10 ತಾಸಿನ ಫಿನಾಲೆ: ಬಿಗ್​ಬಾಸ್​ ಕನ್ನಡ ಸೀಸನ್​-8ರ ಮುಕ್ತಾಯಕ್ಕೆ ಮೂರೇ ದಿನ ಬಾಕಿ..

Bigboss
Published on

ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 8ರ ಮುಕ್ತಾಯಕ್ಕೆ ಮೂರು ದಿನಗಳಷ್ಟೇ ಬಾಕಿ ಇದೆ. ಕೊನೆಯ ಸುತ್ತಿನಲ್ಲಿ ಐವರು ಸ್ಪರ್ಧಿಗಳಿದ್ದು, ಈ ಪೈಕಿ ವಿಜೇತರನ್ನು ಭಾನುವಾರ ರಾತ್ರಿ ಘೋಷಿಸಲಾಗುತ್ತದೆ.

ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದ್ದು, ವಿಶೇಷವೆಂದರೆ, ಎರಡು ದಿನಗಳಿಂದ ಒಟ್ಟು 10 ಗಂಟೆಗಳ ಕಾಲ ಈ ಗ್ರಾಂಡ್ ಫಿನಾಲೆ ನಡೆಯಲಿದೆ. ಈಗಾಗಲೇ ಬಿಡದಿಯ ಇನೋವೇಟಿವ್ ಫಿಲಂ ಸಿಟಿಯಲ್ಲಿ ಕಾರ್ಯಕ್ರಮದ ತಯಾರಿಗಳು ನಡೆಯುತ್ತಿದ್ದು, ಈ ಸೀಸನ್​ನಲ್ಲಿ ಭಾಗವಹಿಸಿ ಎಲಿಮಿನೇಟ್ ಆದ ಸ್ಪರ್ಧಿಗಳೆಲ್ಲ ಗ್ರಾಂಡ್ ಫಿನಾಲೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಲವು ನೃತ್ಯಗಳಲ್ಲಿ ಹೆಜ್ಜೆ ಹಾಕುವುದರ ಜತೆಗೆ, ಸುದೀಪ್ ಅವರ ಜನಪ್ರಿಯ ಹಾಡುಗಳ ಮೆಡ್ಲೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಾಡು-ನೃತ್ಯ ಕಾರ್ಯಕ್ರಮಗಳ ಮಧ್ಯೆ, ಬಾಕಿ ಉಳಿದಿರುವ ಐವರು ಸ್ಪರ್ಧಿಗಳಲ್ಲಿ ಮೂವರು ಸ್ಪರ್ಧಿಗಳ ಎಲಿಮಿನೇಶನ್ ಸಹ ಇರುತ್ತದೆ. ಮೂವರು ಹೊರ ಬಂದ ನಂತರ, ಭಾನುವಾರ ರಾತ್ರಿ ಸುದೀಪ್, ‘ಬಿಗ್ ಬಾಸ್’ ಮನೆಗೆ ಹೋಗಿ ಉಳಿದಿರುವ ಇಬ್ಬರು ಸ್ಪರ್ಧಿಗಳನ್ನು ವೇದಿಕೆಗೆ ಕರೆತರಲಿದ್ದಾರೆ. ಅಂತಿಮವಾಗಿ ವೇದಿಕೆಯ ಮೇಲೆ, ವಿಜೇತರ್ಯಾರು ಎಂದು ಘೋಷಿಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ ಆರರಿಂದ ರಾತ್ರಿ 11ರವರೆಗೂ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ‘ಬಿಗ್ ಬಾಸ್’ನಿಂದಾಗಿ ಈ ವಾರದ ‘ರಾಜ-ರಾಣಿ’ ಪ್ರಸಾರವಾಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net