

ಬೆಂಗಳೂರು: ‘ಬಿಗ್ ಬಾಸ್’ ಸೀಸನ್ ಎಂಟು ಮುಗಿಯುತ್ತಿದ್ದಂತೆಯೇ ‘ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್’ ಎಂಬ ಕಿರು ಸೀಸನ್ ಶುರುವಾಗಿದ್ದು ಗೊತ್ತೇ ಇದೆ. ಈಗ ಆ ಸೀಸನ್ನ ಗ್ರಾಂಡ್ ಫಿನಾಲೆ, ಇದೇ ಶನಿವಾರ ಮತ್ತು ಭಾನುವಾರ (ಸೆಪ್ಟೆಂಬರ್ 4 ಮತ್ತು 5) ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗಲಿದೆ.
ಈ ಸೀಸನ್, ಕಳೆದ ವಾರವೇ ಮುಗಿಯುತ್ತದೆ ಎಂದು ಹೇಳಲಾಗಿತ್ತು. ಆದರೆ, ಟಾಸ್ಕ್ಗಳು ಜಾಸ್ತಿ ಇದ್ದ ಕಾರಣ, ಇನ್ನೊಂದು ವಾರ ವಿಸ್ತರಿಸಲಾಗಿದೆ. ಹಾಗೆ ನೋಡಿದರೆ, ಈಗಾಗಲೇ ಗ್ರಾಂಡ್ ಫಿನಾಲೆಯ ಚಿತ್ರೀಕರಣ ಮುಗಿದಿದ್ದು, ಸ್ಪರ್ಧಿಗಳಿಗೆ ಸುದೀಪ್ ಪ್ರಶಸ್ತಿ ನೀಡಿ ಅವರವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಒಂದಿಷ್ಟು ಕಂತುಗಳನ್ನು ಈಗಾಗಲೇ ಶೂಟ್ ಮಾಡಿಟ್ಟುಕೊಂಡಿ ರುವುದರಿಂದ, ಅದನ್ನು ಈ ವಾರ ಪ್ರಸಾರ ಮಾಡಲಾಗುತ್ತಿದೆ. ಈ ಮಿನಿ ಸೀಸನ್ನಲ್ಲಿ ಗೇಮ್ ಮಾಸ್ಟರ್ ಆಗಿ ಅಕುಲ್ ಬಾಲಾಜಿ ಕಾಣಿಸಿಕೊಂಡರೆ, ಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ನಟಿಸುವ ವೈಷ್ಣವಿ, ನಯನಾ, ಭವ್ಯಾ ಗೌಡ, ಚಂದನಾ, ಯಶಸ್ವಿನಿ, ರಮೋಲಾ, ಕೌಸ್ತುಭಾ, ಪ್ರೇರಣಾ, ರಿತ್ವಿಕ್, ಧನುಷ್, ತ್ರಿವಿಕ್ರಮ್ ಕಿರಣ್ ರಾಜ್, ಅಭಿನವ್ ಸ್ವಾಮಿನಾಥನ್, ಗಗನ್ ಚಿನ್ನಪ್ಪ ಮತ್ತು ನಿರಂಜನ್ ಸ್ಪರ್ಧಿಗಳಾಗಿದ್ದಾರೆ.