ಯಾರೀ ಕ್ರಿಸ್ಟಾ ಪೈಕ್​? 2 ಬಾರಿ ವಿಷದ ಇಂಜೆಕ್ಷನ್ ಕೊಟ್ರೂ ಬದುಕುಳಿದ ಮಹಿಳಾ ಕೈದಿ ಮಾಡಿದ ಅಪರಾಧವೇನು? | ​Christa Pike

ಪೈಕ್​ಳನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡ ಹೋದ ಕೈದಿಯ ಪರ ವಕೀಲರು ಮತ್ತು ಪೊಲೀಸರಿಗೆ ಆಕೆಗೆ ಮರಳಿದ ಪ್ರಜ್ಞೆ ಕಂಡು ಅಚ್ಚರಿ ಉಂಟಾಗಿದೆ. ಈ ಕುರಿತಂತೆ ಮಹಿಳೆಯ ಪರ ವಕೀಲರು ಮಾಧ್ಯಮಗಳ ಮುಂದೆ ಕೈದಿ ಬದುಕುಳಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
Christa Pike
ಯಾರೀ ಕ್ರಿಸ್ಟಾ ಪೈಕ್​? 2 ಬಾರಿ ವಿಷದ ಇಂಜೆಕ್ಷನ್ ಕೊಟ್ರೂ ಬದುಕುಳಿದ ಮಹಿಳಾ ಕೈದಿ ಮಾಡಿದ ಅಪರಾಧವೇನು?
Published on: 
  • ಎರಡು ಬಾರಿ ವಿಷದ ಇಂಜೆಕ್ಷನ್ ಕೊಟ್ಟರೂ ಬದುಕುಳಿದ ಅಮೆರಿಕದ ಮಹಿಳಾ ಕೈದಿ

  • ಕೊಲೆ ಕೇಸ್​ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಮಹಿಳೆ ಸಾವಿನಿಂದ ಎರಡೂ ಬಾರಿ ಬಚಾವ್​

  • ಜಾಗತಿಕ ಮಟ್ಟದಲ್ಲಿ ಅನುಮಾನ, ಗೊಂದಲ ಸೃಷ್ಟಿಸಿದ ಈ ಕೇಸ್​

Christa Pike: ಅಮೆರಿಕದ ಟೆನ್ನೆಸ್ಸೀ ರಾಜ್ಯದಲ್ಲಿ ಮಹಿಳೆಗೆ ವಿಧಿಸಲಾದ ಮರಣದಂಡನೆ ಶಿಕ್ಷೆಯು ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ. ಸ್ನೇಹಿತನ ಭೀಕರ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಕ್ರಿಸ್ಟಾ ಪೈಕ್​ಗೆ ಎರಡು ಬಾರಿ ಮಾರಣಾಂತಿಕ ವಿಷದ ಇಂಜೆಕ್ಷನ್ ಕೊಟ್ಟರೂ ಸಹ ಬದುಕುಳಿದ ಅಪರೂಪದಲ್ಲೇ ಅಪರೂಪದ ಘಟನೆಯು ಸದ್ಯ ಪವಾಡ, ಅಚ್ಚರಿ ಎನ್ನುವಂತಾಗಿದೆ.

ಮರಣದಂಡನೆ ಶಿಕ್ಷೆಯ ಪ್ರಕ್ರಿಯೆಯಲ್ಲಿ ಆಕೆಗೆ ಒಂದಲ್ಲ, ಎರಡೂ ಬಾರಿ ಇಂಜೆಕ್ಷನ್ ನೀಡಿದರೂ ಸಾವನ್ನಪ್ಪಲಿಲ್ಲ. ಈ ಸಮಯದಲ್ಲಿ, ಪೈಕ್​ಳನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡ ಹೋದ ಕೈದಿಯ ಪರ ವಕೀಲರು ಮತ್ತು ಪೊಲೀಸರಿಗೆ ಆಕೆಗೆ ಮರಳಿದ ಪ್ರಜ್ಞೆ ಕಂಡು ಅಚ್ಚರಿ ಉಂಟಾಗಿದೆ. ಈ ಕುರಿತಂತೆ ಮಹಿಳೆಯ ಪರ ವಕೀಲರು ಮಾಧ್ಯಮಗಳ ಮುಂದೆ ಕೈದಿ ಬದುಕುಳಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಬದುಕುಳಿದಿದ್ದು ಹೇಗೆ?

ಪೆಂಟೊಬಾರ್ಬಿಟಲ್ ಎಂಬ ವಿಷಕಾರಿ ಇಂಜೆಕ್ಷನ್ ಆಕೆಯನ್ನು ಎರಡೆರೆಡು ಬಾರಿ ಕೊಟ್ಟರೂ ಏಕೆ ಕೊಲ್ಲಲಿಲ್ಲ ಎಂಬ ಪ್ರಶ್ನೆಯು ತೀವ್ರವಾಗಿ ಕಾಡಲಾರಂಭಿಸಿದೆ. ನರಮಂಡಲದ ಮೇಲೆ ಪರಿಣಾಮ ಬೀರುವ ಈ ಇಂಜೆಕ್ಷನ್, ಪೈಕ್ ವಿಷಯದಲ್ಲಿ ಏಕೆ ಕೆಲಸ ಮಾಡಲಿಲ್ಲ. ಆ ಔಷಧವು ಆಕೆಯ ದೇಹವನ್ನು ಪ್ರವೇಶಿಸಿದ್ದೇ ಸುಳ್ಳಾ? ಅಥವಾ ಒಳಗೆ ಹೋಗಿದ್ದೇ ಆದರೂ ಸಾಕಷ್ಟು ಪ್ರಮಾಣದಲ್ಲಿ ರಕ್ತನಾಳಗಳನ್ನು ಸೇರಲಿಲ್ಲವೇ? ಎಂಬ ಬಗ್ಗೆ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಇಂಜೆಕ್ಷನ್ ನರಕ್ಕೆ ತಲುಪಿಲ್ಲ?

ಅರಿವಳಿಕೆ ತಜ್ಞ ಡಾ. ಜೋಯಲ್ ಗಿವೋಟ್ ಪ್ರಕಾರ, ಪೈಕ್ ಅವರಿಗೆ ನೀಡಲಾದ ಪೆಂಟೊಬಾರ್ಬಿಟಲ್ ಪ್ರಮಾಣವು ಸರಿಯಾಗಿ ರಕ್ತನಾಳಗಳನ್ನು ಸೇರಿದ್ದರೆ ಸಾಮಾನ್ಯವಾಗಿ ಮಾರಣಾಂತಿಕವಾಗುತ್ತಿತ್ತು. ಆದರೆ, ಪೈಕ್​ಳ ಕೈಗಳಲ್ಲಿ ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ತೀವ್ರವಾದ ಊತ ಮತ್ತು ಸುಟ್ಟಗಾಯಗಳು ಕಂಡುಬಂದಿವೆ. ಗುಳ್ಳೆಗಳು ಎದ್ದಿತ್ತು. ಔಷಧವು ನರಗಳ ಬದಲಿಗೆ ಸುತ್ತಮುತ್ತಲಿನ ಅಂಗಾಂಶವನ್ನು ಪ್ರವೇಶಿಸಿದೆ ಎಂಬುದನ್ನು ಇದು ಸೂಚಿಸುತ್ತದೆ. ಅದು ನರಗಳ ಬದಲಿಗೆ ಅಂಗಾಂಶವನ್ನು ಪ್ರವೇಶಿಸಿದ್ದರೆ, ಅದು ತಕ್ಷಣವೇ ರಕ್ತನಾಳಗಳನ್ನು ಸೇರುವುದಿಲ್ಲ ಮತ್ತು ಸಾಯಲು ಬಿಡುವುದಿಲ್ಲ ಎಂದಿದ್ದಾರೆ.

ಕ್ರಿಸ್ಟಾ ಪೈಕ್​ಗಿದ್ದ ಸಮಸ್ಯೆಯೇ ಉಳಿಸಿತಾ ಪ್ರಾಣ?

ಕ್ರಿಸ್ಟಾ ಪೈಕ್ ಅವರಿಗೆ "ಥ್ರಂಬೋಸೈಟೋಸಿಸ್" ಎಂಬ ಸಮಸ್ಯೆ ಇದೆ ಎಂದು ಆಕೆಯ ವಕೀಲರು ತಿಳಿಸಿದ್ದಾರೆ. ಇದು ಅವರ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ಲೇಟ್‌ಲೆಟ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇದ್ದರೆ, ಔಷಧವು ಸರಿಯಾಗಿ ರಕ್ತನಾಳಗಳನ್ನು ಪ್ರವೇಶಿಸಲು ಸಾಧ್ಯವಾಗದಿರಬಹುದು ಎಂದು ವೈದ್ಯರು ಹೇಳುತ್ತಾರೆ.

ಔಷಧದ ಗುಣಮಟ್ಟದ ಬಗ್ಗೆಯೇ ಶಂಕೆ

ಕೈದಿ ಪೈಕ್​ಗೆ ಕೊಡಲಾದ ಔಷಧದ ಗುಣಮಟ್ಟದ ಬಗ್ಗೆಯೂ ಇದೀಗ ಅನುಮಾನಗಳು ಭುಗಿಲೆದ್ದಿವೆ. ತಯಾರಿಕೆ ಮತ್ತು ಸಂಗ್ರಹಣೆಯ ಸಮಯದಲ್ಲಿ ಪೆಂಟೊಬಾರ್ಬಿಟಲ್ ಔಷಧವು ಕೆಟ್ಟಿತ್ತೇ? ಎಂಬ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Also Read
ಅಂಬಾನಿ ಭಾರತದ ರಿಯಲ್​ ಬಾಸ್​? ಸ್ಟಾರ್​ಲಿಂಕ್​ ವಿಚಾರದಲ್ಲಿ ಸಿಟ್ಟಿಗೆದ್ದ ಟೆಕ್​ ಬಿಲಿಯನೇರ್​ ಮಸ್ಕ್​ ಬಿಚ್ಚುನುಡಿ | Elon Musk
Christa Pike

ಅಷ್ಟಕ್ಕೂ ಯಾರು ಈಕೆ?

ಕ್ರಿಸ್ಟಾ ಪೈಕ್ ಅಮೆರಿಕದ ಅಪರಾಧ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಕುಖ್ಯಾತ ಮಹಿಳೆ. 1995ರಲ್ಲಿ ಟೆನ್ನೆಸ್ಸಿ ರಾಜ್ಯದಲ್ಲಿ ಕೇವಲ 18 ವರ್ಷ ವಯಸ್ಸಿನವಳಾಗಿದ್ದಾಗ, ತನ್ನ ಸ್ನೇಹಿತ ತಡಾರಿಯಲ್ ಶಿಪ್ ಜತೆ ಸೇರಿ ವೈಯಕ್ತಿಕ ದ್ವೇಷದಿಂದ ಕೋಲೀನ್ ಸ್ಮೆಸರ್ಸರ್ (19) ಎಂಬ ಯುವತಿಯನ್ನು ಅತ್ಯಂತ ಕ್ರೂರವಾಗಿ ಕೊಲೆಗೈದಳು. ಈ ಘೋರ ಅಪರಾಧಕ್ಕಾಗಿ 1996ರಲ್ಲಿ ನ್ಯಾಯಾಲಯವು ಆಕೆಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿತು. ಜೈಲುವಾಸ ಅನುಭವಿಸುತ್ತಿರುವಾಗಲೂ ಆಕೆಯ ಹಿಂಸಾತ್ಮಕ ವರ್ತನೆ ಕಡಿಮೆಯಾಗದೆ, 2001ರಲ್ಲಿ ಮತ್ತೊಬ್ಬ ಮಹಿಳಾ ಕೈದಿಯ ಕೊಲೆಗೆ ಯತ್ನಿಸಿದ್ದಳು. ಈಗ ಶಿಕ್ಷೆಗೆ ಗುರಿಯಾಗುವ ಸಮಯದಲ್ಲಿ ಪವಾಡದಂತೆ ಬದುಕುಳಿರುವುದು ಸದ್ಯ ಜಾಗತಿಕ ಮಟ್ಟದಲ್ಲಿ ಆಕೆಯ ಹೆಸರನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net