

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನದಿನಕ್ಕೂ ಕಗ್ಗಂಟಾಗುತ್ತಿದೆ. ಅದು ಆತ್ಮಹತ್ಯೆಯೋ..ಹತ್ಯೆಯೋ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ತನಿಖೆ, ವಿಚಾರಣೆಗಳು ನಡೆಯುತ್ತಿರುವ ಮಧ್ಯೆಯೇ ಇದೀಗ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ ಆಂಬುಲೆನ್ಸ್ನ ಸಿಬ್ಬಂದಿಯೋರ್ವ ಮತ್ತೊಂದು ಶಾಕಿಂಗ್ ವಿಚಾರ ಹೇಳಿದ್ದಾರೆ.
ಅಂದು ಆಂಬುಲೆನ್ಸ್ನಲ್ಲಿ ಇದ್ದವರ ಪೈಕಿ ಓರ್ವನಾದ ಅರುಣೀಲ್ ಸದಾಡೆಕರ್ ಅವರು ಮಾಧ್ಯಮವೊಂದರ ಜತೆ ಮಾತನಾಡಿ, ಯಾರಾದರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರೆ ಅಂಥವರ ದೇಹ ಹಳದಿ ಬಣ್ಣಕ್ಕೆ ತಿರುಗುವುದಿಲ್ಲ. ಆದರೆ ಸುಶಾಂತ್ ದೇಹ ಹಳದಿಯಾಗಿತ್ತು.
ಹಾಗೇ, ನೇಣು ಹಾಕಿಕೊಂಡರೆ ಕುತ್ತಿಗೆಯ ಸುತ್ತ ಗುರುತು ಕಾಣುತ್ತದೆ. ಆದರೆ ಇವರ ಕತ್ತಿನ ಮುಂಭಾಗದಲ್ಲಿ ಮಾತ್ರ ಗುರುತಾಗಿದೆ. ಹಿಂಭಾಗದಲ್ಲಿ ಇರಲಿಲ್ಲ ಎಂದು ಅರುಣೀಲ್ ತಿಳಿಸಿದ್ದಾರೆ. ಇದನ್ನೂ ಓದಿ: ಸುಶಾಂತ್ ಸಹೋದರಿಯ ಎಫ್ಡಿಯಿಂದ 2.63 ಕೋಟಿ ರೂ. ಸಿಎಗೆ ವರ್ಗಾವಣೆ, ಇಡಿ ವಿಚಾರಣೆಯಲ್ಲಿ ಬಾಯ್ಬಿಟ್ಟ ರಿಯಾ
ಹಾಗೇ ಇನ್ನೊಂದು ಮುಖ್ಯವಾದ ವಿಚಾರವೇನೆಂದರೆ, ಸುಶಾಂತ್ ಕಾಲುಗಳು ಬಾಗಿಕೊಂಡಿದ್ದವು. ನೇಣು ಹಾಕಿಕೊಂಡು ಸತ್ತರೆ, ಕಾಲುಗಳು ಬಾಗಲು ಹೇಗೆ ಸಾಧ್ಯ? ಅವರ ಕಾಲಿನ ಮೇಲೆ ಕೂಡ ಗಾಯದ ಗುರುತು ಇತ್ತು ಎಂದು ವಿವರಿಸಿದ್ದಾರೆ.
ನೇಣು ಹಾಕಿಕೊಂಡ ಸಂದರ್ಭದಲ್ಲಿ ನೋವುಗಳನ್ನು ತಾಳಲಾರದೆ ಸುಶಾಂತ್ ಕಾಲುಗಳಿಂದ ಜಾಸ್ತಿ ಒದ್ದಾಟ ನಡೆಸಿರಬಹುದಲ್ಲ ಎಂದು ಅವರನ್ನು ಪ್ರಶ್ನಿಸಿದಾಗ, ಇರಬಹುದು, ಆದರೆ ಕಾಲುಗಳು ಯಾಕೆ ಬಾಗುತ್ತವೆ. ಇಡೀ ದೇಹಕ್ಕೆ ನೋವಾಗುತ್ತದೆ, ಬಾಯಯಲ್ಲಿ ಬುರುಗು ಬರಬಹುದು..ಆದರೆ ಕಾಲುಗಳು ಬಾಗಲು ಸಾಧ್ಯವಿಲ್ಲ ಎಂದು ಅರುಣೀಲ್ ಪ್ರತಿಪಾದಿಸಿದ್ದಾರೆ. ಅಷ್ಟೇ ಅಲ್ಲ, ಬಾಯಿಯಲ್ಲಿ ಬುರುಗು ಕೂಡ ಬಂದಿರಲಿಲ್ಲ ಎಂದೂ ಹೇಳಿದ್ದಾರೆ.
ಜೂನ್ 14ರಂದು ಮೃತಪಟ್ಟ ನಟ ಸುಶಾಂತ್ ಸಿಂಗ್ ಪ್ರಕರಣವನ್ನು ಸದ್ಯ ಕೇಂದ್ರ ಸರ್ಕಾರ ಸಿಬಿಐಗೆ ಹಸ್ತಾಂತರಿಸಿದೆ. ಸುಶಾಂತ್ ಗೆಳತಿ ರಿಯಾ ಚಕ್ರವತ್ರಿ ಸೇರಿ ಒಟ್ಟು 6 ಮಂದಿಯ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ. ರಿಯಾ ಅವರನ್ನು ಇ.ಡಿ.ಕೂಡ ವಿಚಾರಣೆ ಮಾಡುತ್ತಿದೆ. ಅವರೀಗ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿದ್ದಾರೆ. (ಏಜೆನ್ಸೀಸ್)