ಚೌತಿಗೆ ಭಜರಂಗಿ 2 ನಿಶ್ಚಿತ; ಶೇ. 50ರಷ್ಟು ಹಾಜರಾತಿ ಇದ್ದರೂ ನಾವ್ ರೆಡಿ

Bhajarangi 2
Published on

ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರವನ್ನು ಸೆ. 10ರಂದು ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡುವುದಾಗಿ ಒಂದು ತಿಂಗಳ ಹಿಂದೆಯೇ ಘೋಷಿಸಿದ್ದರು ನಿರ್ವಪಕ ಜಯಣ್ಣ. ಅಷ್ಟರಲ್ಲಿ ಪರಿಸ್ಥಿತಿ ಸರಿಹೋಗಬಹುದು, ಜನ ಚಿತ್ರಮಂದಿರದತ್ತ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅಂತಹ ಪವಾಡವೇನೂ ಈ ಒಂದು ತಿಂಗಳಲ್ಲಿ ನಡೆದಿಲ್ಲ. ಜನ ಈಗಲೂ ಚಿತ್ರಮಂದಿರದತ್ತ ಬರುತ್ತಿಲ್ಲ. ಅಷ್ಟೇ ಅಲ್ಲ, ಸರ್ಕಾರ ಸಹ ಇನ್ನೂ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿಲ್ಲ. ಹೀಗಿರುವಾಗ, ‘ಭಜರಂಗಿ 2’ ಚಿತ್ರವು ಮುಂದಕ್ಕೆ ಹೋಗುತ್ತದೆಯೇ ಎಂಬ ಪ್ರಶ್ನೆ ಸಹಜ. ಏಕೆಂದರೆ, ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗಬೇಕಿದ್ದ ‘ದುನಿಯಾ’ ವಿಜಯ್’ ಅಭಿನಯದ ‘ಸಲಗ’, ಯೋಗಿ ಅಭಿನಯದ ‘ಲಂಕೆ’ ಮತ್ತು ಡಾ. ರಾಜ್ ಮೊಮ್ಮಗಳು ಧನ್ಯಾ ರಾಮ್ುಮಾರ್ ಅಭಿನಯದ ‘ನಿನ್ನ ಸನಿಹಕೆ’ ಚಿತ್ರಗಳು ಬಿಡುಗಡೆಯಾಗಿವೆ. ಹೀಗಿರುವಾಗ, ‘ಭಜರಂಗಿ 2’ ಚಿತ್ರ ಸಹ ಮುಂದಕ್ಕೆ ಹೋಗಲಿದೆಯಾ ಎಂಬ ಪ್ರಶ್ನೆ ಸಹಜ.

ಆದರೆ, ಚಿತ್ರವನ್ನು ಅಂದುಕೊಂಡಂತೆ ಸೆ. 10ಕ್ಕೆ ಬಿಡುಗಡೆ ಮಾಡುವುದಾಗಿ ನಿರ್ವಪಕ ಜಯಣ್ಣ ಹೇಳಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಜಯಣ್ಣ, ‘ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಸದ್ಯದಲ್ಲೇ ವೀಕೆಂಡ್ ಲಾಕ್​ಡೌನ್ ಸಹ ತೆರವಾಗುವ ನಿರೀಕ್ಷೆ ಇದೆ. ಹಾಗಾಗಿ, ಸೆ. 10ಕ್ಕೆ ಚಿತ್ರ ಬಿಡುಗಡೆ ಮಾಡುವುದು ಖಂಡಿತ. ಒಂದು ಪಕ್ಷ ಅಷ್ಟರಲ್ಲಿ ಶೇ. 100ರಷ್ಟು ಹಾಜರಾತಿಗೆ ಅವಕಾಶವಿಲ್ಲದಿದ್ದರೂ, ಶೇ. 50ರಷ್ಟು ಹಾಜರಾತಿಯಷ್ಟೇ ಇದ್ದರೂ, ಚಿತ್ರ ಬಿಡುಗಡೆ ಮಾಡುತ್ತೇವೆ. ವಿಜಯ್ ಅಭಿನಯದ ತಮಿಳು ಚಿತ್ರ ‘ಮಾಸ್ಟರ್’ ಸಹ ಶೇ. 50ರಷ್ಟು ಹಾಜರಾತಿಯ ನಡುವೆ ಬಿಡುಗಡೆಯಾಗಿ ಯಶಸ್ವಿಯಾದ ಉದಾಹರಣೆ ಇದೆ. ಹಾಗಾಗಿ, ಬಿಡು ಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎನ್ನುತ್ತಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net