ಬ್ರಹ್ಮಾಸ್ತ್ರದಿಂದ ಆಲಿಯಾಗೆ ಬರ್ತ್​ಡೇ ಗಿಫ್ಟ್

Alia
Published on

ಬಾಲಿವುಡ್ ನಟಿ ಆಲಿಯಾ ಭಟ್ ಮಂಗಳವಾರ 29ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಆ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ‘ಬ್ರಹ್ಮಾಸ್ತ್ರ’ ಚಿತ್ರತಂಡ ಚಿತ್ರದಲ್ಲಿನ ಆಲಿಯಾ ಲುಕ್​ಅನ್ನು ಬಿಡುಗಡೆ ಮಾಡಿದೆ. ಈವರೆಗೂ ಚಿತ್ರದಲ್ಲಿ ಆಲಿಯಾ ಹೇಗೆ ಕಾಣಿಸಲಿದ್ದಾರೆ ಎಂಬುದಕ್ಕೆ ಸುಳಿವು ಸಿಕ್ಕಿರಲಿಲ್ಲ. ಇದೀಗ ಕಿರು ವಿಡಿಯೋ ಮತ್ತೊ ಪೋಸ್ಟರ್ ಮೂಲಕ ಆ ಕುತೂಹಲವನ್ನು ತಣಿಸಿದ್ದಾರೆ ನಿರ್ದೇಶಕ ಅಯಾನ್ ಮುಖರ್ಜಿ.

ಇಲ್ಲಿ ಇಶಾ ಹೆಸರಿನ ಪಾತ್ರದಲ್ಲಿ ಆಲಿಯಾ ಪ್ರತ್ಯಕ್ಷರಾಗಿದ್ದಾರೆ. ಮುಖ್ಯಭೂಮಿಕೆಯಲ್ಲಿ ಆಲಿಯಾಗೆ ರಣಬೀರ್ ಕಪೂರ್ ಜೋಡಿಯಾದರೆ, ಇನ್ನುಳಿದಂತೆ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಹಲವರು ಸಿನಿಮಾದಲ್ಲಿದ್ದಾರೆ.

ಮೂರು ಭಾಗಗಳಲ್ಲಿ ಸಿದ್ಧವಾಗಿರುವ ‘ಬ್ರಹ್ಮಾಸ್ತ್ರ’ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಮೂರರ ಪೈಕಿ ಮೊದಲ ಭಾಗ ಸೆಪ್ಟೆಂಬರ್ 9ರಂದು ಬರಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net