More

    ವಿಶೇಷ; ಕರೊನಾದಿಂದ 73 ವರ್ಷ ಇತಿಹಾಸವುಳ್ಳ ಈ ಸಿನಿಮೋತ್ಸವ ನಿಂತೇ ಹೋಯ್ತಾ?; ಭಾರತೀಯ ಸಿನಿಮೋತ್ಸವಗಳ ಸ್ಥಿತಿ ಹೇಗಿದೆ? ಯಾವೆಲ್ಲ ಮುಂದೂಡಿಕೆ, ಯಾವೆಲ್ಲ ರದ್ದು.. ಇಲ್ಲಿದೆ ಮಾಹಿತಿ..

    ಸಿನಿಮಾ ಮಂದಿಗೆ ಸಿನಿಮಾದಷ್ಟೇ ಸಿನಿಮೋತ್ಸವಗಳು ತುಂಬ ಇಂಪಾರ್ಟೆಂಟ್. ವಿಶ್ವದ ಎಲ್ಲ ಭಾಷೆಗಳ ಅತ್ಯುತ್ತಮ ಆಯ್ದ ಸಿನಿಮಾಗಳು ಆ ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವುದು ಒಂದೆಡೆಯಾದರೆ, ತಾರೆಗಳನ್ನು ಸೆಳೆಯುವ ರೆಡ್ ಕಾರ್ಪೆಟ್​ ಕೂಡ ಆಕರ್ಷಣೀಯವಾಗಿರುತ್ತದೆ. ಬಾಲಿವುಡ್​ನಿಂದಲೂ ಪ್ರತಿ ವರ್ಷ ನೂರಾರು ಸೆಲೆಬ್ರಿಟಿಗಳು ಹತ್ತು ಹಲವು ಸಿನಿಮೋತ್ಸವಗಳಿಗೆ ಭೇಟಿ ನೀಡಿ, ರೆಡ್​ಕಾರ್ಪೆಟ್​ ಮೇಲೆ ಮಾರ್ಜಾಲ ನಡಿಗೆ ಪ್ರದರ್ಶಿಸಿ ಬರುತ್ತಾರೆ. ಆದರೆ ಈ ವರ್ಷದ ಸ್ಥಿತಿ ಅತಂತ್ರವಾಗಿದೆ. ಈಗಾಗಲೇ ನಿಗದಿಯಂತೆ ನಡೆಯಬೇಕಿದ್ದ ಹತ್ತಾರು ಸಿನಿಮೋತ್ಸವಗಳು ಕರೊನಾ ಹಾವಳಿಗೆ ತುತ್ತಾಗಿ ರದ್ದು ಮಾಡಿಕೊಂಡಿವೆ. ಇನ್ನು ಕೆಲವು ಸಿನಿಮೋತ್ಸವಗಳು ದಿನಾಂಕವನ್ನು ಮುಂದೂಡಲ್ಪಟ್ಟಿವೆ. ಅದರಲ್ಲೂ ಬಾಲಿವುಡ್​ ಮಂದಿಯ ನೆಚ್ಚಿನ ಸಿನಿಮೋತ್ಸವ ಎಂದೇ ಖ್ಯಾತಿಯಾಗಿರುವ ಕಾನ್ ಸಿನಿಮೋತ್ಸವಕ್ಕೂ ಕರೊನಾ ಕರಾಳತೆ ಆವರಿಸಿದೆ! ಎಲ್ಲ ಅಂದುಕೊಂಡಂತೆ ಆಗಿದ್ದರೆ, ಐತಿಹಾಸಿಕ 73ನೇ ಕಾನ್​ ಸಿನಿಮೋತ್ಸವ 12ರಿಂದ 23ರವರೆಗೆ ಫ್ರಾನ್ಸ್​ನಲ್ಲಿ ನಡೆಯಬೇಕಿತ್ತು. ಕರೊನಾ ವಿಷಜಾಲ ಹೆಚ್ಚಾಗುತ್ತಿದ್ದಂತೆ ಈಗ ಅದನ್ನು ಜೂನ್​ ಅಥವಾ ಜುಲೈನಲ್ಲಿ ಸಿನಿಮೋತ್ಸವ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ. ಕರೊನಾ ಕೈ ಮೀರಿದರೆ, ಸೆಪ್ಟೆಂಬರ್​ ವೇಳೆಗೂ ಆಯೋಜಿಸುವ ಸಾಧ್ಯತೆ ಇದೆ.

    ಭಾರತೀಯ ಸಿನಿಮೋತ್ಸವಗಳು ಸದ್ಯಕ್ಕೆ ಸೇಫ್​
    ಕರೊನಾದಿಂದ ಭಾರತೀಯ ಸಿನಿಮೋತ್ಸವಗಳು ಸೇಫ್​ ಆಗಿವೆ ಎನ್ನಬಹುದು. ವಿದೇಶಿ ಸಿನಿಮೋತ್ಸವಕ್ಕೆ ಹೋಲಿಕೆ ಮಾಡಿದರೆ, ಭಾರತೀಯ ಫಿಲಂ ಫೆಸ್ಟಿವಲ್​ಗಳು ನವೆಂಬರ್​, ಡಿಸೆಂಬರ್​ನಲ್ಲಿ ಆಯೋಜನೆಗೆ ಯೋಜನೆ ಸಿದ್ಧಪಡಿಸಿವೆ. ಒಂದಷ್ಟು ಸಿನಿಮೋತ್ಸವಗಳು ಜನವರಿಯಿಂದ ಫೆಬ್ರವರಿ ಅಂತ್ಯದ ಒಳಗೆ ಮುಕ್ತಾಯವಾಗಿವೆ. ಜೈಪುರ ಸಿನಿಮೋತ್ಸವ, ಮುಂಬೈ ಸಿನಿಮೋತ್ಸವ, ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಈಗಾಗಲೇ ಮುಕ್ತಾಯವಾಗಿವೆ. ದೆಹಲಿ ಸಿನಿಮೋತ್ಸವ ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ. ಧರ್ಮಶಾಲಾ ಸಿನಿಮೋತ್ಸವ ನವೆಂಬರ್​ 26ಕ್ಕೆ ನಡೆಯಲಿದೆ. ಕೇರಳ ಅಂತಾರಾಷ್ಟ್ರೀಯ ಸಿನಿಮೋತ್ಸವ ನವೆಂಬರ್​ನಲ್ಲಿ ಆಯೋಜನೆಗೊಳ್ಳಲಿದೆ.

    ರದ್ದಾದ ಮತ್ತು ಮುಂದೂಡಲ್ಪಟ್ಟ ಅಂತಾರಾಷ್ಟ್ರೀಯ ಸಿನಿಮೋತ್ಸವಗಳ ವಿವರ

    1. ಕಾನ್​ ಸಿನಿಮೋತ್ಸವ ಮೇ 12-23ರವರೆಗೆ ನಿಗದಿಯಾಗಿತ್ತು. ಜುಲೈ ಅಥವಾ ಆಗಸ್ಟ್​ಗೆ ಮುಂದೂಡಿಕೆ
    2. ಅಮೆರಿಕನ್​ ಬ್ಲಾಕ್​ ಸಿನಿಮೋತ್ಸವ ಜೂ. 17 ರಿಂದ 21 ನಿಗದಿಯಾಗಿತ್ತು. ಅಕ್ಟೋಬರ್​ 21ರಿಂದ 25ಕ್ಕೆ ಮುಂದೂಡಿಕೆ
    3. ಸಿಡ್ನಿ ಸಿನಿಮೋತ್ಸವ ಜೂ 3 ರಿಂದ 14ವರೆಗೆ ನಿಗದಿ. ಇದೀಗ ರದ್ದು
    4. 18ನೇ ಗೋಲ್ಡನ್​ ಸ್ಟೇಟ್​ ಸಿನಿಮೋತ್ಸವ ಕೇವಲ ಆನ್​ಲೈನ್​ನಲ್ಲಿ ಆಯೋಜನೆಗೆ ನಿರ್ಧಾರ
    5. ನ್ಯೂ ಪೋರ್ಟ್ ಬೀಚ್​ ಸಿನಿಮೋತ್ಸವ ಏ. 23 ರಿಂದ 30ರವರೆಗೆ ನಿಗದಿಯಾಗಿತ್ತು. ಅಧಿಕೃತ ದಿನಾಂಕ ಘೋಷಣೆ ಆಗಿಲ್ಲ
    6. ಮೈಮಿ ಸಿನಿಮೋತ್ಸವ ಮಾರ್ಚ್​ 12ಕ್ಕೆ ನಡೆಯಬೇಕಿತ್ತು. ಇದೀಗ ರದ್ದಾಗಿದೆ
    7. ಸ್ಯಾನ್​ಫ್ರಾನ್ಸಿಸ್ಕೋ ಸಿನಿಮೋತ್ಸವ ಏ. 8 ರಿಂದ 21ರವರೆಗೆ ನಿಗದಿಯಾಗಿತ್ತು. ಇದೀಗ ರದ್ದಾಗಿದೆ
    8. ಗಾರ್ಡನ್ ಸ್ಟೇಟ್​ ಸಿನಿಮೋತ್ಸವ ಕೇವಲ ಆನ್​ಲೈನ್​ನಲ್ಲಿ ಆಯೋಜನೆ
    9. ಕೆನಡಿಯನ್​ ಸಿನಿಮೋತ್ಸವ ಮಾ. 24ರಿಂದ 28 ನಿಯೋಜನೆ. ರದ್ದು
    10. ಸನ್​ ವ್ಯಾಲಿ ಸಿನಿಮೋತ್ಸವ ಮಾ. 18ರಿಂದ 22ರವರೆಗೆ ನಿಗದಿಯಾಗಿತ್ತು. ಇದೀಗ ರದ್ದು
    11. ಟಿಸಿಎಂ ಕ್ಲಾಸಿಕ್​ ಸಿನಿಮೋತ್ಸವ ಏ. 16.19 ನಿಗದಿಯಾಗಿತ್ತು. ಇದೀಗ ರದ್ದು
    12. ಇಂಡಿಯನ್​ ಸಿನಿಮೋತ್ಸವ ಲಾಸ್ ಏಂಜಲಸ್​ ಏ. 1ರಿಂದ 5ರವರೆಗೆ ನಿಗದಿಯಾಗಿತ್ತು. ಸದ್ಯ ಮುಂದೂಡಿಕೆ
    13. ಫ್ರೆಂಚ್​ ರೈವರಿಯಾ ಸಿನಿಮೋತ್ಸವ ಜೂ.8ಕ್ಕೆ ಮುಂದೂಡಿಕೆ
    14. ಪೆರುಗ್ವೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಮಾ. 19ರಿಂದ 27 ಮುಂದೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts