

‘ಪರಿಣೀತ’, ‘ಗುರು’, ‘ಪಾ’, ‘ಕಹಾನಿ’, ‘ದಿ ಡರ್ಟಿ ಪಿಕ್ಚರ್’ ಸೇರಿ ಎರಡು ದಶಕಗಳಲ್ಲಿ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಹೆಗ್ಗಳಿಕೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರಿಗೆ ಸಲ್ಲುತ್ತದೆ. 43 ವರ್ಷದ ವಿದ್ಯಾ ಕಳೆದ ಜುಲೈನಲ್ಲಿ ಬಿಡುಗಡೆಯಾದ ‘ನೀತ್’ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.
ಇದನ್ನೂ ಓದಿ : ‘ಖುಷಿ’ ಸಿನಿಮಾ OTT ರಿಲೀಸ್ ಡೇಟ್ ಫಿಕ್ಸ್…!
ನಟಿಯರು ಅಂದರೆ ಇಷ್ಟೇ ಎತ್ತರ, ಇಷ್ಟೇ ಶೇಪ್, ಸೈಜ್ ಇರಬೇಕು ಎನ್ನುವ ಬಾಲಿವುಡ್‌ನ ನಂಬಿಕೆಯನ್ನು ಮುರಿದು, ಮಿಂಚಿದ ಖ್ಯಾತಿ ವಿದ್ಯಾಗೆ ಸಲ್ಲುತ್ತದೆ. ಆದರೆ, ಈಗಲೂ ಕೆಲವರು ‘ನನ್ನ ದೇಹದ ಬಗ್ಗೆ ಕಮೆಂಟ್ ಮಾಡುವುದನ್ನು ಬಿಟ್ಟಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ವಿದ್ಯಾ.
ಇತ್ತೀಚೆಗಷ್ಟೆ ಅವರು ಮಸಾಜ್ ಪಾರ್ಲರ್‌ಗೆ ಹೋಗಿದ್ದರಂತೆ. ‘ಅಲ್ಲಿದ್ದ ಮಹಿಳೆ, ‘ಅರೆ, ಮತ್ತೆ ತೂಕ ಹೆಚ್ಚಿಸಿಕೊಂಡಿದ್ದೀರಾ’ ಎಂದರು. ನಾನಲ್ಲಿಗೆ ಮಸಾಜ್‌ಗೆ ಹೋಗಿದ್ದೆ. ಆಕೆ ನನ್ನ ಬಗ್ಗೆ, ನನ್ನ ದೇಹದ ಕುರಿತು ಮಾತನಾಡಲಿ ಅಂತಲ್ಲ. ಆಕೆಯ ಮಾತು ಕೇಳಿ ನನಗೆ ತುಂಬ ಬೇಸರವಾಯಿತು. ಹೀಗಾಗಿ ನನ್ನ ದೇಹದ ಬಗ್ಗೆ ಕಮೆಂಟ್ ಮಾಡಬೇಡಿ, ನನಗಿಷ್ಟ ಆಗುವುದಿಲ್ಲ ಎಂದೆ. ಜಾಲತಾಣದಲ್ಲಂತೂ ಈ ರೀತಿಯ ಕಮೆಂಟ್ ತುಂಬಾ ಜಾಸ್ತಿ. ಇದೇ ಕಾರಣಕ್ಕೆ ನಾನು ಜಾಲತಾಣದಲ್ಲಿ ಕಮೆಂಟ್ ವಿಭಾಗವನ್ನು ನಿಷ್ಕ್ರಿಯಗೊಳಿಸಿದ್ದೆ. ಈಗಂತೂ ನಾನು ಕಮೆಂಟ್‌ಗಳತ್ತ ಹೋಗುವುದೇ ಇಲ್ಲ’ ಎಂದು ಹೇಳಿಕೊಂಡಿದ್ದಾರೆ ವಿದ್ಯಾ ಬಾಲನ್.
-ಏಜೆನ್ಸೀಸ್