

ಪ್ರಮುಖ ಮುಖ್ಯಾಂಶಗಳು
ಇದರ ಬೆನ್ನಲ್ಲೇ, ಮಾಧ್ಯಮಗಳಲ್ಲಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗೋವಿಂದ ಅವರ ಎರಡನೇ ಮದುವೆ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಈ ಎಲ್ಲಾ ಬೆಳವಣಿಗೆಗಳು ಮತ್ತು ವಿನಾಕಾರಣ ಹಬ್ಬಿದ ವಾದ-ವಿವಾದಗಳೇ ಗೋವಿಂದ ಈ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಲು ಕಾರಣವಾಗಿದೆ.
ಸುಳ್ಳು ಸುದ್ದಿ ಹಬ್ಬಿಸುವವರ ಬ್ಯಾಂಕ್ ಖಾತೆಗಳ ಮೇಲೆ ನಿರ್ಬಂಧ ಅಥವಾ ನ್ಯಾಯಾಲಯದ ಆದೇಶ ತರಬಹುದು. ಆಸ್ತಿ ಖರೀದಿ-ಮಾರಾಟದ ಮೇಲೆ ನಿರ್ಬಂಧ ಹಾಗೂ ಪಾಸ್‌ಪೋರ್ಟ್-ಸಂಬಂಧಿತ ಕಾನೂನು ಕ್ರಮಗಳನ್ನು ಎದುರಿಸಬೇಕಾಗಬಹುದು.
ಸಿನಿಮಾ ರಂಗದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಗೋವಿಂದ, ತಮ್ಮ ಇಮೇಜ್ ಹಾಗೂ ಕೀರ್ತಿಗೆ ಮಸಿ ಬಳಿಯುವವರ ವಿರುದ್ಧ ಕಡ್ಡಿಮುರಿದಂತೆ ಮಾತನಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುವವರಿಗೆ ಇದೀಗ ದೊಡ್ಡ ಶಾಕ್ ಸಿಕ್ಕಿದಂತಾಗಿದೆ, (ಏಜನ್ಸೀಸ್).