ಬಿಗ್​ಬಾಸ್ ಮನೆಯ ಮುಂದಿನ ವಾರದ ಕ್ಯಾಪ್ಟನ್​ ಜಗದೀಶ್?..BBK13

ಬಿಗ್​ಬಾಸ್ ಮನೆಯ ಮುಂದಿನ ವಾರದ ಕ್ಯಾಪ್ಟನ್​  ಜಗದೀಶ್?..BBK13
Published on: 
  • ಬಿಗ್​ಬಾಸ್ ಮನೆಯ ಮುಂದಿನ ಕ್ಯಾಪ್ಟನ್​ ಜಗದೀಶ್​ ಎಂದ ನೆಟ್ಟಿಗರು!.

  • ಸೌಂದರ್ಯಾ ಶೆಟ್ಟಿ ನಂತರ ಬಿಗ್​ಬಾಸ್ ಮನೆಯಲ್ಲಿ ಯಾರಾಗಲಿದ್ದಾರೆ ಮುಂದಿನ ಕ್ಯಾಪ್ಟನ್.

  • ಜಗದೀಶ್​ ಮತ್ತು ತಾಂಡವ್​ ಮಧ್ಯೆ ಹೆಚ್ಚಿದ ಆಟದ ಪೈಪೋಟಿ.

ಬಿಗ್​ಬಾಸ್ ಮನೆಯ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ರೇಸ್​ನಲ್ಲಿ ತಾಂಡವ್​ ಮತ್ತು ಜಗದೀಶ್​​​​ ಇದ್ದಾರೆ. ಬಿಗ್​ಬಾಸ್​ ನೀಡಿದ ರೋಚಕ ಚಟುವಟಿಕೆಯಲ್ಲಿ ತೀವ್ರ ಪೈಪೋಟಿ ಏರಿದ್ದು, ಸೌಂದರ್ಯಾ ನಂತರ ದೊಡ್ಮನೆಯ ಮುಂದಿನ ಕ್ಯಾಪ್ಟನ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ಆದರೆ, 24 ಗಂಟೆ ಲೈವ್​ ಸ್ಟ್ರೀಮ್​ ಅಲ್ಲಿ ಬಿಗ್​ಬಾಸ್ ನೋಡಿರುವ ವೀಕ್ಷಕರು ಜಗದೀಶ್​ ಮನೆಯ ಮುಂದಿನ ಕ್ಯಾಪ್ಟನ್​..ತಾಂಡವ್​ ಈಗಾಗಲೇ ಟಾಸ್ಕ್​ನಿಂದ ಹೊರಗಿದ್ದಾರೆ ಎನ್ನಲಾಗುತ್ತಿದೆ.

ಟಾಸ್ಕ್​ ಏನಿತ್ತು?

ಸೌಂದರ್ಯಾ ಶೆಟ್ಟಿ ನಂತರ ಮನೆಯ ಮುಂದಿನ ಕ್ಯಾಪ್ಟನ್​ ಯಾರು ಎನ್ನುವುದನ್ನು ನಿರ್ಧರಿಸುವ ಸಲುವಾಗಿ ಬಿಗ್​ಬಾಸ್ ಟಾಸ್ಕ್​ವೊಂದನ್ನು ಕೊಟ್ಟಿದೆ. ನಿಯಮದ ಪ್ರಕಾರ ತಾಂಡವ್​ ಮತ್ತು ಜಗದೀಶ್​ ತಾವಿರುವ ಬಲೆಯನ್ನು ಉರುಳಿಸುತ್ತಾ ಸಾಗಿ ತಮಗೆ ಮೀಸಲಾದ ಬಣ್ಣ ರಿಂಗ್​ ಅನ್ನು ಬಲೆ ಕಟ್ಟಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಸಂಗ್ರಹಿಸಿದ ರಿಂಗ್​ ಅನ್ನು ಬೋರ್ಡ್​ ಕೊಕ್ಕಿಗೆ ಬೀಳುವಂತೆ ಎಸೆಯಬೇಕು. ಹೆಚ್ಚು ರಿಂಗ್​ ಯಾರ ಸ್ಥಾನದಲ್ಲಿ ಇರುತ್ತದೆಯೋ ಅವರು ಈ ವಾರದ ಬಿಗ್​ಬಾಸ್ ಮನೆಯ ಕ್ಯಾಪ್ಟನ್​ ಆಗಿರುತ್ತಾರೆ ಎನ್ನುವುದನ್ನು ಘೋಷಿಸಲಾಗಿತ್ತು.

Also Read
ಬಿಗ್​​ಬಾಸ್​ ಮನೆಗೆ ರೀ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ; ಗಿಲ್ಲಿ ಬರ್ಬೇಕಿತ್ತು ಎಂದು ಬೇಡಿಕೆ ಮುಂದಿಟ್ಟ ವೀಕ್ಷಕರು..BBK 13
ಬಿಗ್​ಬಾಸ್ ಮನೆಯ ಮುಂದಿನ ವಾರದ ಕ್ಯಾಪ್ಟನ್​  ಜಗದೀಶ್?..BBK13

ಜಗದೀಶ್ ತಾಂಡವ್ ಯಾರು ಕ್ಯಾಪ್ಟನ್?

ತಾಂಡವ್​ ಮತ್ತು ಜಗದೀಶ್​ ಭಾರಿ ಪೈಪೋಟಿಗೆ ಇಳಿದಿದ್ದು ಇಬ್ಬರು...ಯಶಸ್ವಿಯಾಗಿ ರಿಂಗ್ ಹಾಕಿರುವುದು ಕಂಡುಬಂದಿದೆ. ಇಬ್ಬರಲ್ಲಿ ಯಾರು ಹೆಚ್ಚು ರಿಂಗ್​ ಹಾಕಿ ಕ್ಯಾಪ್ಟನ್​ ಆಗಲಿದ್ದಾರೆ ಎನ್ನುವುದನ್ನು ಈ ದಿನದ ಎಪಿಸೋಡ್​ನಲ್ಲಿ ತಿಳಿದುಕೊಳ್ಳಬೇಕಾಗಿದೆ.

ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಮನೆಯ ಇತರ ಸ್ಪರ್ಧಿಗಳು ತಾಂಡವ್ ಮತ್ತು ಜಗದೀಶ್​ ಒಟ್ಟಾಗಿ ರಿಂಗ್ ಹಾಕಿರುವುದನ್ನು ತೀವ್ರ ಕುತೂಹಲದಿಂದ ನೋಡುತ್ತಿರುವುದು, ಕೊನೆಯ ಬಜರ್​ ಆದಾಗ ಜಗದೀಶ್ ಕುಳಿತುಕೊಂಡಿದ್ದು , ಸೋನಿಕಾ ಅಚ್ಚರಿಯಂತೆ ಬಾಯ್ಬಿಟ್ಟಿರುವುದು ಮತ್ತಷ್ಟು ಕುತೂಹಲವನ್ನು ಕೆರಳಿಸುವಂತೆ ಮಾಡಿದೆ.

ಜಗದೀಶ್ ಕ್ಯಾಪ್ಟನ್ ಎಂದ ನೆಟ್ಟಿಗರು

ಜಿಯೋ ಹಾಟ್​ಸ್ಟಾರ್​ನಲ್ಲಿ 24 ಗಂಟೆ ಲೈವ್​ ಸ್ಟ್ರೀಮ್​ ಅಲ್ಲಿ ಬಿಗ್​ಬಾಸ್ ನೋಡಿರುವ ವೀಕ್ಷಕರು, ಜಗದೀಶ್​ ಮನೆಯ ಮುಂದಿನ ಕ್ಯಾಪ್ಟನ್​ ಎಂದು ಬರೆದುಕೊಂಡು ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇತರ ಸ್ಪರ್ಧಿಗಳು ಆಡಿದ ಟಾಸ್ಕ್​ನಲ್ಲಿ ಜಗದೀಶ್​ ಅವರು ಈಗಾಗಲೇ ತಾಂಡವ್​ ಅವರನ್ನು ಕ್ಯಾಪ್ಟನ್ಸಿ ರೇಸ್​ನಿಂದ ಹೊರಗಿಟ್ಟಿದ್ದಾರೆ. ಕೊನೆಗೆ ಉಳಿದುಕೊಂಡಿದ್ದು ಜಗದೀಶ್ ಮತ್ತು ಕುಮಾರಿ ಆಗಿದ್ದು, ಕುಮಾರಿಗೆ ಆರೋಗ್ಯ ಹದಗೆಟ್ಟಿರುವ ಕಾರಣ ಅವರ ಬದಲಾಗಿ ತಾಂಡವ್​ ಟಾಸ್ಕ್​ ಆಡಿದ್ದಾರೆ. ಈ ಟಾಸ್ಕ್​ನಲ್ಲಿ ಜಗದೀಶ್​ ಗೆದ್ದಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಕೆಲವರು ನಮಗೆ ಜಗದೀಶ್​ನನ್ನು ಕ್ಯಾಪ್ಟನ್​ ಆಗಿ ನೋಡಲು ಇಷ್ಟವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಇಂದಿನ ಎಪಿಸೋಡ್​ನಲ್ಲಿ ಮನೆಯ ಕ್ಯಾಪ್ಟನ್​ ಆಗಿದ್ದು ಯಾರು, ಉತ್ತಮ ಮತ್ತು ಕಳಪೆ ಸಿಕ್ಕಿದ್ದು ಯಾರಿಗೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).