More

    ಹಿಂಡೆನ್‌ಬರ್ಗ್ ವಿವಾದ ಪೂರ್ವ ಮಟ್ಟ ಸಮೀಪಿಸಿದ ಅದಾನಿ ಷೇರು: ಇನ್ನೊಂದೇ ತಿಂಗಳಲ್ಲಿ 1,000-1,500 ರೂ. ಏರುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು

    ಮುಂಬೈ: ಅದಾನಿ ಗ್ರೂಪ್‌ನ ಅತ್ಯಂತ ಬೆಲೆಯುಳ್ಳ ಮತ್ತು ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ ಬುಧವಾರ ಪ್ರಬಲವಾಗಿ ಏರಿತು, ಷೇರು ಬೆಲೆಯು ಬಿಎಸ್‌ಇಯಲ್ಲಿ 5 ವಾರಗಳ ಗರಿಷ್ಠ ಮಟ್ಟವಾದ 3,275 ರೂಪಾಯಿ ತಲುಪಿತು. ಈ ಷೇರಿನ ಬೆಲೆ ಈ ಹಿಂಡೆನ್‌ಬರ್ಗ್ ವಿವಾದ ಪೂರ್ವ ಮಟ್ಟವನ್ನು ಸಮೀಪಿಸಿ. ಷೇರುಗಳ ಕಿರು ಮಾರಾಟಗಾರ ಸಂಸ್ಥೆಯಾದ ಹಿಂಡೆನ್​ಬರ್ಗ್​ ಆರೋಪದ ಹಿನ್ನೆಲೆಯಲ್ಲಿ ಈ ಷೇರು ಸಾಕಷ್ಟು ಕುಸಿತ ಕಂಡಿತ್ತು. ಈ ಆರೋಪದ ಮುಂಚಿನ ಬೆಲೆಯನ್ನು ಶೀಘ್ರದಲ್ಲಿಯೇ ತಲುಪುವ ನಿರೀಕ್ಷೆ ಇದೆ.
    ಅದಾನಿ ಗ್ರೂಪ್‌ನ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ ಮಾರುಕಟ್ಟೆ ತಜ್ಞರು, ಈ ಷೇರಿನ ಬೆಲೆ 4,000 ರೂಪಾಯಿ ದಾಟಲಿದೆ ಎಂದು ಅಂದಾಜು ಮಾಡಿದ್ದಾರೆ.

    ಅದಾನಿ ಎಂಟರ್‌ಪ್ರೈಸಸ್ ಷೇರಿನ ಬೆಲೆ ಮುಂಬರುವ ತಿಂಗಳುಗಳಲ್ಲಿ ಪ್ರತಿ ಷೇರಿಗೆ 1,000 ರಿಂದ 1,500 ರೂ. ಹೆಚ್ಚಾಗುವ ನಿರೀಕ್ಷೆ ಇದೆ. ಅಮೆರಿಕದ ಹಣಕಾಸು ಸೇವಾ ಸಂಸ್ಥೆಯಾದ ಕ್ಯಾಂಟರ್ ಫಿಟ್ಜ್‌ಗೆರಾಲ್ಡ್‌ನ ಇತ್ತೀಚಿನ ವರದಿಯಲ್ಲಿ, ಅದಾನಿ ಎಂಟರ್‌ಪ್ರೈಸಸ್ ಕಂಪನಿಯು ಭಾರತವು ಸಾಧಿಸಲು ಬಯಸುವ ಎಲ್ಲದರ ಕೇಂದ್ರವಾಗಿದೆ ಎಂದು ಹೇಳಲಾಗಿದೆ.

    ಅದಾನಿ ಎಂಟರ್‌ಪ್ರೈಸಸ್‌ನ ಟಾರ್ಗೆಟ್ ಪ್ರೈಸ್​ ರೂ 4,368 ಮತ್ತು ರೂ 4,688 ಆಗಿದ್ದು, ಈ ಮಟ್ಟವನ್ನು ಸಾಧಿಸುವ ಕಾಲಮಿತಿಯನ್ನು 12 ತಿಂಗಳು ಎಂದು ಊಹಿಸಲಾಗಿದೆ.

    ಬಿಎಸ್ಇಯಲ್ಲಿ ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಕನಿಷ್ಠ 2.2% ರಷ್ಟು ಏರಿಕೆ ಕಂಡು 52 ವಾರದ ಗರಿಷ್ಠ ಬೆಲೆಯಾದ 3,275.00 ರೂಪಾಯಿ ತಲುಪಿದವು. ಹಿಂಡೆನ್‌ಬರ್ಗ್‌ನ ಹಗರಣದ ಆಘಾತಗಳ ಮೊದಲು ಜನವರಿ 1, 2023 ರಂದು ಅದರ ಅತ್ಯುನ್ನತ ಮಟ್ಟವಾದ 3,879 ರೂಪಾಯಿಗಳನ್ನು ಮುಟ್ಟಲು ಅದಾನಿ ಈಗ ಕೇವಲ ಒಂದೆರಡು ನೂರು ರೂಪಾಯಿಗಳ ದೂರದಲ್ಲಿದೆ.

    ಡಿಸೆಂಬರ್​ ಮೂರನೇ ತ್ರೈಮಾಸಿಕದಲ್ಲಿ (Q3FY24), ಅದಾನಿ ಎಂಟರ್‌ಪ್ರೈಸಸ್ 1,888 ಕೋಟಿ ರೂಪಾಯಿಗಳ ಲಾಭವನ್ನು ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 820 ಕೋಟಿ ರೂಪಾಯಿ ಗಳಿಸಿದ್ದು, ಈಗ 130% ರಷ್ಟು ಏರಿಕೆಯಾಗಿದೆ. ಒಟ್ಟು ಆದಾಯವು 7% ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿ 28,827 ಕೋಟಿ ರೂ.ಗೆ ತಲುಪಿದೆ.

    “ನಾವು ಅಧಿಕ ತೂಕದ ರೇಟಿಂಗ್ ಮತ್ತು ರೂ 4,368 ಪ್ರೈಸ್​ ಟಾರ್ಗೆಟ್​ 12-ತಿಂಗಳಿಗೆ ನೀಡುತ್ತಿದ್ದೇವೆ. ಭಾರತವು ಈಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ಮಹತ್ವಾಕಾಂಕ್ಷೆಗಳನ್ನು ಹೊಂದಿದೆ. 2030 ರ ಹೊತ್ತಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ” ಎಂದು ಕ್ಯಾಂಟರ್ ವರದಿ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts