೃತಿಯಲ್ಲೇ ಬೆಳೆದ ನಿಮಗೆ, ಈಗ ಮಾತ್ರ ಬೇರೆ ಧರ್ಮದವರು ಇದನ್ನು ಒಪ್ಪಲ್ಲ ಅಂತ ಹೇಗೆನಿಸಿತು? ಎಂದು ಪ್ರಶ್ನಿಸಿದ್ದಾರೆ.
ರಾಜಕಾರಣಿಗಳ ವಿರುದ್ಧವೂ ಕಿಡಿ
ಇದೇ ವೇಳೆ ರಾಜಕೀಯ ಪಕ್ಷಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಮುಖೇಶ್ ಖನ್ನಾ, ರಾಜಕಾರಣಿಗಳು ಯಾವುದೇ ಒಂದು ಸ್ಪಷ್ಟ ನಿಲುವು ತಾಳದೆ ಕೇವಲ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಸ್ಲಿಮರ ವೋಟ್‌ಗಾಗಿ ಈ ರೀತಿಯ ಹೇಳಿಕೆಗಳನ್ನು ಬೆಂಬಲಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ, (ಏಜನ್ಸೀಸ್).