ಇಕ್ಕಟ್ ಪ್ರೇಮಕಥೆ

Bhumi Shetty
Published on

ಬೆಂಗಳೂರು: ಇನ್ನೇನು ಅವರಿಬ್ಬರೂ ಡೈವೋರ್ಸ್ ಪಡೆದು ದೂರವಾಗಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್ ಘೋಷಣೆಯಾಗುತ್ತದೆ. ದೂರವಾಗಬೇಕು ಎಂದು ಬಯಸುತ್ತಿದ್ದ ಗಂಡ-ಹೆಂಡತಿ ಈ ಲಾಕ್​ಡೌನ್​ನಿಂದ ಅನಿವಾರ್ಯವಾಗಿ ಒಂದೇ ಮನೆಯಲ್ಲಿ ಇರಬೇಕಾಗುತ್ತದೆ. ಮುಂದ?

ಅದು ಗೊತ್ತಾಗಬೇಕಿದ್ದರೆ ‘ಇಕ್ಕಟ್’ ಎಂಬ ಚಿತ್ರ ನೋಡಬೇಕು. ಲಾಕ್​ಡೌನ್ ಕಥೆಯಾದ್ದರಿಂದ, ಲಾಕ್​ಡೌನ್​ನಲ್ಲೇ ತಯಾರಾಗಿ, ಇದೀಗ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಬಂದು ನಿಂತಿದೆ. ಈ ಚಿತ್ರದ ಮೂಲಕ ‘ಬಿಗ್​ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಹಿರಿತೆರೆಗೆ ಬಂದಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು ನಾಗಭೂಷಣ್ ಈ ಸಿನಿಮಾದ ಮೂಲಕ ಹೀರೋ ಆಗುತ್ತಿದ್ದಾರೆ. ಇದಲ್ಲದೆ ಆನಂದ್ ನೀನಾಸಂ, ಸುಂದರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಹಿಂದೆ ‘ಲೂಸ್ ಕನೆಕ್ಷನ್’ ಮತ್ತು ‘ಹೇಟ್ ಯೂ ರೋಮಿಯೋ’ ಎಂಬ ವೆಬ್​ಸೀರೀಸ್​ಗಳನ್ನು ನಿರ್ದೇಶಿಸಿದ್ದ ಎಶಮ್ ಖಾನ್ ಮತ್ತು ಅವರ ಸಹೋದರ ಹಸೀನ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net