“ಹಿಂದಿನಿಂದ ಫೋಟೋ ತೆಗೆಯಬೇಡಿ!” ಪಾಪರಾಜಿಗಳ ವಿರುದ್ಧ ಫರಾಹ್ ಖಾನ್ ಆಕ್ರೋಶ; ಸಲ್ಮಾನ್ ಮಾತು ನೆನಪಿಸಿದ ನಿರ್ದೇಶಕಿ! Farah Khan

ಹಿಂದಿನಿಂದ ಫೋಟೋ ತೆಗೆಯುವ ಪಾಪರಾಜಿಗಳ ಅಸಭ್ಯ ವರ್ತನೆ ವಿರುದ್ಧ ನಿರ್ದೇಶಕಿ ಫರಾಹ್ ಖಾನ್ ಆಕ್ರೋಶ. ಬಿಗ್ ಬಾಸ್‌ನಲ್ಲಿ ಸಲ್ಮಾನ್ ಖಾನ್ ನೀಡಿದ ಎಚ್ಚರಿಕೆಯನ್ನು ನೆನಪಿಸಿದ ಬಾಲಿವುಡ್​ ನಿರ್ದೇಶಕಿ.
Director Farah Khan reprimanded paparazzi for taking photos from behind.
ಹಿಂದಿನಿಂದ ಫೋಟೋ ತೆಗೆಯುವ ಪಾಪರಾಜಿಗಳ ಕ್ರಮವನ್ನು ವಿರೋಧಿಸಿ ತರಾಟೆಗೆ ತೆಗೆದುಕೊಂಡ ನಿರ್ದೇಶಕಿ ಫರಾಹ್ ಖಾನ್.
Published on: 

ಮುಂಬೈ: ಸೆಲೆಬ್ರಿಟಿಗಳು ಎಲ್ಲಿಗೆ ಹೋದರೂ ಕ್ಯಾಮೆರಾ ಹಿಡಿದು ಬೆನ್ನುಹತ್ತುವ ಪಾಪರಾಜಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಸ್ಟಾರ್‌ಗಳ ಪ್ರತಿ ಹೆಜ್ಜೆಯನ್ನೂ, ಪ್ರತಿಯೊಂದು ಆ್ಯಂಗಲ್‌ನಲ್ಲೂ ಸೆರೆಹಿಡಿಯುವ ಭರದಲ್ಲಿ ಕೆಲವೊಮ್ಮೆ ಮಿತಿಮೀರಿ ನಡೆದುಕೊಳ್ಳುವ ಘಟನೆ ವರದಿಯಾಗುತ್ತಲೇಯಿದೆ.

ಇತ್ತೀಚೆಗೆ ಖ್ಯಾತ ಬಾಲಿವುಡ್​ ನಿರ್ದೇಶಕಿ ಫರಾಹ್ ಖಾನ್ ಕೂಡ ಇದೇ ರೀತಿಯ ಅನುಭವ ಎದುರಿಸಿ, ಪಾಪರಾಜಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಫರಾಹ್ ಕೋಪಕ್ಕೆ ಕಾರಣವೇನು?

ಇತ್ತೀಚೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ಪಾಪಾರಾಜಿಗಳು ಫರಾಹ್ ಖಾನ್ ಅವರ ಫೋಟೋ ಹಾಗೂ ವಿಡಿಯೀಗಳನ್ನು ಸೆರೆಹಿಡಿಯಲು ಮುಂದಾಗಿದ್ದಾರೆ. ಆದರೆ, ಅವರು ಮುಂದೆ ನಿಂತು ಫೋಟೋ ತೆಗೆಯುವ ಬದಲು, ಹಿಂದಿನಿಂದ (Back Shots) ಚಿತ್ರೀಕರಿಸಲು ಪ್ರಯತ್ನಿಸಿದ್ದಾರೆ. ಇದನ್ನು ಗಮನಿಸಿದ ಫರಾಹ್ ಖಾನ್ ತಕ್ಷಣವೇ ಗರಂ ಆಗಿದ್ದಾರೆ.

ಅವರನ್ನು ಪ್ರಶ್ನಿಸುತ್ತಾ, "ಸಲ್ಮಾನ್ ಭಾಯ್ ಹೇಳಿದ್ದರಲ್ಲವೇ, ಹಿಂದಿನಿಂದ ಫೋಟೋ ತೆಗೆಯಬಾರದು ಅಂತ?" ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಾವು ಬ್ಯಾಕ್​ ಶಾಟ್​​ಗಳನ್ನು ತೀವ್ರವಾಗಿ ವಿರೋಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

Also Read
"ನೋ UPI ಡೇ" ಪ್ರತಿಭಟನೆಗೆ ಬ್ರೇಕ್‌: ಹೋರಾಟ ಹಿಂಪಡೆದ ವ್ಯಾಪಾರಿಗಳು; ನಿರ್ಮಲಾ ಸೀತಾರಾಮನ್​ ಜೊತೆ ನಡೆದ ಸಭೆಯಲ್ಲಿ ಆಗಿದ್ದೇನು? No UPI Day
Director Farah Khan reprimanded paparazzi for taking photos from behind.

ಬಿಗ್ ಬಾಸ್‌ನಲ್ಲಿ ಸಲ್ಮಾನ್ ಖಾನ್ ಎತ್ತಿದ್ದ ಗಂಭೀರ ಪ್ರಶ್ನೆ!

ಇತ್ತೀಚೆಗೆ ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಕೂಡ ಈ ಅಸಭ್ಯ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಹಿಳಾ ಸೆಲೆಬ್ರಿಟಿಗಳ 'ಹಿಪ್ ಶಾಟ್ಸ್', ಕಾಲುಗಳ ಫೋಟೋ ಮತ್ತು ಮುಖ್ಯವಾಗಿ ಹಿಂದಿನಿಂದ ಫೋಟೋ ತೆಗೆಯುವ ಪಾಪರಾಜಿಗಳ ಚಾಳಿಗೆ ಬ್ರೇಕ್ ಹಾಕಬೇಕು ಎಂದು ಎಚ್ಚರಿಸಿದ್ದರು.

ನಟಿ ನೇಹಾ ಧೂಪಿಯಾ, ಸಾಯಿ ಮಂಜ್ರೇಕರ್ ಸೇರಿದಂತೆ ಹಲವು ನಟಿಯರು ಈ ಹಿಂದೆ ಇದೇ ರೀತಿಯ ಮುಜುಗರವನ್ನು ಎದುರಿಸಿದ್ದನ್ನು ಸಲ್ಮಾನ್ ನೆನಪಿಸಿದ್ದರು. "ಯಾವ ನಾಯಕಿಯರೂ ಇದನ್ನು ಇಷ್ಟಪಡುವುದಿಲ್ಲ. ಇದು ಯಾವ ರೀತಿಯ ಮನಸ್ಥಿತಿ?" ಎಂದು ಪ್ರಶ್ನಿಸಿದ್ದ ಸಲ್ಮಾನ್, ಇಂತಹ ಅಸಹ್ಯ ವರ್ತನೆಗಳನ್ನು ನಿಲ್ಲಿಸುವಂತೆ ಗದರಿದ್ದರು.

ನಟಿಯರ ಮೇಲಿನ ಮುಜುಗರದ ಕಣ್ಣು!

ಕೇವಲ ಫರಾಹ್ ಖಾನ್ ಮಾತ್ರವಲ್ಲ, ಇತ್ತೀಚೆಗೆ ನಟಿ ಮಾನುಷಿ ಚಿಲ್ಲರ್ ಕೂಡ ಪಾಪರಾಜಿಗಳು ಹಿಂದಿನಿಂದ ತೆಗೆದಿದ್ದ ಫೋಟೋಗಳನ್ನು ತಕ್ಷಣ ಡಿಲಿಟ್ ಮಾಡುವಂತೆ ಕೇಳಿಕೊಂಡಿದ್ದರು. ನೇಹಾ ಧೂಪಿಯಾ ಕೂಡ ಇಷ್ಟು ಅಸಭ್ಯವಾಗಿ ಹಿಂದಿನಿಂದ ಫೋಟೋ ಯಾರು ತೆಗೆಯುತ್ತಾರೆ? ಎಂದು ಪ್ರಶ್ನಿಸಿದ್ದರು. ಸೆಲೆಬ್ರಿಟಿಗಳ ಈ ಮುಕ್ತ ಆಕ್ರೋಶವು ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಸಾರ್ವಜನಿಕವಾಗಿ ಓಡಾಡುವ ಸೆಲೆಬ್ರಿಟಿಗಳಿಗೆ ಗೌರವ ನೀಡುವುದು ಎಷ್ಟು ಮುಖ್ಯವೋ, ಅವರ ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಗೌಪ್ಯತೆಗೆ ಧಕ್ಕೆ ತರದಂತೆ ನಡೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಪಾಪಾರಾಜಿಗಳ ಈ ಬ್ಯಾಕ್​ ಶಾಟ್​​ನಿಂದ ನಟಿಯರಿಗೆ ಉಂಟಾಗುತ್ತಿರುವ ಮುಜುಗರವನ್ನು ಫರಾಹ್ ಖಾನ್ ದಿಟ್ಟತನದಿಂದ ಪ್ರಶ್ನಿಸಿರುವುದು ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net