More

    ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಅಮ್ಮನ ಅಂತ್ಯ ಸಂಸ್ಕಾರ ವೀಕ್ಷಿಸಿದ ಬಾಲಿವುಡ್​ ನಟ..

    ಇತ್ತೀಚೆಗಷ್ಟೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಮ್ಮ ತಂದೆಯ ಅಂತ್ಯ ಸಂಸ್ಕಾರಕ್ಕೆ ತೆರಳದೆ, ಲಾಕ್​ಡೌನ್​ ನಿಯಮ ಪಾಲಿಸಿದ್ದರು. ಇದೀಗ ಅದೇ ರೀತಿ ಬಾಲಿವುಡ್​ ನಟ ಇರ್ಫಾನ್​ ಖಾನ್​ ಸಹ ತಾಯಿಯ ಅಂತ್ಯ ಸಂಸ್ಕಾರಕ್ಕೆ ತೆರಳದೆ, ವಿಡಿಯೋ ಕಾನ್ಫರೆನ್ಸಿಂಗ್​ ಮೂಲಕವೇ ಅಂತಿಮ ನಮನ ಸಲ್ಲಿಸಿದರು. ಹೌದು, ಇರ್ಫಾನ್ ಅವರ ತಾಯಿ 95 ವರ್ಷದ ಸೈದಾ ಬೇಗಮ್ ಶನಿವಾರ ನಿಧನರಾಗಿದ್ದರು. ರಾಜಸ್ತಾನದ ಜೈಪುರನಲ್ಲಿ ಸಾವನ್ನಪ್ಪಿದ್ದರಿಂದ ಲಾಕ್​ಡೌನ್ ಹಿನ್ನೆಲೆಯಲ್ಲಿ ತೆರಳಲಾಗದೆ, ಮುಂಬೈನ ಮನೆಯಿಂದಲೇ ವಿಡಿಯೋ ಕಾಲ್​ ಮೂಲಕ ಅಮ್ಮನಿಗೆ ಕೊನೆ ನಮನ ಸಲ್ಲಿಸಿದರು.
    ಕಳೆದ ಹಲವು ವರ್ಷಗಳಿಂದ ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಶನಿವಾರ ಬೆಳಗಿನ ಜಾವ 5ಗಂಟೆಗೆ ಕೊನೆಯುಸಿರೆಳೆದರು. ಆಯ್ದ ಕೆಲವೇ ಬೆರಳೆಣಿಕೆ ಸಂಬಂಧಿಕರು ಜೈಪುರದ ಚುಂಗಿ ನಾಕಾ ರುದ್ರಭೂಮಿಯಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. (ಏಜೆನ್ಸೀಸ್​)

    ಈ ಸೆಲೆಬ್ರಿಟಿಗೆ ಸಿಕ್ತು ಆನ್​ಲೈನ್​ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿ ಪಟ್ಟ; ಅದಕ್ಕೆ ಕಾರಣ ಮಾರಕ ಕರೊನಾ ವೈರಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts