More

    ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿದಾಯ್ದ ಪ್ರಧಾನಿ: ಉತ್ತರ-ದಕ್ಷಿಣ ವಿಭಜನೆ ಹೇಳಿಕೆ ನೀಡದಿರಲು ಭಾವಪೂರ್ಣ ಮನವಿ

    ನವದೆಹಲಿ: ದೇಶವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸುವ ನಿರೂಪಣೆಯನ್ನು ನಿಲ್ಲಿಸಬೇಕು. ಇದು ದೇಶದ ಭವಿಷ್ಯಕ್ಕೆ ಧಕ್ಕೆ ತರುತ್ತದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯಸಭೆಯಲ್ಲಿ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ದೇಶ ವಿಭಜನೆ ಕುರಿತ ಹೇಳಿಕೆಗಳ ಬಗೆಗೆ ಬೇಸರ ವ್ಯಕ್ತಪಡಿಸಿದರು. ಭಾವೋದ್ವೇಗದಿಂದಲೇ ಮಾತನಾಡಿದ ಅವರು, ದೇಶದ ಏಕತೆಯ ಅಗತ್ಯವನ್ನು ಪ್ರತಿಪಾದಿಸಿದರು. ಕರ್ನಾಟಕ ಸರ್ಕಾರ ಜಾಹೀರಾತುಗಳ ದೇಶ ವಿಭಜನೆಯ ನಿರೂಪಣೆಯನ್ನು ರೂಪಿಸುತ್ತಿದೆ ಎಂದು ಆಪಾದಿಸಿದರು.

    ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಡೆಸಿದ ಪ್ರತಿಭಟನಾ ಧರಣಿಯನ್ನು ಉಲ್ಲೇಖಿಸಿ ಮೋದಿ ಮಾತನಾಡಿದರು.

    “ಇಂದು ನಾನು ಒಂದು ನಿರ್ದಿಷ್ಟ ವಿಷಯದ ಬಗ್ಗೆ ನನ್ನ ನೋವನ್ನು ಹಂಚಿಕೊಳ್ಳಲು ಬಯಸುತ್ತೇನೆ… ದೇಶವನ್ನು ಒಡೆಯಲು ಇತ್ತೀಚಿನ ದಿನಗಳಲ್ಲಿ ಭಾಷೆಯನ್ನು ಮಾತನಾಡುವ ರೀತಿ, ರಾಜಕೀಯ ಲಾಭಕ್ಕಾಗಿ ಈ ಹೊಸ ನಿರೂಪಣೆಗಳನ್ನು ಮಾಡಲಾಗುತ್ತಿದೆ. ಇಡೀ ರಾಜ್ಯವು ಈ ಭಾಷೆಯನ್ನು ಮಾತನಾಡುತ್ತಿದೆ. ದೇಶಕ್ಕೆ ಇದಕ್ಕಿಂತ ಯಾವುದೂ ಕೆಟ್ಟದ್ದಲ್ಲ. ನಾವು ಯಾವ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

    ಇಂತಹ ನಿರೂಪಣೆಗಳು ದೇಶಕ್ಕೆ ಒಳ್ಳೆಯದಲ್ಲ. ಇದು ದೇಶದ ಭವಿಷ್ಯವನ್ನು ಅಪಾಯಕ್ಕೆ ತಳ್ಳಬಹುದು ಎಂದು ಮೋದಿ ಹೇಳಿದರು.

    ದೇಶದ ಒಂದು ಭಾಗದಲ್ಲಿ ಲಸಿಕೆ ತಯಾರಾಗುತ್ತದೆ, ಬೇರೆ ಕಡೆ ಹಾಕಲು ಸಾಧ್ಯವಿಲ್ಲ ಎಂದು ಯಾರೋ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಇದು ಏನು ಆಲೋಚನೆ? ಇಂತಹ ಭಾಷೆ ರಾಷ್ಟ್ರೀಯ ಪಕ್ಷದಿಂದ ಹೊರಹೊಮ್ಮುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ, ಇದು ತುಂಬಾ ದುಃಖಕರವಾಗಿದೆ” ಎಂದು ಅವರು ಹೇಳಿದರು.

    “ಈ ರಾಷ್ಟ್ರ ನಮಗೆ ಕೇವಲ ತುಂಡು ಭೂಮಿ ಅಲ್ಲ, ಇದು ಮಾನವ ದೇಹದಂತೆ, ಎಲ್ಲೋ ನೋವು ಉಂಟಾದರೆ, ಕಾಲಿನಲ್ಲಿ ಮುಳ್ಳು ಇರುವುದರಿಂದ ಅದು ನನಗೆ ಸಂಬಂಧಿಸಿದ್ದಲ್ಲ ಎಂದು ಕೈ ಹೇಳಲಾಗದು. ಈ ದೇಶದಲ್ಲಿ ಎಲ್ಲಿಯಾದರೂ ನೋವು ಇದ್ದರೆ, ಅದನ್ನು ಎಲ್ಲರೂ ಅನುಭವಿಸಬೇಕು. ದೇಹದ ಒಂದು ಭಾಗವು ಕೆಲಸ ಮಾಡದಿದ್ದರೆ ಇಡೀ ದೇಹವನ್ನು ಅಂಗವಿಕಲತೆ ಎಂದು ಕರೆಯಲಾಗುತ್ತದೆ, ದೇಶದ ಯಾವುದೇ ಭಾಗವು ಅಭಿವೃದ್ಧಿಯಾಗದಿದ್ದರೆ, ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ಆದ್ದರಿಂದ ನಾವು ದೇಶವನ್ನು ಪ್ರತ್ಯೇಕ ಭಾಗಗಳಾಗಿ ನೋಡದೆ ಒಂದೇ ಎಂದು ನೋಡಬೇಕು ಎಂದು ಮೋದಿ ಹೇಳಿದರು..

    ಹಿಮಾಲಯದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ನದಿಗಳು ಅಲ್ಲಿಂದ ಹರಿಯುತ್ತವೆ ಮತ್ತು ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಲು ಪ್ರಾರಂಭಿಸಿದರೆ ಏನಾಗುತ್ತದೆ ಎಂದು ಹೇಳಿದರು.

    “ದೇಶಕ್ಕೆ ಏನಾಗುತ್ತದೆ, ಇದು ಎಲ್ಲಿ ನಿಲ್ಲುತ್ತದೆ? ಕಲ್ಲಿದ್ದಲು ಹೊಂದಿರುವ ರಾಜ್ಯಗಳು ನಾವು ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದರೆ, ದೇಶ ಹೇಗೆ ಕಾರ್ಯನಿರ್ವಹಿಸುತ್ತದೆ? ನಾವು ಇತರ ಪ್ರದೇಶಗಳೊಂದಿಗೆ ಆಮ್ಲಜನಕವನ್ನು ಹಂಚಿಕೊಳ್ಳುವುದಿಲ್ಲ ಎಂದು ಪೂರ್ವ ರಾಜ್ಯಗಳು ಹೇಳಿದರೆ ಏನಾಗುತ್ತಿತ್ತು” ಎಂದು ಅವರು ಪ್ರಶ್ನಿಸಿದರು.

    “‘ದೇಶ್ ಕೆ ಅಂದರ್ ಯೇ ಭಾವ್ ತೋಡ್ನೆ ಕಾ ಕ್ಯಾ ಪ್ರಯಾಸ್ ಹೋ ರಹಾ ಹೈ?’ (ರಾಷ್ಟ್ರವನ್ನು ಒಡೆಯಲು ಈ ನಿರೂಪಣೆಯನ್ನು ಮಾಡಲಾಗುತ್ತಿದೆಯೇ?) ‘ಹಮಾರಾ ಟ್ಯಾಕ್ಸ್​, ಹಮಾರಾ ಮನಿ (ನಮ್ಮ ತೆರಿಗೆ, ನಮ್ಮ ಹಣ) ಈ ಭಾಷೆ ಏನು ಮಾತನಾಡುತ್ತಿದೆ? ಎಂದೂ ಅವರು ಪ್ರಶ್ನಿಸಿದರು.

    “ರಾಷ್ಟ್ರವನ್ನು ಒಡೆಯಲು ಇಂತಹ ಹೊಸ ನಿರೂಪಣೆ ಮಾಡುವುದನ್ನು ನಿಲ್ಲಿಸಿ. ಇದು ದೇಶದ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ದೇಶವನ್ನು ಜೊತೆಗೆ ಕೊಂಡೊಯ್ಯಲು ಪ್ರಯತ್ನಗಳನ್ನು ಮಾಡಿ” ಎಂದು ಪ್ರಧಾನಿ ಕೋರಿದರು.

    ಟಾಟಾ ಗ್ರೂಪ್​ ಕಂಪನಿ ಷೇರು ಖರೀದಿಗೆ ಮುಗಿಬಿದ್ದ ಹೂಡಿಕೆದಾರರು: ಒಂದೇ ದಿನದಲ್ಲಿ 20% ಹೆಚ್ಚಳವಾಗಿ ಅಪ್ಪರ್ ಸರ್ಕ್ಯೂಟ್​ ಹಿಟ್​ ಆಗಲು ಹೀಗಿದೆ ಕಾರಣ…

    4.5 ಲಕ್ಷ ಷೇರು ಇರುವ ಸಚಿನ್ ತೆಂಡೂಲ್ಕರ್ ಮತ್ತಷ್ಟು ಶ್ರೀಮಂತ: 3 ಪಟ್ಟು ಹೆಚ್ಚಳವಾದ ಕಂಪನಿಯ ಲಾಭ; ಸ್ಟಾಕ್​ ಬೆಲೆ ಅಪ್ಪರ್​ ಸರ್ಕ್ಯೂಟ್ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts