More

    ಪ್ರಣೀತಾ ಫೌಂಡೇಷನ್ ಸಹಾಯ ಹಸ್ತ … 300 ಕುಟುಂಬಗಳಿಗೆ ತಲಾ 2000 ರೂ

    ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಾಡಿನ ಕಡು ಬಡವರಿಗೆ, ಕಾರ್ಮಿಕರಿಗೆ ಸರ್ಕಾರದಿಂದ ಮತ್ತು ಸಂಘ ಸಂಸ್ಥೆಗಳಿಂದ ಅಪಾರ ಪ್ರಮಾಣದ ನೆರವು ಹರಿದು ಬರುತ್ತಿದೆ. ಸಿನಿಮಾ ಮಂದಿಯೂ ದೇಣಿಗೆ ನೀಡುತ್ತಿದ್ದಾರೆ. ಆಹಾರ ಹಂಚಿಕೆ ಮಾಡುತ್ತಿದ್ದಾರೆ. ಬಡವರನ್ನು ಗುರುತಿಸಿ ಅವರ ಖಾತೆಗೆ ಹಣ ಜಮೆ ಮಾಡುತ್ತಿದ್ದಾರೆ. ಈಗ ನಟಿ ಪ್ರಣೀತಾ ಸುಭಾಷ್, ಪ್ರಣೀತಾ ಫೌಂಡೇಷನ್ ಮೂಲಕ ಜನರನ್ನು ತಲುಪಿದ್ದಾರೆ. ಅಂದರೆ, ಫೌಂಡೇಷನ್ ಮೂಲಕ ಹಣ ಸಂಗ್ರಹಿಸಿ ಅವಶ್ಯಕತೆ ಇದ್ದವರ ಖಾತೆಗೆ ಹಾಕುತ್ತಿದ್ದಾರೆ.

    ಮೊದಲಿಗೆ ಫೌಂಡೇಷನ್ ವತಿಯಿಂದ ಒಂದು ಲಕ್ಷ ನೀಡಿರುವ ಪ್ರಣೀತಾ, ಸಾಮಾಜಿಕ ಜಾಲತಾಣದಲ್ಲಿ ಕ್ರೌಡ್ ಫಂಡಿಂಗ್‌ಗೆ ಮನವಿ ಮಾಡಿದ್ದರು. ಆಸಕ್ತ ದಾನಿಗಳು ಕೈಲಾದಷ್ಟು ಹಣದ ನೆರವು ನೀಡಿದ್ದರು. ಇದೀಗ ಅದು 6ಲಕ್ಷಕ್ಕೆ ಬಂದು ನಿಂತಿದೆ. ಆ ಆರು ಲಕ್ಷ ಮೊತ್ತವನ್ನು 300 ಕುಟುಂಬಗಳಿಗೆ ನೀಡುವ ಪ್ಲ್ಯಾನ್ ಮಾಡಿದ್ದು, ಒಟ್ಟು 10ಲಕ್ಷ ಜಮೆ ಮಾಡಿ, 500 ಕುಟುಂಬಗಳಿಗೆ ತಲಾ ಒಂದು ಕುಟುಂಬಕ್ಕೆ 2000 ಸಾವಿರ ನೀಡಬೇಕೆಂಬುದು ಪ್ರಣೀತಾ ಫೌಂಡೇಷನ್ ಗುರಿ. ಈಗಾಗಲೇ 300 ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರ ಆರ್ಥಿಕ ಸ್ಥಿತಿಗತಿ ವಿಚಾರಿಸಿ, ಅಗತ್ಯತೆಯ ಆಧಾರದ ಮೇಲೆ 2000 ಮೊತ್ತವನ್ನು ನೇರವಾಗಿ ಅವರ ಖಾತೆಗೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ.

    ‘ಸರ್ಕಾರ ಈಗಾಗಲೇ ಅಕ್ಕಿ, ಬೇಳೆ, ಗೋದಿ ಸೇರಿ ಹಲವು ಬಗೆಯ ದವಸ ಧಾನ್ಯ ನೀಡುತ್ತಿದೆ. ಆದರೆ, ಅದನ್ನು ಹೊರತುಪಡಿಸಿ, ಬೇರೆ ಖರ್ಚುಗಳಿಗೆ ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ ನಾವು ನೀಡುವ 2000 ಹಣವನ್ನು ಅವರ ಔಷಧ, ತರಕಾರಿ ಸೇರಿ ದಿನಬಳಕೆ ಖರ್ಚಿಗೆ ಬಳಕೆ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇದರ ಪ್ರಮಾಣವನ್ನು ಹೆಚ್ಚಿಸುವ ವಿಚಾರವೂ ಇದೆ’ ಎನ್ನುತ್ತಾರೆ ಪ್ರಣೀತಾ.

    ಸದ್ಯ ಮನೆಯಲ್ಲಿಯೇ ಇರುವ ಪ್ರಣೀತಾ, ಅಡುಗೆ ಕಲಿಕೆ, ಗಾರ್ಡನಿಂಗ್, ವಿನ್ಯಾಸ ಸೇರಿ ಹಲವು ಆಸಕ್ತಿಕರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

    ‘ಲಂಕಾಸುರ’ನಾದ ವಿನೋದ್ ಪ್ರಭಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts