

ಡ್ಯಾನ್ಸ್ ಮಾಡುತ್ತ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಾಜಿ ಸ್ಪರ್ಧಿ ರಕ್ಷಿತಾ ಶೆಟ್ಟಿ.
ಶೆಟ್ಟಿ ಡಾನ್ ತಂಗಿಯಾಗಿ ವರ ಹುಡುಕುವ ಸಂಭ್ರಮದಲ್ಲಿ ಭಾಗಿ.
ಯಶಸ್, ಗಗನ್ ಇಬ್ಬರಲ್ಲಿ ಯಾರನ್ನ ಒಪ್ಕೋತಾರೆ ಶೆಟ್ಟಿ ಡಾನ್?.
BiggBoss Kannada: ಬಿಗ್ಬಾಸ್ ಮನೆಯಲ್ಲಿ ಡಾನ್ ಶೆಟ್ಟಿಗಾಗಿ ವರ ಹುಡುಕಾಟದ ಸಮಾರೋಪಕ್ಕೆ ವಿಶೇಷ ವ್ಯಕ್ತಿಯಾಗಿ ಬಿಗ್ಬಾಸ್ 12ರ ಮಾಜಿ ಸ್ಪರ್ಧಿ ರಕ್ಷಿತಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೊಮೋವು ಹೆಚ್ಚು ಕುತೂಹಲವನ್ನು ಮೂಡಿಸಿದೆ. ಈ ವಾರವೂ ದೊಡ್ಮನೆಯಲ್ಲಿ ಎಂಟರ್ಟೈನ್ಮೆಂಟ್ಗೆ ಯಾವುದೇ ಕೊರತೆ ಇರೋದಿಲ್ಲ ಎನ್ನುವುದನ್ನು ಒಂದು ಭಾಗದ ವೀಕ್ಷಕರು ಹೇಳುತ್ತಿದ್ದರೆ, ಕೆಲವೊಬ್ಬರು ಗಿಲ್ಲಿ ಬರಬೇಕಿತ್ತು ಎಂದು ಬೇಡಿಕೆಯನ್ನಿಟ್ಟಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರವಾಗಿ ಶೆಟ್ಟಿ ಡಾನ್ ಮದುವೆಗಾಗಿ ವರನನ್ನು ಹುಡುಕಾಡಲಾಗುತ್ತಿದೆ. ವರ ಯಶಸ್ ಮತ್ತು ಗಗನ್ ಅವರ ಕುಟುಂಸ್ಥರು ಶೆಟ್ಟಿ ಡಾನ್ ಮನವೊಲಿಸಬೇಕು. ಕೊನೆಗೆ ಸೌಂದರ್ಯಾ ಶೆಟ್ಟಿ ಒಪ್ಪುವ ವರನ ಟೀಂಗೆ ವಾರದ ವಿಶೇಷ ಸೌಲಭ್ಯ ನೀಡಲಾಗುತ್ತದೆ ಎಂದು ಬಿಗ್ಬಾಸ್ ಟಾಸ್ಕ್ ಕೊಟ್ಟಿದ್ದಾರೆ.
ಸದ್ಯ ಮಂಗಳವಾರದ ಎಪಿಸೋಡ್ನಲ್ಲಿ ಗಗನ್ ಮತ್ತು ಯಶಸ್ ಸೌಂದರ್ಯಾ ಅವರನ್ನು ಒಲಿಸಿಕೊಳ್ಳಲು ತರಹೇವಾರಿ ರೀತಿಯಲ್ಲಿ ಯತ್ನಿಸಿದರು. ಯಶಸ್ ಟಿಶ್ಯೂ ಸಹಾಯದಿಂದ ಗಾರ್ಡನ್ ಏರಿಯಾದಲ್ಲಿ ದೊಡ್ಡದಾಗಿ ಐ ಲವ್ ಯೂ ಎಂದು ಬರೆದು ಪ್ರಪೋಸ್ ಮಾಡಿದ್ರೆ, ಇನ್ನೂ ಗಗನ್ ಅವರು ಚಪಾತಿಯನ್ನು ಲಟ್ಟಿಸಿ ಐ ಲವ್ ಯೂ ಎಂದು ಬರೆದು ಕ್ಯೂಟ್ ಆಗಿ ಮೆಚ್ಚುಗೆಗೆ ಪಾತ್ರರಾದರು. ಸದ್ಯ ಈ ಎಂಟರ್ಟೈನ್ಮೆಂಟ್ ಅನ್ನು ಹೆಚ್ಚಿಸಲು ಪಟಾಕಿ ಪೋರಿ ರಕ್ಷಿತಾ ಎಂಟ್ರಿ ಕೊಟ್ಟಿದ್ದಾರೆ.
ಮಾತಿನ ಮಲ್ಲಿ ಎಂದೇ ಖ್ಯಾತಿ ಪಡೆದ ರಕ್ಷಿತಾ ಶೆಟ್ಟಿ ಬಿಗ್ಬಾಸ್ ಮನೆಯ ಮಾಜಿ ಸ್ಪರ್ಧಿ. ಆಕೆಯ ಅರೆ ಕನ್ನಡ ಮಾತುಗಳ ಸಖತ್ ಕಚಗುಳಿ ಕೊಟ್ಟಿದ್ದವು. ಸದ್ಯ ಬಿಗ್ಬಾಸ್ 13ಕ್ಕೆ ಎಂಟ್ರಿ ಕೊಟ್ಟಿರುವುದು ಬೇರೆಯದ್ದೇ ಸ್ವರೂಪವನ್ನು ಕೊಟ್ಟಿದೆ. ಬಿಗ್ಬಾಸ್ ಇಂಟ್ರ್ಯೂಡ್ಯೂಸ್ ಮಾಡಿದ್ದು ಹೀಗೆ, ಪ್ರಶಾಂತಿ(ಪ್ರಶಾಂತ್ ಗೌಡ) ಎಂಬಿಎ ಓದಲು ಮಲೇಷ್ಯಾಗೆ ತೆರಳಿದ್ದಾಗ ಅಲ್ಲೊಂದು ಪ್ರೀತಿಯಾಗಿತ್ತು. ಅದರ ಪರಿಣಾಮವೇ ರಕ್ಷಿತಾ ಶೆಟ್ಟಿ ಎನ್ನುತ್ತಲೇ ಮನೆಯಲ್ಲಿ ಭಾರಿ ನಗೆಯ ಅಲೆ ಮೂಡಿದೆ. ಇಂದು ಏನೆಲ್ಲ ಆಗುತ್ತದೆ. ಸೌಂದರ್ಯಾ ಯಾರನ್ನು ಮೆಚ್ಚಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಬಿಗ್ಬಾಸ್ ಮನೆಗೆ ಇದೊಂದು ಬಾಕಿ ಇತ್ತು. ರಕ್ಷಿತಾ ಶೆಟ್ಟಿ ಬದಲಾಗಿ ಗಿಲ್ಲಿ ಬರಬೇಕಿತ್ತು. ಇನ್ನೂ ಎಂಟರ್ಟೈನ್ಮೆಂಟ್ ಸಿಗ್ತಿತ್ತು ಎಂದು ಎಕ್ಸ್ ಬಳಕೆದಾರರು ಬೇಡಿಕೆ ಇಟ್ಟಿದ್ದಾರೆ. ಮತ್ತೊಬ್ಬರು ಸೌಂದರ್ಯಾ ಅವರನ್ನು ಮದುವೆ ಮಾಡಿಕೊಳ್ಳಲು ರೂಪೇಶ್ ಶೆಟ್ಟಿ ಅಥವಾ ಶೈನ್ ಶೆಟ್ಟಿ ಎಂಟ್ರಿ ಕೊಡಬಹುದು ಎಂದು ತಮಾಷೆ ಮಾಡಿದ್ದಾರೆ. ಎಂಥಾ ಗತಿ ಬಂತು ಬಿಗ್ಬಾಸ್ಗೆ ಎಂದು ಕೆಲವರು ಹೀಗೆಳೆದಿದ್ದಾರೆ. ರಕ್ಷಿತಾ ಬದಲು ಹರೀಶ್ ರಾಜ್ ಕರೆಸಿದ್ರೆ ಚೆನ್ನಾಗಿ ಇರ್ತಿತ್ತು ಪ್ರಶಾಂತಿ ಬಾಯ್ ಫ್ರೆಂಡ್ ಆಗಿ ಸಖತಾಗಿ ಇರ್ತಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ
ತಾಂಡವ್, ಯಶಸ್ ಹಾಗೂ ಪ್ರಶಾಂತ್ ಚೆನ್ನಾಗಿ ಆಟವನ್ನು ಅರ್ಥ ಮಾಡಿಕೊಂಡು ಎಂಟರ್ಟೈನ್ ಮಾಡುತ್ತಿದ್ದಾರೆ. ಉಳಿದ ಸ್ಪರ್ಧಿಗಳ ಕಾಂಟ್ರ್ಯೂಬ್ಯೂಷನ್ ತುಂಬಾನೆ ಕಡಿಮೆ ಇದೆ. ಆಟವನ್ನು ತಾಂಡವ್ ಮತ್ತು ಪ್ರಶಾಂತ್ ತುಂಬಾನೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ವಾರ ಯಾರಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ ಎಂದು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).