

ಜವಾನ್‌ನಲ್ಲಿ ಶಾರುಖ್ ಜೊತೆ ನಟಿಸಿದ ನಂತರ ಪ್ರಿಯಾಮಣಿ ಮತ್ತಷ್ಟು ಫೇಮಸ್ ಆಗಿದ್ದಾರೆ. ಈ ಹೊತ್ತಲ್ಲೇ ಪ್ರಿಯಾಮಣಿಯನ್ನು ಯಾರೋ ಆಂಟಿ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಪ್ರಿಯಾಮಣಿ ಕೊಟ್ಟ ಖಡಕ್ ಉತ್ತರ ಏನು ಗೊತ್ತೆ?
ಅಭಿನಯಕ್ಕೂ ಸೈ-ಗ್ಲಾಮರ್‌ಗೂ ಸೈ ಅನ್ನೋ ಪ್ರಿಯಾಮಣಿ, ಪಂಚಭಾಷೆಗಳಲ್ಲಿ ಮಿಂಚಿದ್ದಾರೆ. ಇದೀಗ ಜವಾನ್‌ನಲ್ಲಿ ಕಿಂಗ್‌ಖಾನ್ ಜೊತೆ ಹಬ್ಬ ಮಾಡಿದ್ದಾರೆ. ಯಾರೋ ಒಬ್ಬ ಇಂಥ ಪ್ರಿಯಾಗೆ ಆಂಟಿ ಎನ್ನಬೇಕಾ? ಯಾರಿಗೆ ತಾನೇ ಪಿತ್ತ ನೆತ್ತಿಗೇರಲ್ಲಾ ಹೇಳಿ..?
ಯಾರೋ ಆಂಟಿ ಎಂದು ಕರೆದಾಕ್ಷಣ, ನಂಗ್ಯಾರೊ ಆಂಟಿ ಅನ್ನೋರು? ನಂಗಿನ್ನೂ 38 ವರ್ಷ. ಹಾಗಿದ್ರೂ ಹಾಟ್ ಹಾಟ್ ಆಗಿದ್ದೀನಿ ಬಾಯ್ ಮುಚ್ಕೊಳ್ಳಿ ಎಂದು ಪ್ರಿಯಾಮಣಿ ಖಡಕ್ ಉತ್ತರ ಕೊಟ್ಟಿದ್ದಾರೆ.
ದ್ಯ ‘ಜವಾನ್' ಸಿನಿಮಾದಲ್ಲಿ ಶಾರುಖ್ ಜೊತೆ ಪ್ರಿಯಾಮಣಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಬಹುನಿರೀಕ್ಷಿತ ‘ಜವಾನ್’ ಸಿನಿಮಾ ಸೆಪ್ಟಂಬರ್ 07 ರಂದು ಜಾಗತಿಕ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದೆ.
ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ನಟಿ ಪ್ರಿಯಾಮಣಿ ಇದೀಗ ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ. ತಮಿಳು, ತೆಲುಗು, ಕನ್ನಡದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಬಹುಭಾಷಾ ನಟಿ ಪ್ರಿಯಾಮಣಿ ಇದೀಗ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ.