ಓಟಿಟಿಗೆ ಬರುತ್ತಾ ಅಕ್ಷಯ್ ಅಭಿನಯದ `ಬೆಲ್‌ಬಾಟಮ್'?

Bell Bottom - Final
Published on

ಮುಂಬೈ: ಕರೊನಾದ ಎರಡನೆ ಅಲೆ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಪೆಟ್ಟು ನೀಡಿದೆ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳೆಲ್ಲ, ಪೋಸ್ಟ್ಪೋನ್ ಆಗಿವೆ. ಯಾರಿಗೂ ತಮ್ಮ ಚಿತ್ರವನ್ನು ಯಾವಾಗ ಬಿಡುಗಡೆ ಮಾಡಬಹುದು ಎಂಬ ಅಂದಾಜು ಸಿಗುತ್ತಿಲ್ಲ. ಈ ಮಧ್ಯೆ, ಹಲವರು ತಮ್ಮ ಚಿತ್ರಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಸಾಲಿಗೆ ಇದೀಗ, ಅಕ್ಷಯ್ ಕುಮಾರ್ ಅಭಿನಯದ `ಬೆಲ್‌ಬಾಟಮ್' ಸಹ ಸೇರಿಕೊಂಡಿದೆ.

ಇದನ್ನೂ ಓದಿ:

ಅಕ್ಷಯ ಅಭಿನಯದ `ಲಕ್ಷಿö್ಮÃ' ಚಿತ್ರವು ಕಳೆದ ವರ್ಷ ಡಿಸ್ನಿ-ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಈ ಮಧ್ಯೆ, ಅಕ್ಷಯ್ ಅಭಿನಯದ `ಸೂರ್ಯವಂಶಿ' ಚಿತ್ರವು ಸಂಪೂರ್ಣವಾಗಿ ಸಿದ್ಧವಾಗಿದ್ದರೂ, ಅದನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಬೇಕು ಎಂಬ ಯೋಚನೆ ಚಿತ್ರತಂಡದ್ದು. ಈ ಚಿತ್ರವು ಕಳೆದ ವರ್ಷ ಮಾರ್ಚ್ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ಬಿಡುಗಡೆಯಾಗಲಿಲ್ಲ. ಆ ನಂತರ ಚಿತ್ರದ ಬಿಡುಗಡೆ ದಿನಾಂಕವನ್ನು ಹಲವು ಬಾರಿ ಘೋಷಿಸಲಾಗಿದೆಯಾದರೂ, ಇದುವರೆಗೂ ಚಿತ್ರ ಮಾತ್ರ ಬಿಡುಗಡೆಯಾಗಿಲ್ಲ.

ಹೀಗಿರುವಾಗಲೇ ಅಕ್ಷಯ್ ಅಭಿನಯದ `ಬೆಲ್‌ಬಾಟಮ್' ಚಿತ್ರವು ಓಟಿಟಿಯಲ್ಲಿ ಬಿಡುಗಡೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಲಾಕ್‌ಡೌನ್ ಮುಗಿದ ನಂತರ ಸ್ಕಾಟ್‌ಲ್ಯಾಂಡ್‌ನಲ್ಲಿ ಸದ್ದಿಲ್ಲದೆ ಚಿತ್ರೀಕರಣವಾಗಿ, ಈ ವರ್ಷದ ಏಪ್ರಿಲ್‌ನಲ್ಲಿ ಚಿತ್ರದ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಸದ್ಯ ಕರೊನಾ ಎರಡನೇ ಅಲೆ ಹೆಚ್ಚಿರುವುದರಿಂದ, ಮುಂದಿನ ನಾಲ್ಕು ತಿಂಗಳುಗಳ ಕಾಲ ಬಿಡುಗಡೆಯಾಗುವುದು ಕಷ್ಟವಾಗಿದೆ. ಹೀಗಿರುವಾಗ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ ಹೇಗೆ ಎಂಬ ಪ್ರಯತ್ನವೊಂದು ತೆರೆಮರೆಯಲ್ಲಿ ನಡೆಯುತ್ತಿದೆಯಂತೆ.

ಇದನ್ನೂ ಓದಿ:

`ಲಕ್ಷಿö್ಮÃ' ಚಿತ್ರದ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದ್ದ ಡಿಸ್ನಿ-ಹಾಟ್‌ಸ್ಟಾರ್‌ನವರೇ `ಬೆಲ್‌ಬಾಟಮ್' ಚಿತ್ರವನ್ನು ಖರೀದಿಸುವುದಕ್ಕೆ ಮುಂದೆ ಬಂದಿದ್ದಾರೆ. ಅಷ್ಟೇ ಅಲ್ಲ, ದೊಡ್ಡ ಮೊತ್ತವನ್ನು ಕೊಟ್ಟು ಖರೀದಿಸುವುದಕ್ಕೆ ತಯಾರಿದ್ದಾರಂತೆ. ಮೂಲಗಳ ಪ್ರಕಾರ, `ಲಕ್ಷಿö್ಮÃ' ಚಿತ್ರದ ಡಿಜಿಟಲ್ ಹಕ್ಕುಗಳನ್ನು ೧೧೦ ಕೋಟಿಗೆ ಖರೀದಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಬಾರಿ ಅದಕ್ಕಿಂತ ದೊಡ್ಡ ಮೊತ್ತವನ್ನು ಕೋಟ್ ಮಾಡಲಾಗಿದೆಯಂತೆ. ಸದ್ಯ ಚಿತ್ರ ಬಿಡುಗಡೆಯಾಗುವ ಸೀನ್ ಇಲ್ಲದಿರುವುದರಿಂದ, ಚಿತ್ರವನ್ನು ಓಟಿಟಿಯಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿದೆ. ಈ ವಿಷಯವಾಗಿ, ಚಿತ್ರತಂಡದವರು ಇನ್ನಷ್ಟೇ ಸ್ಪಷ್ಟನೆ ಕೊಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net