More

    ವರ್ಷದ ಗರಿಷ್ಠ ಬೆಲೆ ಮುಟ್ಟಿದ ಅದಾನಿ ಸೋಲಾರ್ ಎನರ್ಜಿ ಷೇರು: ಬುಧವಾರ 16% ಏರಿಕೆಯಾಗಿದ್ದರ ಹಿಂದಿನ ಕಾರಣಗಳೇನು?

    ಮುಂಬೈ: ಬುಧವಾರದ ವಹಿವಾಟಿನ ಸಮಯದಲ್ಲಿ ಅದಾನಿ ಗ್ರೂಪ್‌ನ ಬಹುಪಾಲು ಷೇರುಗಳು ಏರುಗತಿಯ ವಹಿವಾಟು ನಡೆಸಿದವು. ಈ ಪೈಕಿ ಒಂದು ಷೇರು ಬೆಲೆಯು ಹೊಸ 52 ವಾರಗಳ ಗರಿಷ್ಠವನ್ನು ಮುಟ್ಟಿತು. ಅಲ್ಲದೆ, ಒಂದೇ ದಿನದಲ್ಲಿ ಅಂದಾಜು 16% ಏರಿಕೆ ಕಂಡು ಹೂಡಿಕೆದಾರರಿಗೆ ಉತ್ತಮ ಆದಾಯ ನೀಡಿತು.

    ಇದು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್​ (Adani Green Energy Ltd) ಷೇರು. ಈ ಕಂಪನಿಯು 50 ಕೋಟಿ ಡಾಲರ್ ಮೊತ್ತದ ಬಾಂಡ್‌ಗಳನ್ನು ಸಂಗ್ರಹಿಸಲು ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿರುವುದು ಷೇರು ಬೆಲೆ ಹೆಚ್ಚಳಕ್ಕೆ ಕೊಡುಗೆ ನೀಡಿದೆ.

    ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರಿನ ಬೆಲೆ 15.73% ರಷ್ಟು ಏರಿಕೆಯಾಯಿತು.ಈ ಮೂಲಕ 52 ವಾರಗಳ ಗರಿಷ್ಠ ಬೆಲೆಯಾದ 1,991.60 ರೂಪಾಯಿಗೆ ತಲುಪಿತು. ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ 439.35 ಇದೆ. ಈಗ ಇದಕ್ಕಿಂತ 353.31% ರಷ್ಟು ಬೆಲೆ ಹೆಚ್ಚಾಗಿದೆ.

    ಗೌತಮ್ ಅದಾನಿ ಅವರ ಕಂಪನಿಗಳ ಸಮೂಹವು ಡಾಲರ್ ಬಾಂಡ್‌ಗಳ ಮೂಲಕ ಅಂದಾಜು 50 ಕೋಟಿ ಡಾಲರ್ (4148 ಕೋಟಿ ರೂಪಾಯಿ)​ ಸಂಗ್ರಹಿಸಲು ಮಾತುಕತೆ ನಡೆಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸ್ಟಾಕ್ ಬೆಲೆ ಏರಿದೆ. ಅಮೆರಿಕದ ಷೇರುಗಳ ಕಿರು ಮಾರಾಟ ಸಂಸ್ಥೆಯಾದ ಇದೇ ಬ್ಲೂಮ್​ಬರ್ಗ್​ ಅದಾನಿ ಸಮೂಹದ ವಿರುದ್ಧ ಆರೋಪಗಳನ್ನು ಮಾಡಿ ವರದಿ ಪ್ರಕಟಿಸಿತ್ತು. ಇದರಿದಂದಾಗಿ ಆದಾನಿ ಸಮೂಹದ ಷೇರುಗಳು ಕುಸಿತ ಕಂಡಿದ್ದವು.

    ಸೌರಶಕ್ತಿ ಉತ್ಪಾದಕ ಅದಾನಿ ಗ್ರೀನ್ ಎನರ್ಜಿಯು ಅಮೆರಿಕ ಸಂಸ್ಥೆ ಸೇರಿದಂತೆ ವಿದೇಶಿ ಬ್ಯಾಂಕ್‌ಗಳ ಗುಂಪಿನೊಂದಿಗೆ ಯೋಜಿತ ವಹಿವಾಟಿನ ಕುರಿತು ಚರ್ಚಿಸುತ್ತಿದೆ ಎಂದು ಈಗ ಬ್ಲೂಮ್​ಬರ್ಗ್​ ಹೇಳಿದೆ. ಆದರೆ, ಅದಾನಿ ಗ್ರೂಪ್ ಅಥವಾ ಅದಾನಿ ಗ್ರೀನ್ ಎನರ್ಜಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

    ಈ ಕಂಪನಿಯು ಇತ್ತೀಚೆಗೆ ತನ್ನ ತ್ರೈಮಾಸಿಕ ಲಾಭದಲ್ಲಿ ಬಲವಾದ ಜಿಗಿತವನ್ನು ದಾಖಲಿಸಿದೆ. ಅದಾನಿ ಗ್ರೀನ್ ತನ್ನ ಮೂರನೇ ತ್ರೈಮಾಸಿಕ (Q3 FY24) ಲಾಭವು ಹಿಂದಿನ ವರ್ಷಕ್ಕಿಂತ ದ್ವಿಗುಣಗೊಂಡಿದೆ ಎಂದು ಹೇಳಿದೆ. ಡಿಸೆಂಬರ್ 31, 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಲಾಭವು ರೂ 256 ಕೋಟಿಗೆ ಏರಿದೆ ಎಂದು ಅದು ಹೇಳಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ 103 ಕೋಟಿ ಲಾಭ ಮಾಡಿತ್ತು.

    ಅದಾನಿ ಗ್ರೀನ್​ ಎನರ್ಜಿಯ ಕಾರ್ಯಾಚರಣೆಯ ಸಾಮರ್ಥ್ಯವು 16% ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ 8,478 MW ಗೆ ತಲುಪಙಇದೆ. ಇಂಧನ ಮಾರಾಟವು 59% ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ 16,293 ಮಿಲಿಯನ್ ಯುನಿಟ್‌ಗಳಿಗೆ ಮುಟ್ಟಿದೆ.

    ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL) ಭಾರತದ ಅತಿದೊಡ್ಡ ಮತ್ತು ಶುದ್ಧ ಇಂಧನ ಪರಿವರ್ತನೆಯನ್ನು ಸಕ್ರಿಯಗೊಳಿಸುವ ವಿಶ್ವದ ಪ್ರಮುಖ ನವೀಕರಿಸಬಹುದಾದ ಇಂಧನ ಕಂಪನಿಯಾಗಿದೆ. ಗ್ರಿಡ್-ಸಂಪರ್ಕಿತ ಸೌರ, ಗಾಳಿ ಮತ್ತು ಹೈಬ್ರಿಡ್ ನವೀಕರಿಸಬಹುದಾದ ವಿದ್ಯುತ್ ಸ್ಥಾವರಗಳನ್ನು ಅಭಿವೃದ್ಧಿಪಡಿಸಿ, ನಿರ್ವಹಿಸುತ್ತದೆ. ಈ ಕಂಪನಿ 12 ರಾಜ್ಯಗಳಲ್ಲಿ ಹರಡಿದೆ, ರಾಜಸ್ಥಾನದ ಜೈಸಲ್ಮೇರ್‌ನಲ್ಲಿ 2,140 ಮೆಗಾವ್ಯಾಟ್ (MW) ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಪವನ-ಸೌರ ಹೈಬ್ರಿಡ್ ಪವರ್ ಘಟಕ ಹೊಂದಿದೆ.

    ಎಲ್​ಐಸಿ ಷೇರುಗಳಿಗೆ ಸಾರ್ವಕಾಲಿಕ ಗರಿಷ್ಠ ಬೆಲೆ: ಎದೆಯುಬ್ಬಿಸಿ, ಕಣ್ಣೆತ್ತಿ ಹೆಮ್ಮೆಯಿಂದ ಶ್ಲಾಘಿಸಿದ ಪ್ರಧಾನಿ ಮೋದಿ ಭೂತ ಬಂಗಲೆ ಕತೆ ಹೇಳಿದ್ದೇಕೆ?

    ಬಿಎಸ್​ಇ ಸೂಚ್ಯಂಕ ಅಲ್ಪ ಕುಸಿತ; ನಿಫ್ಟಿ ಸ್ವಲ್ಪ ಏರಿಕೆ: ಆರ್​ಬಿಐ ಬಡ್ಡಿ ದರ ನಿರ್ಧಾರಕ್ಕೆ ಕಾಯುತ್ತಿರುವ ಹೂಡಿಕೆದಾರರಿಂದ ಎಚ್ಚರಿಕೆಯ ನಡೆ

    ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿದಾಯ್ದ ಪ್ರಧಾನಿ: ಉತ್ತರ-ದಕ್ಷಿಣ ವಿಭಜನೆ ಹೇಳಿಕೆ ನೀಡದಿರಲು ಭಾವಪೂರ್ಣ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts