

ಬೆಂಗಳೂರು: ನಟ-ನಟಿಯರ ಹುಟ್ಟುಹಬ್ಬಕ್ಕೆ ಚಿತ್ರತಂಡದವರು ಪೋಸ್ಟರ್, ಟೀಸರ್, ಟ್ರೇಲರ್ ಉಡುಗೊರೆಯಾಗಿ ಬಿಡುಗಡೆ ಮಾಡುವುದು ವಾಡಿಕೆ. ಈಗ ಮಯೂರಿ ಹುಟ್ಟುಹಬ್ಬಕ್ಕೂ ಚಿತ್ರತಂಡವೊಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದೆ.
ಶನಿವಾರ ನಟಿ ಮಯೂರಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ‘ಆದ್ಯಂತ’ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಮಯೂರಿ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿ ರುವ ಸಿನಿಮಾ ಇದಾಗಿದ್ದು, ಈಗಾಗಲೇ ಲಾಕ್ಡೌನ್ಗಿಂತ ಮುಂಚೆಯೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿವೆ.
ಈ ಚಿತ್ರದಲ್ಲಿ ಮಯೂರಿ, ದೀಪಾ ಎಂಬ ಪಾತ್ರದಲ್ಲಿ ನಟಿಸಿದ್ದು, ಸಕಲೇಶಪುರದಲ್ಲಿರುವ ಎಸ್ಟೇಟ್ ಮಾರಲು ತನ್ನ ಗೆಳೆಯನೊಂದಿಗೆ ಹೋಗುತ್ತಾಳೆ. ಅಲ್ಲಿ ಅವಳಿಗೆ ಚಿತ್ರವಿಚಿತ್ರವಾದ ಅನುಭವಗಳು ಉಂಟಾಗುತ್ತವೆ. ಇದೆಲ್ಲದರಿಂದ ಆಕೆ ಹೇಗೆ ಪಾರಾಗಿ ಬರುತ್ತಾಳೆ ಎನ್ನುವುದು ಚಿತ್ರದ ಕಥೆಯಂತೆ.
ಚಿತ್ರದಲ್ಲಿ ಮಯೂರಿ ಜತೆಗೆ ದಿಲೀಪ್, ರಮೇಶ್ ಭಟ್, ಶ್ರೀನಾಥ್ ವಸಿಷ್ಠ ಮುಂತಾದವರು ನಟಿಸಿದ್ದಾರೆ. ಈ ಹಿಂದೆ, ಕೆಲವು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ಶರ್ಮಾ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈ ಚಿತ್ರವನ್ನು ರಮೇಶ್ ಬಾಬು ನಿರ್ವಿುಸುತ್ತಿದ್ದು, ನವೀನ್ ಕುಮಾರ್ ಚಲ್ಲ ಛಾಯಾಗ್ರಹಣ ಮಾಡಿದ್ದಾರೆ.