ಅಭಿಮಾನಿಗಳಿಗೆ ಶೀಘ್ರದಲ್ಲಿ ಸಿಹಿ ಸುದ್ದಿ ಕೊಡಲಿದ್ದಾರೆ ಸಲ್ಮಾನ್​ ಖಾನ್!!

Salman-Khan-Bigg-Boss-13
Published on

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸಲ್ಮಾನ್​ ಖಾನ್​ ಬಾಲಿವುಡ್​ನ ಸ್ಟಾರ್ ನಟ. 50ಪ್ಲಸ್​ ವಯಸ್ಸಲ್ಲೂ ಕಟ್ಟುಮಸ್ತಾದ ದೇಹವನ್ನು ಕಾಯ್ದುಕೊಂಡು ಬಂದಿರುವ ಹೀರೋ. ಸದಾ ಅಭಿಮಾನಿಗಳಿಗಾಗಿ ಏನಾದರೊಂದು ಹೊಸತನ್ನು ನೀಡುತ್ತಲೇ ಬಂದಿರುವ ಬ್ಯಾಡ್ ಬಾಯ್​. ಸಾಮಾಜಿಕ ಜಾಲತಾಣದಲ್ಲೂ ಸಲ್ಮಾನ್​ ಹವಾಕ್ಕೇನು ಕಮ್ಮಿ ಇಲ್ಲ. ಇನ್ಸ್​ಸ್ಟಾಗ್ರಾಂ, ಟ್ವಿಟರ್​, ಫೇಸ್​ಬುಕ್​ನಲ್ಲಿ ಮಿಲಿಯನ್​ಗಟ್ಟಲೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಯೂಟ್ಯೂಬ್​ ಚಾನೆಲ್​ನತ್ತ ಚಿತ್ತ ಹರಿಸಿದ್ದಾರೆ ಸಲ್ಮಾನ್​. ಅಂದರೆ ಬಿಯಿಂಗ್​ ಸಲ್ಮಾನ್​ ಖಾನ್​ ಹೆಸರಿನಲ್ಲಿ ಯೂಟ್ಯೂಬ್​ ಚಾನೆಲ್​ ತೆರೆಯಲಿದ್ದು, ಆ ಚಾನೆಲ್​ ಪೂರ್ತಿ ಅಭಿಮಾನಿಗಳಿಗಾಗಿಯೇ ಮಿಸಲಿಡಲಿದ್ದಾರಂತೆ. ಸಿನಿಮಾ ಹೊರತುಪಡಿಸಿ ವೈಯಕ್ತಿಕ ವಿಚಾರಗಳನ್ನು, ಖುಷಿಯ ಕ್ಷಣಗಳನ್ನು ಅಭಿಮಾನಿಗಳ ಜತೆಗೆ ಹಂಚಿಕೊಳ್ಳಲು ಯೂಟ್ಯೂಬ್​ಗೆ ಆಗಮಿಸುತ್ತಿದ್ದಾರಂತೆ. ಹಾಗಾದರೆ, ಆ ಚಾನೆಲ್​ ಯಾವಾಗ ಶುರು? ಅಧಿಕೃತ ಘೋಷಣೆ ಯಾವಾಗ ಎಂಬ ಬಗ್ಗೆ ಶೀಘ್ರದಲ್ಲಿ ಮಾಹಿತಿ ಲಭ್ಯವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net