

ಚಿತ್ರ: ಅವನಿರಬೇಕಿತ್ತು
ನಿರ್ದೇಶನ: ಸಾಮ್ರಾಟ್ ಅಶೋಕ್
ತಾರಾಗಣ: ಭರತ್ ಹಾಸನ್, ಸೌಮ್ಯಾ ಜಾನ್, ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಜಯಸಿಂಹ, ಮಂಜುನಾಥ್ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
ಆತ ದೇವ್ (ಭರತ್). ಹಳೆಯ ಅಂಬಾಸಡರ್ ಕಾರಿನಲ್ಲಿ ಭವ್ಯಳನ್ನು (ಸೌಮ್ಯಾ) ಕಿಡ್ನ್ಯಾಪ್ ಮಾಡಿರುತ್ತಾನೆ. ಜತೆಗೆ ಅದೇ ಕಾರಿನಲ್ಲಿ ಇನ್ನೊಬ್ಬ ಅಜ್ಜನನ್ನೂ ಅಪಹರಿಸಿರುತ್ತಾನೆ. ಜತೆಗೆ ೇಸ್ಬುಕ್ನಲ್ಲಿ ಲೈವ್ ಬಂದು ತನ್ನ ಮಹತ್ಸಾಧನೆಯ ಕುರಿತು ಹೇಳಿಕೊಳ್ಳುತ್ತಿರುತ್ತಾನೆ. ಹಾಗೇ ಕೀರ್ತಿ ಎಂಬ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ದೇವ್ ಹೇಳಿಕೊಳ್ಳುತ್ತಾನೆ. ಈ ಕಿಡ್ನ್ಯಾಪ್ ಫೇಸ್ಬುಕ್ ಲೈವ್ ನೋಡುವ ನಾಲ್ವರು ಗ್ಯಾರೇಜ್ ಹುಡುಗರು, ಅಪಹರಣಕ್ಕೊಳಗಾದವರನ್ನು ರಸಲು ಮುಂದಾಗುತ್ತಾರೆ. ಜತೆಗೆ ಪೊಲೀಸರೂ ದೇವ್ನನ್ನು ಹಿಡಿಯಲು ತನಿಖೆ ಕೈಗೊಳ್ಳುತ್ತಾರೆ. ಯಾರ ಕೈಗೂ ಸಿಗದೇ ದೇವ್ ಲೈವ್ನಲ್ಲೇ ತಾನು ಅಪಹರಿಸಲು ಕಾರಣ ಹೇಳುತ್ತಾ ಸಾಗುತ್ತಾನೆ. ಅಲ್ಲಿಂದ ಫ್ಲ್ಯಾಶ್ಬ್ಯಾಕ್ ಕಥೆ ತೆರೆದುಕೊಳ್ಳುತ್ತದೆ. ದೇವ್ಗೂ ಭವ್ಯಳಿಗೂ ಏನು ಸಂಬಂಧ? ಅಜ್ಜನನ್ನು ಕಿಡ್ನ್ಯಾಪ್ ಮಾಡಲು ಕಾರಣವೇನು? ಈ ಕೀರ್ತಿ ಯಾರು? ಉತ್ತರ ಬೇಕೆಂದರೆ "ಅವನಿರಬೇಕಿತ್ತು' ನೋಡಿ.
ಸಾಮ್ರಾಟ್ ಅಶೋಕ್ ಒಂದೊಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ನಿರೂಪಿಸಿದ್ದಾರೆ. ದ್ವೀತಿಯಾರ್ಧದಲ್ಲಿ ಯಾರ ಊಹೆಗೂ ನಿಲುಕದ ಟ್ವಿಸ್ಟ್ಗಳು, ಪ್ಯಾನ್-ಆಧಾರ್ ಲಿಂಕ್, ಐಡೆಂಟಿಟಿ ಥ್ಟ್ೆನಂತಹ ವಿಷಯಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಗಂಭೀರ ವಿಷಯವನ್ನು ಕಾಮಿಡಿ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದ್ದು, ಕಲಾವಿದರ ಪಾರ್ಮೆನ್ಸ್ಗೆ ಹೆಚ್ಚಿನ ಸ್ಕೋಪ್ ಇರುವ ಚಿತ್ರವಿದು. ಹೊಸಬರಾದರೂ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ ಭರತ್, ಸೌಮ್ಯಾ ಮತ್ತು ಮಿಸ್ಟರಿ ಶಾಪರ್ಸ್ನ ಭಗವಾನ್ ಮಾಸ್ಟರ್ ಜಯಸಿಂಹ. ಲೋಕಿ ತವಸ್ಯ ಸಂಗೀತದಲ್ಲಿ ಮೂಡಿಬಂದಿರುವ "ಅಂದಕಾಲತ್ತಿಲ್" ಮತ್ತು "ಓಹೋ ಹೃದಯ' ಹಾಡುಗಳು ನೋಡಲು ಚಂದ, ಕೇಳಲು ಅಂದ. ಹಿನ್ನೆಲೆ ಸಂಗೀತ, ರಾಹುಲ್ ರು ಛಾಯಾಗ್ರಹಣ ಕೂಡ ಚಿತ್ರಕ್ಕೆ ಪೂರಕವಾಗಿವೆ. ಆದರೆ, ಸಿನಿಮಾ ಸುದೀರ್ 160 ನಿಮಿಷಗಳಿರುವ ಕಾರಣ ಅಲ್ಲಲ್ಲಿ ತಾಳ್ಮೆ ಪರೀಸುತ್ತದೆ. ಕೆಲ ಸನ್ನಿವೇಶಗಳಿಗೆ ಕತ್ತರಿ ಪ್ರಯೋಗವಾಗಿದ್ದರೆ ಚಿತ್ರ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗುತ್ತಿತ್ತು. ಆದರೂ, ಒಂದು ಸವಾಲಿನ ಚಿತ್ರಕಥೆಯನ್ನು ಸಲೀಸಾಗಿ ದಾಟಿಸಲು ನಿರ್ದೇಶಕ ಸಾಮ್ರಾಟ್ ಅಶೋಕ್ ಮಾಡಿರುವ ಪ್ರಯತ್ನ ಶ್ಲಾನೀಯ.