5ನೇ ಮಹಡಿಯಿಂದ ಜಾರಿ ಬಿದ್ದ ಬಾಲಿವುಡ್ ನಿರ್ದೇಶಕನ ಮಗ ಸಾವು

Published on
ಮುಂಬೈ: ಬಾಲಿವುಡ್ ಸಿನಿಮಾ ನಿರ್ದೇಶಕ ಗಿರೀಶ್ ಮಲಿಕ್​ರ 17 ವರ್ಷದ ಮಗ ಮನ್ನನ್‌ ಮುಂಬೈನ ಅಂಧೇರಿಯಲ್ಲಿರುವ ಅಪಾರ್ಟ್​ಮೆಂಟ್​​ನ 5ನೇ ಮಹಡಿಯಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಆಕಸ್ಮಿಕವಾಗಿ ಮೇಲಿಂದ ಜಾರಿ ಬಿದ್ದ ಮನ್ನನ್​ನನ್ನು ತಕ್ಷಣ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಮನ್ನನ್ ಬದುಕುಳಿಯಲಿಲ್ಲ. 17 ವರ್ಷದ ಮನ್ನನ್ ಶುಕ್ರವಾರ ತಮ್ಮ ಮನೆಯ ಮಹಡಿಯಿಂದ ಜಾರಿ ಬಿದ್ದಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಅಂದಹಾಗೆ, ನಿರ್ದೇಶಕ ಗಿರೀಶ್ ಅವರ ಮಗ ಮನ್ನನ್ ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ಗೆಳೆಯರೊಂದಿಗೆ ಹೋಳಿ ಆಡಿದ ನಂತರ ಮನೆಗೆ ವಾಪಾಸ್ ಬಂದಿದ್ದಾರೆ. ಬಳಿಕ, ತನ್ನ ಮನೆಯಿಂದ ಕೆಳಗೆ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಇದು ಆಕಸ್ಮಿಕ ಸಾವೆಂದು ಸ್ವತಃ ನಿರ್ದೇಶಕ ಗಿರೀಶ್ ಅವರೆ ಹೇಳಿಕೆ ನೀಡಿದ್ದಾರೆ. ಸದ್ಯ, ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಮನ್ನನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಾಲಿವುಡ್​ ಮಂದಿ ಗಿರೀಶ್​ಗೆ ಸಂತಾಪ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net