More

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಪರವಾನಗಿ ಆರ್​ಬಿಐನಿಂದ ರದ್ದು ಸಾಧ್ಯತೆ: ಬುಧವಾರ ಮತ್ತೆ ಷೇರು ಬೆಲೆ 10% ಚೇತರಿಕೆ

    ನವದೆಹಲಿ: ಪೇಟಿಎಂನ ಮೂಲ ಕಂಪನಿಯಾಗಿರುವ One97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಷೇರುಗಳ ಬೆಲೆ ಬುಧವಾರ ಶೇಕಡಾ 10 ರಷ್ಟು ಏರಿಕೆಯಾಗಿವೆ. ಈ ಮೂಲಕ ಚೇತರಿಕೆಯ ಪ್ರಯಾಣವನ್ನು ಮುಂದುವರಿಸಿದೆ.

    ಈ ಸ್ಟಾಕ್ 10 ಪ್ರತಿಶತದಷ್ಟು ಜಿಗಿದು 496.75 ರೂ.ನಲ್ಲಿ ತಲುಪಿತು. ಈ ಮೂಲಕ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಯಿತು.
    ಈ ಷೇರುಗಳು ಮೂರು ದಿನಗಳ ತೀವ್ರ ಕುಸಿತದ ನಂತರ ಮಂಗಳವಾರ ಶೇಕಡಾ 3 ಕ್ಕಿಂತ ಹೆಚ್ಚು ಚೇತರಿಸಿಕೊಂಡಿದ್ದವು.

    ಆರ್‌ಬಿಐ ನಿರ್ಬಂಧದ ನಂತರ, ಕಂಪನಿಯ ಷೇರುಗಳ ಬೆಲೆ ಫೆಬ್ರವರಿ 1-5 ರ (ಮೂರು ದಿನಗಳ ವಹಿವಾಟು) ನಡುವೆ ಶೇಕಡಾ 42 ಕ್ಕಿಂತ ಹೆಚ್ಚು ಕುಸಿದಿತ್ತು.

    Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್, ಯಾವುದೇ ಹೆಚ್ಚಿನ ಠೇವಣಿಗಳನ್ನು ತೆಗೆದುಕೊಳ್ಳದಂತೆ ಅಥವಾ ಕ್ರೆಡಿಟ್ ವಹಿವಾಟುಗಳನ್ನು ನಡೆಸದಂತೆ ಅಥವಾ ಯಾವುದೇ ಗ್ರಾಹಕರ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು ಮತ್ತು ಕಾರ್ಡ್‌ಗಳಲ್ಲಿ ಟಾಪ್-ಅಪ್‌ಗಳನ್ನು ಸ್ವೀಕರಿಸಿದಂತೆ ಆರ್‌ಬಿಐ ಆದೇಶಿಸಿದೆ. ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಬ್ಯಾಂಕ್‌ನಲ್ಲಿ ಶೇ.51 ರಷ್ಟು ಪಾಲನ್ನು ಹೊಂದಿದ್ದಾರೆ.

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವ್ಯಾಪಾರವನ್ನು ಮುಚ್ಚಲು ಮತ್ತು ವಹಿವಾಟುಗಳ ಇತ್ಯರ್ಥಕ್ಕೆ ಮಾರ್ಚ್ 15 ರ ಗಡುವು ಮುಗಿದ ನಂತರ ಬಿಕ್ಕಟ್ಟಿಗೆ ಸಿಲುಕಿರುವ Paytm ಪೇಮೆಂಟ್ಸ್ ಬ್ಯಾಂಕ್‌ನ ಪರವಾನಗಿಯನ್ನು ರದ್ದುಗೊಳಿಸಲು ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಮಾರ್ಚ್ 15 ರೊಳಗೆ ಎಲ್ಲಾ ಬಾಕಿ ವಹಿವಾಟು ಮತ್ತು ನೋಡಲ್ ಖಾತೆಗಳನ್ನು ಇತ್ಯರ್ಥಗೊಳಿಸುವಂತೆ ಆರ್‌ಬಿಐ ಪಾವತಿ ಬ್ಯಾಂಕ್‌ಗೆ ನಿರ್ದೇಶಿಸಿದ್ದು, ತದನಂತರ ಯಾವುದೇ ವಹಿವಾಟನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.

    ವರ್ಷದ ಗರಿಷ್ಠ ಬೆಲೆ ಮುಟ್ಟಿದ ಅದಾನಿ ಸೋಲಾರ್ ಎನರ್ಜಿ ಷೇರು: ಬುಧವಾರ 16% ಏರಿಕೆಯಾಗಿದ್ದರ ಹಿಂದಿನ ಕಾರಣಗಳೇನು?

    ಎಲ್​ಐಸಿ ಷೇರುಗಳಿಗೆ ಸಾರ್ವಕಾಲಿಕ ಗರಿಷ್ಠ ಬೆಲೆ: ಎದೆಯುಬ್ಬಿಸಿ, ಕಣ್ಣೆತ್ತಿ ಹೆಮ್ಮೆಯಿಂದ ಶ್ಲಾಘಿಸಿದ ಪ್ರಧಾನಿ ಮೋದಿ ಭೂತ ಬಂಗಲೆ ಕತೆ ಹೇಳಿದ್ದೇಕೆ?

    ಬಿಎಸ್​ಇ ಸೂಚ್ಯಂಕ ಅಲ್ಪ ಕುಸಿತ; ನಿಫ್ಟಿ ಸ್ವಲ್ಪ ಏರಿಕೆ: ಆರ್​ಬಿಐ ಬಡ್ಡಿ ದರ ನಿರ್ಧಾರಕ್ಕೆ ಕಾಯುತ್ತಿರುವ ಹೂಡಿಕೆದಾರರಿಂದ ಎಚ್ಚರಿಕೆಯ ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts