ಇನ್ಯಾವತ್ತೂ ಅಂತಹ ಪಾತ್ರಗಳನ್ನು ಮಾಡೋದಿಲ್ಲ! ಶಾಕಿಂಗ್​ ಹೇಳಿಕೆ ಕೊಟ್ಟ ಬಾಲಿವುಡ್​ ಬೋಲ್ಡ್​ ಬ್ಯೂಟಿ | Disha Patani

ಇದೀಗ ಬಾಲಿವುಡ್‌ನಲ್ಲಿ ಹತ್ತು ವರ್ಷಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ, ಒಂದು ಮಹತ್ವದ ನಿರ್ಧಾರವನ್ನೇ ಕೈಗೊಂಡಿದ್ದಾರೆ.
 Disha Patani
ಇನ್ಯಾವತ್ತೂ ಅಂತಹ ಪಾತ್ರಗಳನ್ನು ಮಾಡೋದಿಲ್ಲ! ಶಾಕಿಂಗ್​ ಹೇಳಿಕೆ ನೀಡಿದ ಬಾಲಿವುಡ್​ ಬೋಲ್ಡ್​ ಬ್ಯೂಟಿ | Disha Patani
Published on: 

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುವ ಬಾಲಿವುಡ್ ಬ್ಯೂಟಿ, ಹಾಟ್​ ಬೆಡಗಿ ದಿಶಾ ಪಟಾನಿ (Disha Patani), ತಮ್ಮ ಸಿನಿಮಾ ಸುದ್ದಿಗಳಿಗಿಂತಲೂ ಹೆಚ್ಚಾಗಿ ಬೋಲ್ಡ್​ ಅವತಾರಗಳಿಂದಲೇ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿರುತ್ತಾರೆ. ಈ ಮಧ್ಯೆ, ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿಯ ಬಿಚ್ಚುನುಡಿ ಸದ್ಯ ಅವರ ಫ್ಯಾನ್ಸ್ ಮತ್ತು ಹಲವರ ಅಚ್ಚರಿಗೆ ಕಾರಣವಾಗಿದೆ.

'ಎಂ.ಎಸ್​ ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ' ಚಿತ್ರದ ಮೂಲಕ ಹಿಂದಿ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಈ ಬ್ಯೂಟಿ, ಬಹಳ ಕಡಿಮೆ ಸಮಯದಲ್ಲಿ ಭರ್ಜರಿ ಸಕ್ಸಸ್​ ಮತ್ತು ಜನಪ್ರಿಯತೆ ಗಿಟ್ಟಿಸಿಕೊಂಡರು. ತನ್ನ ಗ್ಲಾಮರ್, ಹಾಟ್​ ಲುಕ್​ ಹಾಗೂ ಫಿಟ್ನೆಸ್​ನಿಂದಲೇ ಪಡ್ಡೆ ಹುಡಗರ ನಿದ್ದೆಗಡಿಸುವ ದಿಶಾ, ಇದೀಗ ಬಾಲಿವುಡ್‌ನಲ್ಲಿ ಹತ್ತು ವರ್ಷಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ, ಒಂದು ಮಹತ್ವದ ನಿರ್ಧಾರವನ್ನೇ ಕೈಗೊಂಡಿದ್ದಾರೆ.

ಎಂ.ಎಸ್. ಧೋನಿ ಚಿತ್ರದ ಸಮಯದಲ್ಲಿ​ ನನಗೆ ಎಲ್ಲವೂ ಹೊಸತು. ಶೂಟಿಂಗ್ ಸೆಟ್ ಹೇಗೆ ವರ್ಕ್​ ಆಗುತ್ತದೆ ಅಂತ ಅಷ್ಟಾಗಿ ಗೊತ್ತಿರಲಿಲ್ಲ. ಕ್ಯಾಮೆರಾ ಎದುರಿಸುವುದು ಹೇಗೆ, ಪಾತ್ರವನ್ನು ಅರ್ಥ ಮಾಡಿಕೊಳ್ಳಬೇಕು, ನಿರ್ದೇಶಕರ ಸೂಚನೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂಬುದನ್ನು ಈಗಷ್ಟೇ ಕಲಿತಿರುವೆ. ಆ ದಿನಗಳಲ್ಲಿ ನನಗೆ ಇಷ್ಟ ಬಂದಂತೆ ನಟಿಸುತ್ತಿದ್ದೆ. ಈಗ ವೃತ್ತಿಯ ಬಗ್ಗೆ ಸಂಪೂರ್ಣ ತಿಳುವಳಿಕೆ ಬಂದಿದೆ. ಆತ್ಮವಿಶ್ವಾಸವೂ ಹೆಚ್ಚಾಗಿದೆ ಎಂದರು.

Also Read
ಯಾರೀ ಕ್ರಿಸ್ಟಾ ಪೈಕ್​? 2 ಬಾರಿ ವಿಷದ ಇಂಜೆಕ್ಷನ್ ಕೊಟ್ರೂ ಬದುಕುಳಿದ ಮಹಿಳಾ ಕೈದಿ ಮಾಡಿದ ಅಪರಾಧವೇನು? | ​Christa Pike
 Disha Patani

"ನನಗೆ ಕೇವಲ ಗ್ಲಾಮರ್‌ಗೆ ಒತ್ತು ನೀಡುವ ಬದಲು ಇಡೀ ಸಿನಿಮಾವನ್ನೇ ಕೊಂಡೊಯ್ಯುವ ಪಾತ್ರದಲ್ಲಿ ನಟಿಸುವ ಆಸೆಯಿದೆ. ನಾನು ಸೈಕಲಾಜಿಕಲ್ ಡ್ರಾಮಾಗಳು, ಪಾತ್ರ-ಆಧಾರಿತ ಥ್ರಿಲ್ಲರ್‌ಗಳು ಮತ್ತು ನನ್ನ ನಟನೆಯನ್ನು ಹೊಸ ದಿಕ್ಕಿನಲ್ಲಿ ನೋಡಲು ಬಯಸುವೆ. ಯಾವುದೋ ಒಂದೇ ರೋಲ್​ ಅಥವಾ ಗ್ಲಾಮರಸ್​ ಇಮೇಜ್​ನಲ್ಲಿ ಕಾಣಿಸಿಕೊಳ್ಳಲು ನನಗೆ ಇಷ್ಟವಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net