ಬಿಗ್ ಬಾಸ್ ಸ್ಪರ್ಧಿಗಳ ಕೈಗೆ ಸಿಕ್ಕ ಪ್ರೀತಿ ಪಾತ್ರರ ಪತ್ರ ಬ್ಲಾಂಕ್, ಬ್ಲಾಂಕ್; ಭಾವನೆಗಳ ಜೊತೆ ಆಟವಾಡ್ಬೇಡಿ ಎಂದ ನೆಟ್ಟಿಗರು..BBK13

ಬಿಗ್ ಬಾಸ್ ಸ್ಪರ್ಧಿಗಳ ಕೈಗೆ ಸಿಕ್ಕ ಪ್ರೀತಿ ಪಾತ್ರರ ಪತ್ರ ಬ್ಲಾಂಕ್, ಬ್ಲಾಂಕ್;  ಭಾವನೆಗಳ ಜೊತೆ ಆಟವಾಡ್ಬೇಡಿ ಎಂದ ನೆಟ್ಟಿಗರು..BBK13
Published on: 
  • ಮನೆಯಿಂದ ದೂರವಿರುವ ಸ್ಪರ್ಧಿಗಳಿಗೆ ಕುಟುಂಬದವರಿಂದ ಬಂತು ಪತ್ರ.

  • ಪತ್ರಗಳನ್ನು ಪಡೆದುಕೊಳ್ಳಲು ಸ್ಪರ್ಧಿಗಳು ನಿರ್ದಿಷ್ಟ ಟಾಸ್ಕ್ ಅನ್ನು ಗೆಲ್ಲಬೇಕಾದ ಅನಿವಾರ್ಯತೆ.

  • ಸ್ಪರ್ಧಿಗಳ ಕಣ್ಣೀರು ಮತ್ತು ಭಾವುಕ ಕ್ಷಣಗಳನ್ನು ಒಳಗೊಂಡ ಪ್ರೋಮೋ ರಿಲೀಸ್.

Bigg Boss Kannada letter task: ಬಿಗ್​ಬಾಸ್​ ಮನೆಯಲ್ಲಿ ಏನೇ ಟಾಸ್ಕ್​​, ಚಟುವಟಿಕೆ ನಡೆದರೂ ಅದರ ಹಿಂದೆ ದೀರ್ಘ ಅರ್ಥ, ಟ್ವಿಸ್ಟ್ ಹಾಗೂ ಟರ್ನ್​ಗಳಿರುತ್ತವೆ. ಅದರಂತೆ ಈಗ ಸ್ಪರ್ಧಿಗಳಿಗೆ ತಮ್ಮ ಪ್ರೀತಿ ಪಾತ್ರರಿಂದ ಪತ್ರ ಸಿಕ್ಕಿದೆ. ಆದರೆ, ಅವು ಬ್ಲಾಂಕ್​ ಆಗಿದ್ದು, ಕುಟುಂಬಸ್ಥರನ್ನು ನೆನೆದು ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದು, ನೋಡುಗರ ಕಣ್ಣಂಚು ಒದ್ದೆಯಾಗುವಂತಿತ್ತು. . ಇದನ್ನು ಕಂಡ ವೀಕ್ಷಕರು ದಯವಿಟ್ಟು ಭಾವನೆಗಳ ಜೊತೆ ಆಡುವ ಈ ಆಟ ಮಾತ್ರ ಬೇಡ ಎಂದು ಸಲಹೆ ಕೊಟ್ಟಿದ್ದಾರೆ.

ಬಿಗ್​​ಬಾಸ್​​​ ಕನ್ನಡ ಫಿನಾಲೆ ಹತ್ತಿರವಾಗುತ್ತಲೇ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ಪರ್ಸನಾಲಿಟಿ, ಆಟದ ಸಾಮರ್ಥ್ಯದ ಪರೀಕ್ಷೆ ಮುಂದುವರೆದಿದೆ. ಮನೆಯಲ್ಲಿ ಸದಾ ಕಿತ್ತಾಟ, ಕೂಗಾಟ ಇರುತ್ತಿತ್ತು. ಆದರೆ, ಈ ವಾರ ಕೇಳೋದು ಬರಿ ಅಳು, ಕುಟುಂಬಸ್ಥರ ಬಗ್ಗೆ ಮಾತು ಇಷ್ಟೇ ಆಗಲಿದೆ.

Also Read
ಬಿಗ್​ಬಾಸ್ ಮನೆಯಲ್ಲಿ ಆಸಿಯಾ-ಗಾನವಿ ಮಧ್ಯೆ ಧಮ್ಮು, ತಾಕತ್ತಿನ ವಾಗ್ಯುದ್ಧ; 'ಆಸಿಯಾ ಫೈರ್ ಡೋಸ್ ವಾಪಸ್' ಎಂದ ನೆಟ್ಟಿಗರು..BBK13
ಬಿಗ್ ಬಾಸ್ ಸ್ಪರ್ಧಿಗಳ ಕೈಗೆ ಸಿಕ್ಕ ಪ್ರೀತಿ ಪಾತ್ರರ ಪತ್ರ ಬ್ಲಾಂಕ್, ಬ್ಲಾಂಕ್;  ಭಾವನೆಗಳ ಜೊತೆ ಆಟವಾಡ್ಬೇಡಿ ಎಂದ ನೆಟ್ಟಿಗರು..BBK13

ಪತ್ರ ಸಿಕ್ಕಿದೆ..ಖಾಲಿ ಇದೆ

ಹೌದು, ಸದ್ಯ ರಿಲೀಸ್ ಆದ ಪ್ರೋಮೋದಲ್ಲಿ ಸ್ಪರ್ಧಿಗಳಿಗೆ ತಮ್ಮ ಪ್ರೀತಿ ಪಾತ್ರರಿಂದ ಪತ್ರ ಸಿಕ್ಕಿದೆ. ಆದರೆ, ಅವು ಬ್ಲಾಂಕ್​ ಆಗಿದ್ದು, ಅಸಲಿ ಪತ್ರ ಪಡೆದುಕೊಳ್ಳಲು ಸ್ಪರ್ಧಿಗಳು ಟಾಸ್ಕ್ ಗೆಲ್ಲಬೇಕಾಗಿದೆ. ಹೀಗಾಗಿ ತಮ್ಮ ಕುಟುಂಬಸ್ಥರ ಪತ್ರ ಓದಲೇ ಬೇಕು ಎಂದು ಪಣ ತೊಟ್ಟಿರುವ ಸ್ಪರ್ಧಿಗಳು ಎಷ್ಟರ ಮಟ್ಟಕ್ಕೆ ಜಿದ್ದಾ ಜಿದ್ದಿಗೆ ಇಳಿಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ನೆಟ್ಟಿಗರು ಏನಂದ್ರು?

ಇದು ಲೆಟರ್ ಟಾಸ್ಕ್ . ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಆ ಪತ್ರ ಸಿಗುವುದಿಲ್ಲ ಎಂಬುದು ನನಗೆ ತಿಳಿದಿದೆ. ಇದು ಭಾವನಾತ್ಮಕ ವಾರವಾಗಿರಲಿದೆ, ಅವರು ಇದನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ನೋಡೋಣ. ಯಾರು ಪತ್ರಗಳನ್ನು ಪಡೆಯುತ್ತಾರೋ ಅವರೇ ಕ್ಯಾಪ್ಟನ್ಸಿ ಸ್ಪರ್ಧಿಗಳಾಗುತ್ತಾರೆ ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇದು ಬಿಗ್​ಬಾಸ್​​ನ ಕೆಟ್ಟ ಟಾಸ್ಕ್​​ ಸ್ಪರ್ಧಿಗಳಿಗೆ ಬ್ಲಾಂಕ್ ಲೆಟರ್​ ಕೊಟ್ಟ, ಅಸಲಿ ಲೆಟರ್​ಗಾಗಿ ಸ್ಪರ್ಧಿಗಿಳಿಸುತ್ತಾರೆ. ಅವರ ಭಾವನೆಗಳ ಜೊತೆ ಆಟವಾಡೋದು ಸರಿಯಲ್ಲ. ಈ ಟಾಸ್ಕ್ ಬೇಡ ಎನಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಗಾನವಿ, ಪ್ರಶಾಂತ್​ ಹಾಗೂ ಸೋನಿಕಾ ಇತ್ತೀಚೆಗೆ ಬಿಗ್​ಬಾಸ್ ಮನೆಗೆ ಕಾಲಿಟ್ಟಿದ್ದು ಇಷ್ಟು ಬೇಗೆ ಕುಟುಂಬಸ್ಥರು ನೆನಪಾಗಿ ಬಿಡ್ತಾರಾ? ಏನ್ ಡ್ರಾಮಾ ಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಯಾರೆಲ್ಲ ನಾಮಿನೇಟ್ ಆಗಿದ್ದಾರೆ?

ಬಿಗ್​ಬಾಸ್ ಮನೆಯಲ್ಲಿ ಯಾರು ಇರಲು ಅರ್ಹರು, ಯಾರು ಹೊರಹೋಗಬೇಕು? ಎಂಬ ವಿಚಾರವಾಗಿ ನಡೆದ ನಾಮಿನೇಷನ್​ ಪ್ರಕ್ರಿಯೆಯು ದೊಡ್ಮನೆ ಅಂಗಳದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಕಿರಣ್​ ಶಾಸ್ತ್ರಿಯನ್ನು ನಾಮಿನೇಟ್ ಮಾಡುತ್ತಲೇ ಅವರು ರೊಚ್ಚಿಗೆದ್ದಿದ್ದರು, ಮೊದಲಿನ ಕಿರಣ್ ಆಗ್ತೇನೆ ಎಂದು ರೊಚ್ಚಿಗೆದ್ದು ಕೂಗಾಡಿದರು. ಆಸಿಯಾ ಮತ್ತು ಗಾನವಿ, ಧನುಷ್ ಮತ್ತು ಸೌಂದರ್ಯಾ ನಡುವೆ ಭಾರಿ ಜಟಾಪಟಿ ನಡೆದಿತ್ತು. ಈ ವಾರ ಮನೆಯಿಂದ ಹೊರಹೋಗುವ ಲಿಸ್ಟ್​ನಲ್ಲಿ ಸೋನಿಕಾ ಗೌಡ, ಕಿರಣ್​, ಆಸಿಯಾ, ಧನುಷ್​, ಯಶಸ್​​, ಗಗನ್​ ಇದ್ದಾರೆ, (ಏಜೆನ್ಸೀಸ್).