More

    4.5 ಲಕ್ಷ ಷೇರು ಇರುವ ಸಚಿನ್ ತೆಂಡೂಲ್ಕರ್ ಮತ್ತಷ್ಟು ಶ್ರೀಮಂತ: 3 ಪಟ್ಟು ಹೆಚ್ಚಳವಾದ ಕಂಪನಿಯ ಲಾಭ; ಸ್ಟಾಕ್​ ಬೆಲೆ ಅಪ್ಪರ್​ ಸರ್ಕ್ಯೂಟ್ ಹಿಟ್​

    ಮುಂಬೈ: ಆಜಾದ್ ಇಂಜಿನಿಯರಿಂಗ್ ಲಿಮಿಟೆಡ್​ ( Azad Engineering Ltd.) ಕಂಪನಿಯ ಷೇರು ಬುಧವಾರದ ವಹಿವಾಟಿನ ಅವಧಿಯಲ್ಲಿ ತೀವ್ರ ಏರಿಕೆ ದಾಖಲಿಸಿತು. ಈ ಕಂಪನಿಯ ಷೇರುಗಳು 10% ನ ಅಪ್ಪರ್​ ಸರ್ಕ್ಯೂಟ್ ಹಿಟ್​ ಆದವು. ಅಂದರೆ, ಈ ಷೇರಿಗೆ ಒಂದು ದಿನಕ್ಕೆ ನಿಗದಿಪಡಿಸಿದ ಗರಿಷ್ಠ ಬೆಲೆ ಹೆಚ್ಚಳ ಮಿತಿಯಾದ ಶೇಕಡಾ 10ರಷ್ಟು ಏರಿಕೆಯನ್ನು ಕಂಡವು.

    ಈ ಕಂಪನಿಯ ಷೇರುಗಳ ಬೆಲೆ ಇಂಟ್ರಾಡೇ ವಹಿವಾಟಿನಲ್ಲಿ 986.95 ರೂಪಾಯಿ ಗರಿಷ್ಠ ಮಟ್ಟವನ್ನು ತಲುಪಿದವು.
    ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಅತ್ಯುತ್ತಮ ಫಲಿತಾಂಶವೇ ಈ ಏರಿಕೆಗೆ ಕಾರಣವಾಗಿದೆ. ಐಪಿಒ ಬಿಡುಗಡೆಯಾಗಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ ನಂತರ ಇದೇ ಮೊದಲ ಬಾರಿಗೆ ಕಂಪನಿಯು ತನ್ನ ತ್ರೈಮಾಸಿಕ ಲಾಭ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ.
    ಏರೋಸ್ಪೇಸ್ ಘಟಕಗಳು ಮತ್ತು ಟರ್ಬೈನ್‌ಗಳನ್ನು ತಯಾರಿಸುವ ಕಂಪನಿಯು ಡಿಸೆಂಬರ್ 2023 ತ್ರೈಮಾಸಿಕದಲ್ಲಿ ಮೂರು ಪಟ್ಟು ಹೆಚ್ಚು ಲಾಭವನ್ನು ವರದಿ ಮಾಡಿದೆ.

    ಸಚಿನ್ ತೆಂಡೂಲ್ಕರ್ ಅವರ ಹೂಡಿಕೆ ಇರುವ ಆಜಾದ್ ಇಂಜಿನಿಯರಿಂಗ್‌ನ ನಿವ್ವಳ ಲಾಭವು ಡಿಸೆಂಬರ್ 2023 ರಲ್ಲಿ ಮೂರು ಪಟ್ಟು ಹೆಚ್ಚಿ, 16.8 ಕೋಟಿ ರೂ. ತಲುಪಿದೆ. ಹೈದರಾಬಾದ್ ಮೂಲದ ಕಂಪನಿಯು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ರೂ.3.83 ಕೋಟಿ ನಿವ್ವಳ ಲಾಭ ಗಳಿಸಿತ್ತು. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ 49 ಪ್ರತಿಶತದಷ್ಟು ಹೆಚ್ಚಿ 89.23 ಕೋಟಿ ರೂ. ತಲುಪಿದೆ. ವರ್ಷದ ಹಿಂದೆ ಕಂಪನಿಯ ಆದಾಯ 68.8 ಕೋಟಿ ರೂ. ಇತ್ತು.
    ಡಿಸೆಂಬರ್ 31, 2023 ಕ್ಕೆ ಕೊನೆಗೊಳ್ಳುವ ಒಂಬತ್ತು ತಿಂಗಳಿಗೆ ಕಂಪನಿಯು ರೂ 43.65 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಕಂಪನಿಯು ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ. 6.35 ಕೋಟಿ ನಿವ್ವಳ ನಷ್ಟ ಕಂಡಿತ್ತು. ಕಾರ್ಯಾಚರಣೆಗಳಿಂದ ಅದರ ಆದಾಯವು 49 ಪ್ರತಿಶತದಷ್ಟು ಬೆಳೆದು ರೂ 247.97 ಕೋಟಿಗೆ ತಲುಪಿದೆ,

    ಇತ್ತೀಚೆಗೆ ಈ ಕಂಪನಿಯು ಬ್ರಿಟಿಷ್ ಐಷಾರಾಮಿ ಕಾರು ತಯಾರಕ ರೋಲ್ಸ್ ರಾಯ್ಸ್ ಜತೆಗೆ ದೀರ್ಘಾವಧಿ ಒಪ್ಪಂದ ಮಾಡಿಕೊಂಡಿದೆ.
    ಆಜಾದ್ ಎಂಜಿನಿಯರಿಂಗ್‌ನ ಷೇರುಗಳನ್ನು ಡಿಸೆಂಬರ್ 2023 ರಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪಟ್ಟಿ ಮಾಡಲಾಗಿತ್ತು. ಪ್ರತಿ ಷೇರಿಗೆ ಶೇಕಡಾ 37.40 ಪ್ರೀಮಿಯಂನೊಂದಿಗೆ ಷೇರು ಮಾರುಕಟ್ಟೆ ಪ್ರವೇಶಿಸಿತ್ತು. ಐಪಿಒದಲ್ಲಿ 524 ರೂಪಾಯಿ ಇದ್ದ ಷೇರು 710 ರೂಪಾಯಿಗೆ ಮಾರುಕಟ್ಟೆ ಪ್ರವೇಶಿಸಿತ್ತು.

    ಕಳೆದ ಡಿಸೆಂಬರ್​ನಲ್ಲಿ ಐಪಿಒ ಆರಂಭದಿಂದ ಇದುವರೆಗೆ ಶೇಕಡಾ 88ರಷ್ಟು ಏರಿಕೆಯನ್ನು ಈ ಷೇರು ಕಂಡಿದೆ. ಜನವರಿ 31, 2024 ರಂದು ಈ ಷೇರುಗಳ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1,013 ರೂ. ತಲುಪಿತ್ತು. ದಿಗ್ಗಜ ಕ್ರಿಕೆಟರ್​ ಸಚಿನ್ ತೆಂಡೂಲ್ಕರ್ ಅವರು ಈ ಕಂಪನಿಯಲ್ಲಿ ಅಂದಾಜು 4.5 ಲಕ್ಷ ಷೇರುಗಳನ್ನು ಹೊಂದಿದ್ದಾರೆ. ಕಂಪನಿಯ ಷೇರುದಾರರಲ್ಲಿ ಕ್ರಿಕೆಟರ್​ ವಿವಿಎಸ್ ಲಕ್ಷ್ಮಣ್ ಮತ್ತು ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್ ಕೂಡ ಇದ್ದಾರೆ.

    ಎಸ್​ಸಿ, ಎಸ್​ಟಿ, ಒಬಿಸಿ ಮೀಸಲಾತಿಯಿಂದ ಸರ್ಕಾರಿ ಕೆಲಸದಲ್ಲಿ ಗುಣಮಟ್ಟ ಕುಸಿತ: ನೆಹರು ಬರೆದ ಪತ್ರ ಓದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

    ಹಿಂಡೆನ್‌ಬರ್ಗ್ ವಿವಾದ ಪೂರ್ವ ಮಟ್ಟ ಸಮೀಪಿಸಿದ ಅದಾನಿ ಷೇರು: ಇನ್ನೊಂದೇ ತಿಂಗಳಲ್ಲಿ 1,000-1,500 ರೂ. ಏರುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು

    291ರಿಂದ 2 ರೂಪಾಯಿಗೆ ಕುಸಿದಿದ್ದ ಟಾಟಾ ಷೇರಿಗೆ ಮತ್ತೆ ಬೇಡಿಕೆ: ಬುಧವಾರ 8% ಹೆಚ್ಚಳದೊಂದಿಗೆ 98 ರೂಪಾಯಿಗೆ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts