‘ರಾಮಾಯಣ’ ಹಾಡಿನ ವಿವಾದ: ಟ್ರೋಲಿಗರಿಗೆ ‘ಹೋಗಿ ಐಸ್‌ಕ್ರೀಮ್ ಮಾರಿ’ ಎಂದು ತಿರುಗೇಟು ನೀಡಿದ ಎ.ಆರ್. ರೆಹಮಾನ್! A R Rehman

Music maestro A.R. Rahman addressed the controversy surrounding the song 'Mangala Rang' from the film 'Ramayana' and gave a sharp retort to the trolls.
'ರಾಮಾಯಣ' ಚಿತ್ರದ 'ಮಂಗಳ ರಂಗ್' ಹಾಡಿನ ವಿವಾದದ ಕುರಿತು ಮಾತನಾಡಿ, ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್.
Published on: 

ಮುಂಬೈ: ಭಾರತೀಯ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿ Vijayavaniಹೆಚ್ಚು ಬಜೆಟ್​ ಹೂಡಿ ನಿರ್ಮಿಸಲಾಗಿರುವ ಸಿನಿಮಾ ಎಂದರೆ ಅದು ನಮಿತ್​ ಮಲೋತ್ರಾ ನಿರ್ಮಾಣದ "ರಾಮಾಯಣ" ವಾಗಿದೆ. ಸಿನಿಮಾ ತಂಡ ಹೇಳಿಕೊಂಡಂತೆ ಸುಮಾರು 4000 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾಗಿ ತಿಳಿಸಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದ್ದು, ಮೊದಲ ಭಾಗ ನವೆಂಬರ್​ 5 ರಂದು ತೆರೆಕಾಣಲಿದೆ.

ಆದರೆ, ಕೆಲ ದಿನಗಳ ಹಿಂದೆ ಈ ಸಿನಿಮಾದ 'ಮಂಗಳ ರಂಗ್​' ಎಂಬ ಹಾಡಿನಲ್ಲಿ ಇಸ್ಲಾಮಿಕ್​ ಶೈಲಿಯ ಕವ್ವಾಲಿಯ ರಾಗಗಳನ್ನು ಬಳಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಹಾಡಿನ ನಿರ್ದೇಶನ ಮಾಡಿದ್ದ ಎ.ಆರ್​. ರೆಹಮಾನ್​ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದರು.

ಹೋಗಿ ಐಸ್‌ಕ್ರೀಮ್ ಮಾರಿ!

ಈಗ, ಈ ಘಟನೆಗೆ ಖುದ್ದು ಎ.ಆರ್​. ರೆಹಮಾನ್​ ಪ್ರತಿಕ್ರಿಯಿಸಿದ್ದು, ತಮ್ಮ ವಿರುದ್ಧ ಟ್ರೋಲ್​ ಮಾಡಿದವರಿಗೆ ತಕ್ಕ ತಿರುಗೇಟನ್ನು ನೀಡಿದ್ದಾರೆ. ಒಂದು ಹಾಡನ್ನು ಕೇವಲ ಒಂದೇ ದಿನದಲ್ಲಿ ನಿರ್ಮಿಸಲು ಆಗುವುದಿಲ್ಲ. ತಿಂಗಳುಗಟ್ಟಲೇ ದಿನ, ರಾತ್ರಿ ಕೆಲಸ ಮಾಡಿದ ಮೇಲೆ ಒಂದು ಹಾಡು ಸಿದ್ಧವಾಗುತ್ತದೆ. ಹೀಗೆ ತಯಾರಾದ ಹಾಡು ಎಲ್ಲರಿಗೂ ಇಷ್ಟವಾಗಬೇಕಿಲ್ಲ. ನನಗೆ ನನ್ನೆಲ್ಲಾ ಹಾಡುಗಳು ಇಷ್ಟವಾಗುವುದಿಲ್ಲ. ನೀವು ಜೀವನದಲ್ಲಿ ಎಲ್ಲರನ್ನು ಸಂತೋಷಪಡಿಸ ಬಯಸಿದರೆ, ಹೋಗಿ ಐಸ್‌ಕ್ರೀಮ್​ ಮಾರಬೇಕೆಂದು, ಐಫೋನ್​ ಸಂಸ್ಥೆ ಸ್ಥಾಪಕ ಸ್ಟೀವ್​ ಜಾಬ್ಸ್​ ಅವರ ಉಕ್ತಿಯನ್ನು ಹೇಳಿದ್ದಾರೆ.

ಒಂದು ಹಾಡನ್ನು ಕೇವಲ ಸಂಗೀತ ನಿದೇಶಕ ಮಾತ್ರ ನಿರ್ಧರಿಸಲ್ಲ. ಅಲ್ಲಿ ಸಿನಿಮಾ ನಿರ್ದೇಶಕ, ನಿರ್ಮಾಪಕ ಹಾಗೂ ಗಾಯಕರ ಪಾತ್ರವು ಇರುತ್ತದೆ. ಇದೊಂದು ಸಂಘಟಿತ ಚಟುವಟಿಕೆ ಆಗಿರುತ್ತದೆ ಎಂದು ಎ.ಆರ್​. ರೆಹಮಾನ್ ತಿಳಿಸಿದ್ದಾರೆ.

ಸಂಗೀತ ಎನ್ನವುದು ಒಂದು ರೀತಿ ಉಪ್ಪಿನಕಾಯಿಯನ್ನು ಮಾಡಿದಂತೆ. ಸಮಯ ಕಳೆದಂತೆ ರುಚಿ ಹೆಚ್ಚಾಗುತ್ತದೆ, ತಿನ್ನಲು ಇಷ್ಟವಾಗುತ್ತದೆ. ಅಂತಯೇ ನಮ್ಮನ್ನು ಟೀಕಿಸುವ ಜನರು ಕೇವಲ ಸಿನಿಮಾದ ಕೆಲ ದೃಶ್ಯಗಳನ್ನು ನೋಡಿರುತ್ತಾರೆ ವಿನಃ, ಸಂಪೂರ್ಣ ಸಿನಿಮಾವನ್ನು ನೋಡಿರುವುದಿಲ್ಲ ಎಂದು ಸಂಗೀತ ನಿರ್ದೇಶಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Also Read
ನಿಧಿ ರಜ್ದಾನ್ ಮತಾಂತರವಾಗಿಲ್ಲ: ಒಮರ್ ಅಬ್ದುಲ್ಲಾ ಮದುವೆ "ಇಸ್ಲಾಂ" ಪ್ರಕಾರ ಮಾನ್ಯವಲ್ಲ; ಮೌಲಾನಾ ಮುಫ್ತಿ ಶಹಾಬುದ್ದೀನ್ ವಿವಾದಾತ್ಮಕ ಹೇಳಿಕೆ! Omar Abdullah
Music maestro A.R. Rahman addressed the controversy surrounding the song 'Mangala Rang' from the film 'Ramayana' and gave a sharp retort to the trolls.

ಏನಿದು ಮಂಗಳ ರಂಗ್​ ವಿವಾದ?

ಭಾನುವಾರ (ಅ.25) ಬಿಡುಗಡೆಯಾದ ಮಂಗಳ ರಂಗ್​ ಹಾಡಿನ ಕೆಲ ಸಂದರ್ಭದಲ್ಲಿ ಸೂಫಿ ಸಂಗೀತವನ್ನು ಬಳಸಿರುವುದು ಜನರ ಕೋಪಕ್ಕೆ ಕಾರಣವಾಗಿದೆ. ಈ ಹಾಡಿನಲ್ಲಿ ಸೂಫಿ ಸಂಗೀತದ ಅಗತ್ಯವೇ ಇರಲಿಲ್ಲ. ಇದು ಮಹರ್ಷೀ ವಾಲ್ಮೀಕಿ ರಾಮಾಯಣಕ್ಕೆ ಮಾಡಿದ ಅಪಮಾನ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಒಂದು ಹಾಡನ್ನು ರಚಿಸುವ ಮೊದಲು, ಯಾವ ಸಿನಿಮಾಗೆ? ಯಾವ ಕತೆಗೆ? ಯಾವ ಸಂಪ್ರದಾಯಕ್ಕೆ ಹಾಡನ್ನು ರಚಿಸುತ್ತಿದ್ದೇವೆಂದು ಸಂಗೀತ ನಿರ್ದೇಶಕನಿಗೆ ತಿಳಿದಿರಬೇಕು. ಗಾಯಕರಿಗೂ, ತಾವು ಯಾವ ಸನ್ನಿವೇಶಕ್ಕೆ ಏನನ್ನು ಹಾಡಬೇಕೆಂಬ ಪರಿಜ್ಞಾನ ಇರಬೇಕೆಂದು ಹಾಡನ್ನು ಕೇಳಿದವರು ಹೇಳುತ್ತಿದ್ದಾರೆ, (ಏಜೆನ್ಸೀಸ್​).