ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರವು ಓಟಿಟಿಗೆ ಬರೋದು ಯಾವಾಗ?

Pathaan 15
Published on

ಮುಂಬೈ: ಈ ವರ್ಷ ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳ ಪೈಕಿ ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರ ಸಹ ಒಂದು. ಈ ಚಿತ್ರವು ಬಾಲಿವುಡ್​ಗಷ್ಟೇ ಅಲ್ಲ, ಸಾಲುಸಾಲು ಸೋಲುಗಳನ್ನು ಕಂಡಿರುವ ಶಾರುಖ್​ ಖಾನ್​ ಅವರ ವೃತ್ತಿಜೀವನಕ್ಕೂ ಆಕ್ಸಿಜನ್​ ನೀಡಬಹುದು ಎಂಬ ನಿರೀಕ್ಷೆ ಹಲವರಿಗಿದೆ.

ಇದನ್ನೂ ಓದಿ:

ಈಗ ಚಿತ್ರವು ಇದೇ ತಿಂಗಳು 25ರಂದು ಜಗತ್ತಿನಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಶಾರುಖ್​ ಖಾನ್​ ಸಹ ಚಿತ್ರವನ್ನು ಪ್ರಮೋಟ್​ ಮಾಡುವಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್​ನ್ನು ಜಗತ್ತಿನ ಅತ್ಯಂತ ಎತ್ತರದ ಕಟ್ಟವಾದ ದುಬೈನ್​ ಬುರ್ಜ್​ ಖಲೀಫಾ ಮೇಲೆ ಪ್ರದರ್ಶಿಸಲಾಯಿತು. ಇದಲ್ಲದೆ, ಬೇರೆಬೇರೆ ಊರುಗಳಿಗೂ ಶಾರುಖ್ ಹೋಗಿ ಚಿತ್ರದ ಪ್ರಚಾರ ಮಾಡಿ ಬರಲಿದ್ದಾರಂತೆ.

'ಪಠಾಣ್​' ಚಿತ್ರದ ಬಿಡುಗಡೆಗೆ ಅವರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇನ್ನು, ಕೆಲವು ಮಂದಿ ಈ ಚಿತ್ರ ಓಟಿಟಿಯಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ. ಈ ಹಿಂದೆ ಯಶ್​ರಾಜ್​ ಫಿಲಂಸ್​ ನಿರ್ಮಾಣದ ಚಿತ್ರಗಳು ಬಿಡುಗಡೆಯಾಗಿ ಕೆಲವು ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ಸಹ ತಕ್ಷಣವೇ ಓಟಿಟಿಯಲ್ಲಿ ಬರಬಹುದಾ? ಎಂಬ ಕುತೂಹಲ ಕೆಲವರಲ್ಲಿದೆ.

ಇದನ್ನೂ ಓದಿ:

ಹಾಗೇನಿಲ್ಲ. ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿ ಮೂರು ತಿಂಗಳ ನಂತರ ಓಟಿಟಿಯಲ್ಲಿ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಒಪ್ಪಂದ ಮಾಡಿಕೊಂಡಿದೆಯಂತೆ. ಅದರಂತೆ, ಜನವರಿ 25ಕ್ಕೆ 'ಪಠಾಣ್​' ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೆ, ಅದಾಗಿ ಮೂರು ತಿಂಗಳ ನಂತರ, ಅಂದರೆ ಏಪ್ರಿಲ್​ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆಯಂತೆ. ಮೂಲಗಳ ಪ್ರಕಾರ, ಅಮೇಜಾನ್​ ಪ್ರೈಮ್​ಗೆ ಡಿಜಿಟಲ್​ ಹಕ್ಕುಗಳು ಮಾರಾಟವಾಗಿದ್ದು, 'ಪಠಾಣ್​' ಜತೆಗೆ ಇದೇ ಸಂಸ್ಥೆಯ ಸಲ್ಮಾನ್​ ಖಾನ್​ ಅಭಿನಯದ 'ಟೈಗರ್​ 3' ಚಿತ್ರದ ಡಿಜಿಟಲ್​ ಹಕ್ಕುಗಳನ್ನು ಕೊಳ್ಳುವುದಕ್ಕೆ ಪ್ರೈಮ್​ 200 ಕೋಟಿ ರೂ. ಖರ್ಚು ಮಾಡಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net