

ಪ್ರಮುಖ ಮುಖ್ಯಾಂಶಗಳು
ಬಾಲಿವುಡ್ ನಟಿ ಕೃತಿ ಸನೂನ್ ಅವರು ರಕ್ಷಾ ಬಂಧನದ ಜಾಹೀರಾತೊಂದರಲ್ಲಿ ನಟಿಸಿದ್ದು, ಅದರಲ್ಲಿ ಅವರು ಧರಿಸಿರುವ ಡೀಪ್ ವೀ ನೆಕ್ ಬ್ಲೌಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಹಬ್ಬದ ದಿನ ಇಂತಹ ಬಟ್ಟೆ ಧರಿಸೋದು ಸೂಕ್ತವೇ, ಅರ್ಧಂಬರ್ಧ ಬಟ್ಟೆ ಧರಿಸಿ ಯಾವುದಾದರೂ ಹಬ್ಬ ಮಾಡೋದು ನೋಡಿದ್ದೀರಾ ಎನ್ನುವ ಆಕ್ಷೇಪಗಳು ವ್ಯಕ್ತವಾಗುತ್ತಿದೆ.
ರಕ್ಷಾ ಬಂಧನಕ್ಕೆ ಮಾಡಲಾದ ಈ ಜಾಹೀರಾತನ್ನು...ಬೇರೆ ಧರ್ಮದ ಹಬ್ಬದ ಜಾಹೀರಾತಿಗೂ ಮಾಡಲಿ, ಉಡುಪು ಧರಿಸಿರುವ ವಿಧಾನವೂ ಹೀಗೆ ಇರಲಿ ಎಂದು ಹೇಳಿದ್ದಾರೆ.
ಮತ್ತೊಬ್ಬರು ಕೃತಿ ಸನೂನ್ ಅವರನ್ನು ನೇರವಾಗಿ ಟ್ಯಾಗ್ ಮಾಡಿ ನಟಿಗೆ ಹೀಗೆ ನಟಿಸಲು ನಾಚಿಕೆಯಾಗಬೇಕು. ಹೀಗೆ ಬಟ್ಟೆ ಧರಿಸಿ ಯಾರು ಹಬ್ಬವನ್ನು ಆಚರಿಸುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.