

ಗಗನ್-ಯಶಸ್ ಪತ್ರಕ್ಕಾಗಿ ಧನುಷ್-ತಾಂಡವ್ ಮಧ್ಯೆ ಸ್ಪರ್ಧೆ
ಗಗನ್-ಯಶಸ್ ಇಬ್ಬರಲ್ಲಿ ಯಾರಿಗೆ ಸಿಗಲಿದೆ ಪ್ರೀತಿ ಪಾತ್ರರ ಪತ್ರ
ಕಿರಣ್ ಆಟದ ವಿರುದ್ಧ ವೀಕ್ಷಕರು ಕೆಂಡ, ಫಿನಾಲೆಗೆ ಹೋಗಲ್ಲ ಎಂದು ಕಿಡಿ
ಪತ್ರ ಕಳೆದುಕೊಂಡ ಆಸಿಯಾಗೆ ವಿನೂತನವಾಗಿ ರಂಜಿಸಿದ ಸೌಂದರ್ಯ-ಯಶಸ್
ಲೋಕದ ಗೊಡವೆ ತಿಳಿಯದೆ, ಸೋಶಿಯಲ್ ಮೀಡಿಯಾ ಬಳಕೆ ಮಾಡದೆ, ಕುಟುಂಬಸ್ಥರ ಜೊತೆ ಮಾತನಾಡದೆ ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಸದ್ಯ ದೊಡ್ಡ ಅವಕಾಶ ಸಿಕ್ಕಿದೆ. ಹೌದು, ಸ್ಪರ್ಧಿಗಳಿಗೆ ತಮ್ಮ ಪ್ರೀತಿ ಪಾತ್ರರಿಂದ ಪತ್ರ ಬಂದಿದೆ. ಆದರೆ, ಇದನ್ನು ಪಡೆದುಕೊಳ್ಳಲು ಬಿಗ್ಬಾಸ್ ಕೊಡುವ ಕಠಿಣ ಮತ್ತು ಸುಲಭ ಚಟುವಟಿಕೆಯಲ್ಲಿ ಸ್ಪರ್ಧಿಸಿ ತಾಳೆ ಹಾಗೂ ಪ್ರೀತಿಯಿಂದ ಗೆಲ್ಲಬೇಕು. ಸದ್ಯ ಇಂದು ಆ ಜಿದ್ದಾಜಿದ್ದಿಯಲ್ಲಿ ಯಶಸ್ ಹಾಗೂ ಗಗನ್ ಇದ್ದಾರೆ.
ಸದ್ಯ ರಿಲೀಸ್ ಆಗಿರುವ ಪ್ರೊಮೋ ಪ್ರಕಾರ ಬೆಳ್ಳಂಬೆಳಿಗ್ಗೆ ಇಡೀ ಮನೆಯನ್ನು ಮೌನದ ಗದ್ದಲಕ್ಕೆ ಬಿಗ್ಬಾಸ್ ದೂಡಿದ್ದಾರೆ. ಸೈರನ್ ಮೂಲಕ ಎಬ್ಬಿಸಿದ ಬಿಗ್ಬಾಸ್ ಪತ್ರ ಪಡೆಯುವ ಕಠಿಣ ಟಾಸ್ಕ್ನಲ್ಲಿ ಯಶಸ್ ಮತ್ತು ಗಗನ್ ಮಧ್ಯೆ ಪೈಪೋಟಿ ಇಟ್ಟಿದ್ದಾರೆ.
ಗಗನ್ ಹಾಗೂ ಯಶಸ್ಗೆ ತಮ್ಮ ಪ್ರೀತಿ ಪಾತ್ರರ ಪತ್ರ ಪಡೆಯುವ ಅವಕಾಶ ಸಿಕ್ಕಿದೆ. ಅವರ ಪರವಾಗಿ ಸ್ಪರ್ಧಿಸುವ ಸ್ಪರ್ಧಿಗಳು..ಗಾರ್ಡನ್ ಏರಿಯಾದಲ್ಲಿ ಸೆಟ್ ಮಾಡಲಾದ ಎತ್ತರದ ಕಂಬಗಳ ಮೇಲೆ ನಿಂತು, ಬೆಳಗಿನವರೆಗೆ ಬ್ಯಾಲೆನ್ಸ್ ಮಾಡಬೇಕಾದ ಕಠಿಣ ಪರೀಕ್ಷೆ ನೀಡಲಾಗಿದೆ. ಇದರಲ್ಲಿ ಸ್ಪರ್ಧಿಗಳು ತಾಳ್ಮೆ ಮತ್ತು ದೈಹಿಕ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಯಶಸ್ ಪರವಾಗಿ ಧನುಷ್ ನಿಂತಿದ್ದು, ಗಗನ್ ಪರವಾಗಿ ತಾಂಡವ್ ರಾಮ್ ಸ್ಪರ್ಧಿಸಿದ್ದಾರೆ. ಯಾರು ಹಿಡಿಕೆ ಹಿಡಿದು ಬಿಗ್ಬಸ್ ಹೇಳುವರೆಗೂ ನಿಲ್ಲುತ್ತಾರೆಯೋ ಅವರಿಗೆ ತಮ್ಮ ಮನೆಯವರು ಕಲುಹಿಸಿರುವ ಪತ್ರ ಸಿಗಲಿದೆ.
ಜಗದೀಶ್ ಈ ವಾರ ಸ್ಪರ್ಧಿಗಳಿಗೆ ಬಿಗ್ಬಾಸ್ ಕೊಟ್ಟ ಚಟುವಟಿಕೆ ಪ್ರಕಾರ ರ್ಯಾಂಕ್ ಕೊಟ್ಟಿದ್ದರು. ಇದರ ಅನುಸಾರ ಸ್ಪರ್ಧಿಗಳು ಸಾಲಿನಲ್ಲಿ ನಿಂತು ತಮ್ಮ ಮನೆಯವರಿಗಾಗಿ ಪತ್ರ ಪಡೆಯಲು ಟಾಸ್ಕ್ ಆಡಬೇಕಿತ್ತು. ಒಂದು ಬಾಲ್ ಅನ್ನು ಅಡೆತಡೆಗಳ ನಡುವೆ ಸ್ಪರ್ಧಿಗಳು ಸಾಗಿಸುತ್ತಾ ಬರಬೇಕು. ಬಾಲ್ ಅಂತಿಮ ಸ್ಥಾನಕ್ಕೆ ತಲುಪಿದರೆ ಜಗದೀಶ್ ಅವರಿಗೆ ಮನೆಯ ಪತ್ರ ದೊರೆಯುತ್ತದೆ ಎನ್ನುವುದು ಟಾಸ್ಕ್
ಗಾನವಿ ಹಾಗೂ ಸೌಂದರ್ಯಾ ಶೆಟ್ಟಿ ಈ ಬಾಲ್ನ 5 ನಿಮಿಷದಲ್ಲಿ ಹಸ್ತಾಂತರ ಮಾಡಿದರು. ನಂತರ ಕಿರಣ್ ಶಾಸ್ತ್ರಿ ಅವರು ಈ ಬಾಲ್ನ ಪಾಸ್ ಮಾಡಲು ರೆಡಿ ಇರಲೇ ಇಲ್ಲ. ಅವರು ಉದ್ದೇಶಪೂರ್ವಕವಾಗಿ ಬಾಲ್ನ ಕೆಳಕ್ಕೆ ಬೀಳಿಸಿದ್ದು ಕಂಡು ಬಂದಿತು. ಮನೆಯವರೆಲ್ಲ ಈ ಬಗ್ಗೆ ಕಿಡಿಕಾರಿದರು. ಮೊದಲು ಕಿರಣ್ ತಾನು ತಪ್ಪೇ ಮಾಡಿಲ್ಲ ಎಂದರು. ಕೊನೆಗೆ ಗಾನವಿ....ಹಲವು ಬಾರಿ ಕೇಳಿದಾಗ ಕಿರಣ್ ಹೌದು ಬೇಕಂತಲೇ ಮಾಡಿದ್ದು ಎಂದು ಹೇಳಿದರು. ಬಿಗ್ಬಾಸ್ ಸ್ಪರ್ಧಿಗಳು ಮಾತ್ರವಲ್ಲದೆ ಕಿರಣ್ ಶಾಸ್ತ್ರಿಯ ಈ ನಡತೆ ವಿರುದ್ಧ ವೀಕ್ಷಕರು ಕಿಡಿಕಾರಿದ್ದಾರೆ. ಇಂತಹ ಮನಸ್ಥಿತಿ ಇದ್ರೆ ಖಂಡಿತ ಫಿನಾಲೆ ತಲುಪಲ್ಲ ಎಂದಿದ್ದಾರೆ.
ಮನೆಯ ಸ್ಪರ್ಧಿಗಳ ಮನವೊಲಿಸಿ, ಗಾನವಿ ಮತ್ತು ಆಸಿಯಾ ಪತ್ರ ತೆಗೆದುಕೊಳ್ಳಬೇಕಾಗಿತ್ತು. ಆಸಿಯಾಗೆ ಕಿರಣ್, ಯಶಸ್, ಸೌಂದರ್ಯ, ಜಗದೀಶ್ ವೋಟ್ ಮಾಡಿದ್ದರೆ. ಮಿಕ್ಕ ಸ್ಪರ್ಧಿಗಳೆಲ್ಲರೂ ಗಾನವಿಗೆ ವೋಟ್ ಮಾಡಿದರು. ಆಕೆ ಸಿಂಗಲ್ ಪೇರೆಂಟ್ ಎಂದು ಆಕೆಯ ಪರ ನಿಂತರು. ಗಾನವಿ ಲೆಟರ್ ಬರುತ್ತಿದ್ದಂತೆ ಆಸಿಯಾ ಇತ್ತ ಜೋರಾಗಿ ಅಳಲು ಶುರು ಮಾಡಿದರು. ಆಗ ಸೌಂದರ್ಯಾ ಶೆಟ್ಟಿ ಹಾಗೂ ಯಶಸ್ ಆಸಿಯಾರನ್ನು ರಂಜಿಸಿದ ಬಗ್ಗೆ ವೀಕ್ಷಕರು ಕೊಂಡಾಡಿದ್ದಾರೆ, (ಏಜೆನ್ಸೀಸ್).