ದಶಕದ ಅತ್ಯುತ್ತಮ ಚಿತ್ರ ಮೂಕನಾಯಕ

Mookanayaka
Published on

ಬೆಂಗಳೂರು: ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮೂಕನಾಯಕ’ ಚಿತ್ರಕ್ಕೆ ನೋಯ್ಡಾದ ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ‘ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ’ ಸಿಕ್ಕಿದೆ. ಈ ಚಿತ್ರೋತ್ಸವದ ‘ಇನ್​ಕ್ರೆಡಿಬಲ್ ಸಿನಿ ಅವಾರ್ಡ್ಸ್’ ವಿಭಾಗಕ್ಕೆ 10 ವರ್ಷಗಳ ಒಳಗೆ ನಿರ್ವಣಗೊಂಡ ವಿಶ್ವದ ಎಲ್ಲ ಭಾಷೆಯ ಚಿತ್ರಗಳನ್ನು ಆಹ್ವಾನಿಸಲಾಗಿತ್ತು. ಈ ಪೈಕಿ ‘ಮೂಕನಾಯಕ’ ಚಿತ್ರವು ಇತರೆ ಚಿತ್ರಗಳೊಂದಿಗೆ ಸ್ಪರ್ಧಿಸಿ, ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಮಾತು ಬಾರದ ಮೂಕ ಚಿತ್ರಕಲಾವಿದನ ಆಶಯ ಮತ್ತು ಅಭಿವ್ಯಕ್ತಿಯ ಕುರಿತಾದ ಈ ಚಿತ್ರವನ್ನು ಬರಗೂರು ರಾಮಚಂದ್ರಪ್ಪ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕುಮಾರ್ ಗೋವಿಂದ್ ಮೂಕ ಕಲಾವಿದನಾಗಿ ನಟಿಸಿದ್ದು, ‘ಸ್ಪರ್ಶ’ ರೇಖಾ, ಶೀತಲ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net