‘ಹಗ್ಗ’ ಹಿಡಿದು ಮತ್ತೆ ಕನ್ನಡಕ್ಕೆ ಬಂದ ಬಹುಭಾಷಾ ಖಳನಟ

Untitled
Published on

ಬೆಂಗಳೂರು: ಮಹೇಶ್ ಬಾಬು, ಶಾರುಖ್​ ಖಾನ್, ಜೂ. ಎನ್​ಟಿಆರ್​, ಪ್ರಭಾಸ್, ಅಜಯ್ ದೇವಗನ್ ಸೇರಿ ಹಲವು ಸ್ಟಾರ್​ ನಟರ ಸಿನಿಮಾದಲ್ಲಿ ಖಳನಾಗಿ ಅಬ್ಬರಿಸಿದ ಬೇಸಂತ್​ ರವಿ ಈಗ ಕನ್ನಡಕ್ಕೆಬರುತ್ತಿದ್ದಾರೆ. ಅವಿನಾಶ್​ ಎನ್​ ನಿರ್ದೇಶನದಲ್ಲಿ ಸಿದ್ಧವಾಗಲಿರುವ ‘ಹಗ್ಗ’ ಚಿತ್ರದಲ್ಲಿ ಬೇಸಂತ್​ ರವಿ ನಟಿಸಲಿದ್ದಾರೆ.
ಈಗಾಗಲೇ ಕನ್ನಡದಲ್ಲಿ ವೀರ ಕನ್ನಡಿಗ, ನಲ್ಲ, ಸಂತು ಸ್ಟ್ರೇಟ್​ ಫಾರ್ವರ್ಡ್​ ಮತ್ತು ತೆಲುಗಿನಲ್ಲಿ ಆಗಡು, ಚೆನೈ ಎಕ್ಸ್​ಪ್ರೆಸ್, ಬುಜ್ಜಿಗಾಡು, ಆಂಧ್ರವಾಲ, ಭೂಲೋಗಂ ಸೇರಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಈಗ ಕನ್ನಡದಲ್ಲಿ ತಯಾರಾಗಲಿರುವ ‘ಹಗ್ಗ’ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚಲು ಸಿದ್ಧತೆ ನಡೆಸಿದ್ದಾರೆ.
ಈ ಚಿತ್ರವನ್ನು ರಾಜ್ ಭಾರದ್ವಾಜ್ ಮತ್ತು ವೇಣು ಭಾರದ್ವಾಜ್, ನಿರ್ಮಿಸುತ್ತಿದ್ದು, ನಾಯಕನಾಗಿ ವೇಣುಭಾರದ್ವಾಜ್, ಪ್ರಿಯಾಂಕಾ ಅರೋರ ನಾಯಕಿಯಾಗಿ ನಟಿಸಲಿದ್ದಾರೆ. ತಬಲನಾಣಿ, ಅವಿನಾಶ್, ಸುಧಾ ಬೆಳವಾಡಿ, ಸಂಜು ಬಸಯ್ಯ, ಅಪೂರ್ವ ಶ್ರೀ, ಉಮೇಶ್, ಸದಾನಂದ ಕಲಿ, ಪ್ರಿಯದರ್ಶಿನಿ, ವಂದನ, ಕಾವ್ಯ ಪ್ರಕಾಶ್, ರಂಗಣ್ಣ, ನಿಶಾಂತ್, ಸಿಂಬ, ದರ್ಶನ್, ವಿವೇಕ್, ಮುಖ್ಯ ಭೂಮಿಕೆಯಲ್ಲಿರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net