ಇದರೊಂದಿಗೆ ನಟಿ ಮತ್ತು ಸಂಸದೆ ಕಂಗನಾ ರಣವಾತ್ ಸಹ ನಿಮ್ಮ ಸಹೋದರನಿಗೆ ಬಿಕಿನಿ ಧರಿಸಿ ರಾಖಿ ಕಟ್ಟುತ್ತೀರಾ..ಭಾರತೀಯ ಸಂಪ್ರದಾಯದಲ್ಲಿ ಎಷ್ಟೊಂದು ಬಟ್ಟೆಗಳಿವೆ. ಇದೇ ಬಟ್ಟೆ ಧರಿಸಿದ್ದು ಯಾಕೆ. ಸಲ್ವಾರ್, ಛೋಲಿ, ದುಪ್ಪಟ್ಟಾ, ಸೀರೆ ಸೇರಿದಂತೆ ತರಹೇವಾರಿ ಸಾಂಪ್ರದಾಯಿಕ ಬಟ್ಟೆ ಇದೆ. ಅದೆಲ್ಲದರ ಮಧ್ಯೆ ಇದೇ ಬಟ್ಟೆಯ ಆಯ್ಕೆ ಯಾಕೆ. ನನಗೇನೋ ಈ ಜಾಹೀರಾತನ್ನು ಬೇಕಂತಲೇ, ಅಸಹ್ಯಪಡಿಸುವ ಉದ್ದೇಶದಿಂದಲೇ ತರಲಾಗಿದೆ ಎಂದು ಕಂಗನಾ ಹೇಳಿದ್ದರು.