ವರ ಪರೀಕ್ಷೆ ಟಾಸ್ಕ್​ನಲ್ಲಿ ಅನಫೇರ್​ ಆಡಿದ್ರಾ ಸೌಂದರ್ಯಾ ಶೆಟ್ಟಿ?; ಕಿಚ್ಚ ಸುದೀಪ್​ ಸಖತ್ ಕ್ಲಾಸ್

ವರ ಪರೀಕ್ಷೆ ಟಾಸ್ಕ್​ನಲ್ಲಿ ಅನಫೇರ್​ ಆಡಿದ್ರಾ ಸೌಂದರ್ಯಾ ಶೆಟ್ಟಿ?; ಕಿಚ್ಚ ಸುದೀಪ್​ ಸಖತ್ ಕ್ಲಾಸ್
Published on: 
  • ಫೇರ್​ ಮತ್ತು ಅನ್ಫೇರ್​ ಗೇಮ್​​ ಬಗ್ಗೆ ಕಿಚ್ಚನ ಕ್ಲಾಸ್​.

  • ವರ ಪರೀಕ್ಷೆಯಲ್ಲಿ ಯಶಸ್​ಗಾಗಿ ಅನ್ಫೇರ್​ ಗೇಮ್​ ಆಡಿದ್ರಾ ಸೌಂದರ್ಯಾ ಶೆಟ್ಟಿ.

  • ಆಸಿಯಾ, ಗಗನ್​​, ಯಶಸ್​​, ಸೌಂದರ್ಯಾಗೆ ಫುಲ್​ ಕ್ಲಾಸ್.

BiggBoss Kannada: ಬಿಗ್​ಬಾಸ್ ಮನೆಯಲ್ಲಿ ಈ ವಾರ ಸೌಂದರ್ಯಾ ಶೆಟ್ಟಿ ಕ್ಯಾಪ್ಟನ್ ​ ಆಗಿದ್ದರು. ಅದರ ಆಧಾರದ ಮೇಲೆ ಶೆಟ್ಟಿ ಡಾನ್ ಎನ್ನುವ ಟಾಸ್ಕ್​​ ಅನ್ನು ಬಿಗ್​ಬಾಸ್ ಕೊಟ್ಟಿತ್ತು. ವರ ಗಗನ್​ ಮತ್ತು ಯಶಸ್​ ಇಬ್ಬರಲ್ಲಿ ಯಾರು ವಧುವಿನ ಮನವನ್ನು ಮೆಚ್ಚಿಸುತ್ತಾರೆಯೋ ಅವರು ಕ್ಯಾಪ್ಟನ್ಸಿ ರೇಸ್​ಗೆ ಸೆಲೆಕ್ಟ್​ ಆದಂತೆ ಎಂದು ಹೇಳಲಾಗಿತ್ತು. ಇದರಲ್ಲಿ ಸೌಂದರ್ಯ ಯಶಸ್​ಗೆ ಫೇವರ್​ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಏನಂದ್ರು ಸುದೀಪ್​

ಹೌದು, ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸೌಂದರ್ಯಾ ಶೆಟ್ಟಿ ಅವರಿಗೆ ಸುದೀಫ್​ ಕ್ಲಾಸ್ ತೆಗೆದುಕೊಳ್ಳುವ ಹಿಂಟ್ ನೀಡಲಾಗಿದೆ. ವರ ಪರೀಕ್ಷೆ ಟಾಸ್ಕ್ ಮುಗಿದ ನಂತರ ಆಸಿಯಾ, ಯಶಸ್​ ಮತ್ತು ಸೌಂದರ್ಯಾ ಮಾತನಾಡುತ್ತಿರುತ್ತಾರೆ. ಈ ವೇಳೆ ಆಸಿಯಾ ಅವರು 'ಗಗನ್ ಅವರೊಂದಿಗಿನ ಡೇಟ್​ ಹೇಗಿತ್ತು, ಅದನ್ನು ಮೊದಲು ಹೇಳು' ಎಂದು ಕೇಳುತ್ತಾರೆ.

ಸೌಂದರ್ಯಾ ಮಾತನಾಡಿ 'ಯಶಸ್​​ ಜೊತೆಗೆ ಮಾಡಿದ ಡೇಟಿಂಗ್​ ಜೀರೋ ಕೊಡ್ತೇನೆ. ಅವನು ಬರಿ ತಿನ್ನುವುದರ ಮೇಲೆ ಕಾನ್​ಸನಟ್ರೇಟ್ ಮಾಡ್ತಿದ್ದ. ಆದರೆ, ಗಗನ್ ಜೊತೆಗೆ ಜೆನ್ಯೂನ್ ಆಗಿತ್ತು. ತುಂಬಾ ಚಂದ ಎನಿಸಿತು. ಬರಿ ಡೇಟಿಂಗ್​ ಬಗ್ಗೆ ಬಿಗ್​ಬಾಸ್ ಕೇಳಿದ್ದರೆ ಖಂಡಿತ ಗಗನ್​ ಅವರನ್ನು ಆಯ್ಕೆ ಮಾಡುತ್ತಿದ್ದೆ. ಓವರ್​ ಆಲ್​ ಪರ್ಫಾಮೆನ್ಸ್​​​ ಆಧಾರದ ಮೇಲೆ ಯಶಸ್​ ಮತ್ತು ಅವರ ಕುಟುಂಬ ಡಿಸರ್ವ್​ ಇದ್ದಾರೆ' ಎಂದರು. ಇದೇ ವಿಟಿಯನ್ನು ಆಯ್ಕೆ ಮಾಡಿ ಫೇರ್​​ ಮತ್ತು ಅನ್ಫೇರ್​ ಗೇಮ್​ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಪೂರ್ತಿ ಎಪಿಸೋಡ್​ನಲ್ಲಿ ಯಾರು ಎಲ್ಲಿ ತಪ್ಪು ಮಾಡಿದರು ಎನ್ನುವುದನ್ನು ಕಾದು ನೋಡಬೇಕಾಗಿದೆ.

Also Read
ಬಿಗ್​ಬಾಸ್ ಮನೆಯ ಮುಂದಿನ ವಾರದ ಕ್ಯಾಪ್ಟನ್​ ಜಗದೀಶ್?..BBK13
ವರ ಪರೀಕ್ಷೆ ಟಾಸ್ಕ್​ನಲ್ಲಿ ಅನಫೇರ್​ ಆಡಿದ್ರಾ ಸೌಂದರ್ಯಾ ಶೆಟ್ಟಿ?; ಕಿಚ್ಚ ಸುದೀಪ್​ ಸಖತ್ ಕ್ಲಾಸ್

ಸೌಂದರ್ಯಾಗೆ ಈ ಕ್ಲಾಸ್ ಬೇಕಿತ್ತು ಎಂದ ವೀಕ್ಷಕರು

ಸೌಂದರ್ಯಾ ಶೆಟ್ಟಿ ಅವರಿಗೆ ಕಿಚ್ಚನ ಕ್ಲಾಸ್ ಬೇಕಿತ್ತು. ಸರಿಯಾಗಿ ಕ್ಲಾಸ್ ತಗೊಳ್ತಿದ್ದಾರೆ. ಕುಕ್ಕಿಂಗ್ ಟಾಸ್ಕ್​ನಲ್ಲಿ ಯಶಸ್ ಗೆದ್ದರು. ನೀರು ಹಾಕುವ ಚಟುವಟಿಕೆಯಲ್ಲಿ ಗೆದ್ದದ್ದು ಗಗನ್​​. ಡೇಟಿಂಗ್​ ಟಾಸ್ಕ್​ನಲ್ಲಿ ಸೌಂದರ್ಯಾ ಶೆಟ್ಟಿ ಹೇಳುವಂತೆ ಗಗನ್ ಗೆದ್ದಿದ್ದಾರೆ. ರಕ್ಷಿತಾ ಶೆಟ್ಟಿ ಸಹ ಗಗನ್ ಡೇಟಿಂಗ್​ಗೆ ಏಳು ಅಂಕ ಕೊಟ್ಟಿದ್ದಳು. ಆದರೆ ಸೌಂದರ್ಯಾ ಆಯ್ಕೆ ಮಾಡಿದ್ದು ಯಶಸ್​ ಅವರನ್ನು. ಇದು ನಿಜಕ್ಕೂ ಬಯಾಸ್ಡ್ ಎನಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ, (ಏಜೆನ್ಸೀಸ್).

WEB