More

    ಎಲ್​ಐಸಿ ಷೇರುಗಳಿಗೆ ಸಾರ್ವಕಾಲಿಕ ಗರಿಷ್ಠ ಬೆಲೆ: ಎದೆಯುಬ್ಬಿಸಿ, ಕಣ್ಣೆತ್ತಿ ಹೆಮ್ಮೆಯಿಂದ ಶ್ಲಾಘಿಸಿದ ಪ್ರಧಾನಿ ಮೋದಿ ಭೂತ ಬಂಗಲೆ ಕತೆ ಹೇಳಿದ್ದೇಕೆ?

    ನವದೆಹಲಿ: ಸರ್ಕಾರಿ ಸಂಸ್ಥೆಯಾದ ಎಲ್​ಐಸಿ ಷೇರು ಬೆಲೆ ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿ ದಾಖಲೆ ಬರೆಯಿತು. ಬುಧವಾರ ಎಲ್ಐಸಿ ಷೇರುಗಳ ಬೆಲೆ ಶೇ.1.98ರಷ್ಟು ಏರಿಕೆ ಕಂಡು 1045 ರೂಪಾಯಿ ತಲುಪಿತು. ಇಂಟ್ರಾ ಡೇ ವಹಿವಾಟಿನ ವೇಳೆ ಷೇರಿನ ಬೆಲೆ 1050 ರೂಪಾಯಿ ತಲುಪಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿತು.

    ಎಲ್‌ಐಸಿ ಷೇರುಗಳ ಬೆಲೆಯಲ್ಲಿ ಏರಿಕೆಯ ಪ್ರವೃತ್ತಿಯು ಸತತ ನಾಲ್ಕನೇ ವಹಿವಾಟಿನ ದಿನವೂ ಮುಂದುವರಿಯಿತು. ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರದಂದು ಎಲ್‌ಐಸಿ ಷೇರುಗಳ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿ, 1050 ರೂಪಾಯಿಗೆ ತಲುಪಿತು. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಎಲ್ಐಸಿ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆಯನ್ನು ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು.

    ಬುಧವಾರದಂದು ಎಲ್‌ಐಸಿ ಷೇರುಗಳು 1.98% ರಷ್ಟು ಏರಿಕೆಯಾಗಿ ಕೊನೆಯಲ್ಲಿ ರೂ 1044.45ಕ್ಕೆ ಸ್ಥಿರವಾದವು. ಹಿಂದಿನ ದಿನವಾದ ಮಂಗಳವಾರದ ಮುಕ್ತಾಯದಂದು ಈ ಷೇರು ಬೆಲೆ ರೂ 1024.70 ಇತ್ತು.
    ಈ ಷೇರಿನ ಬೆಲೆಯು ಮಾರ್ಚ್ 29, 2023 ರಂದು ರೂ 530.20 ರೂಪಾಯಿ ತಲುಪಿತ್ತು. ಇದು 52 ವಾರಗಳ ಕನಿಷ್ಠ ಬೆಲೆಯಾಗಿದೆ.

    ಪ್ರಧಾನಿ ಮೋದಿ ಹೇಳಿದ್ದೇನು?:

    ಬುಧವಾರದ ಬಜೆಟ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್‌ಐಸಿ ಕುರಿತು ಹರಡುತ್ತಿರುವ ವದಂತಿಗಳನ್ನು ಉಲ್ಲೇಖಿಸಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ಎಲ್‌ಐಸಿ ಬಗ್ಗೆ ಎಲ್ಲ ತಪ್ಪುಗಳನ್ನು ಹೇಳುತ್ತಿದ್ದರು, ಆದರೆ ಇಂದು ಎಲ್‌ಐಸಿ ಷೇರುಗಳು ದಾಖಲೆ ಮಟ್ಟದಲ್ಲಿ ವಹಿವಾಟಾಗುತ್ತಿದೆ ಎಂದು ಎದೆಯುಬ್ಬಿಸಿ, ಕಣ್ಣೆತ್ತಿ ಹೇಳಬಯಸುತ್ತೇನೆ ಎಂದು ಪ್ರಧಾನಿ ಹೇಳಿದರು.

    ಪ್ರಧಾನಿ ಎಲ್‌ಐಸಿಗೆ ಸಂಬಂಧಿಸಿದ ವದಂತಿಗಳ ಕುರಿತು ಭೂತ ಬಂಗಲೆಯ ಉದಾಹರಣೆಯನ್ನು ಪ್ರಧಾನಿ ನೀಡಿದರು. ಗ್ರಾಮದಲ್ಲಿ ಯಾರಿಗಾದರೂ ದೊಡ್ಡ ಬಂಗಲೆ ಇದ್ದು ಅದನ್ನು ಖರೀದಿಸಲು ಮುಂದಾದಾಗ ಸಿಗದಿದ್ದರೆ ಭೂತ ಬಂಗಲೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ ಎಂದರು. ಇದರ ನಂತರ ಯಾರೂ ತೆಗೆದುಕೊಳ್ಳುವುದಿಲ್ಲ ಮತ್ತು ಅವರೇ ಅದನ್ನು ತೆಗೆದುಕೊಳ್ಳುತ್ತಾರೆ ಎಂದು ಮೋದಿ ಹೇಳಿದರು.

    2024 ರ ಕ್ಯಾಲೆಂಡರ್ ವರ್ಷ ಆರಂಭವಾದ ನಂತರ ಕೇವಲ 27 ದಿನಗಳ ವಹಿವಾಟುಗಳಲ್ಲಿ ಎಲ್​ಐಸಿ ಸ್ಟಾಕ್ 24% ರ ಅದ್ಭುತ ಏರಿಕೆಯನ್ನು ಕಂಡಿದೆ. ಕಂಪನಿಯ ಮಾರುಕಟ್ಟೆ ಮೌಲ್ಯವೂ 6.60 ಲಕ್ಷ ಕೋಟಿ ರೂಪಾಯಿ ದಾಟಿದೆ. ಇದರೊಂದಿಗೆ ಇದು ಭಾರತದಲ್ಲಿ ಮಾರುಕಟ್ಟೆ ಬಂಡವಾಳದ ವಿಷಯದಲ್ಲಿ ಆರನೇ ಅತಿ ದೊಡ್ಡ ಪಟ್ಟಿಮಾಡಲಾದ ಕಂಪನಿಯಾಗಿದೆ. ಪಟ್ಟಿ ಮಾಡಿದ PSU (ಸರ್ಕಾರಿ) ಕಂಪನಿಗಳಲ್ಲಿ ಪ್ರಮುಖ ಕಂಪನಿಯಾಗಿದೆ.

    ಬಿಎಸ್​ಇ ಸೂಚ್ಯಂಕ ಅಲ್ಪ ಕುಸಿತ; ನಿಫ್ಟಿ ಸ್ವಲ್ಪ ಏರಿಕೆ: ಆರ್​ಬಿಐ ಬಡ್ಡಿ ದರ ನಿರ್ಧಾರಕ್ಕೆ ಕಾಯುತ್ತಿರುವ ಹೂಡಿಕೆದಾರರಿಂದ ಎಚ್ಚರಿಕೆಯ ನಡೆ

    ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿದಾಯ್ದ ಪ್ರಧಾನಿ: ಉತ್ತರ-ದಕ್ಷಿಣ ವಿಭಜನೆ ಹೇಳಿಕೆ ನೀಡದಿರಲು ಭಾವಪೂರ್ಣ ಮನವಿ

    ಟಾಟಾ ಗ್ರೂಪ್​ ಕಂಪನಿ ಷೇರು ಖರೀದಿಗೆ ಮುಗಿಬಿದ್ದ ಹೂಡಿಕೆದಾರರು: ಒಂದೇ ದಿನದಲ್ಲಿ 20% ಹೆಚ್ಚಳವಾಗಿ ಅಪ್ಪರ್ ಸರ್ಕ್ಯೂಟ್​ ಹಿಟ್​ ಆಗಲು ಹೀಗಿದೆ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts