ಈ ಬಾರಿಯ ಬಿಗ್​ಬಾಸ್​ ವಿನ್ನರ್​ ಭವಿಷ್ಯ ನುಡಿದ ನೆಟ್ಟಿಗರು: ಲ್ಯಾಗ್​ ಮಂಜು, ರಾಜೀವ್​ ಅಲ್ಲ, ಮತ್ಯಾರು?

BBK8
Published on

ಬೆಂಗಳೂರು: ಕನ್ನಡ ಬಿಗ್​ಬಾಸ್​ ರಿಯಾಲಿಟಿ ಶೋ ನಿರೂಪಣೆ ಮಾಡಲು ನಟ ಸುದೀಪ್​ಗಿಂತ ಬೇರೆ ಯಾರಾದರೂ ಉತ್ತಮ ನಟರಿದ್ದಾರಾ? ಎಂಬ ಪ್ರಶ್ನೆಯನ್ನ ಕೇಳಿದರೆ, ಅನೇಕ ವೀಕ್ಷಕರು ಸುದೀಪ್​ ಇಲ್ಲದೆ ಬಿಗ್​ಬಾಸ್​ ಶೋ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಕಳೆದ ಏಳು ಆವೃತ್ತಿಯನ್ನು ಸುದೀಪ್​ ನಡೆಸಿಕೊಂಡು ಬಂದಿದ್ದಾರೆ. ಪ್ರಸ್ತುತ 8ನೇ ಆವೃತ್ತಿಯಲ್ಲೂ ತಮ್ಮ ಛಾಪು ಮುಂದುವರಿಸಿದ್ದಾರೆ.

ಸುದೀಪ್​ ನಿರೂಪಣೆ ಒಂದೆಡೆಯಾದರೆ, ರಿಯಾಲಿಟಿ ಶೋ ಅನ್ನು ಯಾರು ಉತ್ತಮವಾಗಿ ಜಡ್ಜ್​ ಮಾಡುತ್ತಾರೆಂದು ಪ್ರಶ್ನಿಸಿದರೆ, ವೀಕ್ಷಕರಿಗಿಂತ ಬೇರೊಬ್ಬರಿಲ್ಲ ಎಂಬ ಉತ್ತರ ಬಂದೇ ಬರುತ್ತದೆ. ಬಿಗ್​ಬಾಷ್​ ಶೋಗೆಂದೇ ವಿಶೇಷ ವೀಕ್ಷಕರ ಬಳಗವಿದೆ. ಪ್ರತಿವಾರ ಯಾರು ಹೋಗಬಹುದು ಮತ್ತು ಯಾರು ಉಳಿದುಕೊಳ್ಳಬಹುದು ಎಂಬ ಭವಿಷ್ಯ ನುಡಿಯುತ್ತಾರೆ. ಅಲ್ಲದೆ, ಟ್ರೋಫಿ ಯಾರು ಗೆಲ್ಲಬಹುದೆಂದು ಸಹ ಹೇಳುತ್ತಾರೆ.

ಸ್ಪರ್ಧಿಗಳ ವರ್ತನೆ, ಆಟದ ರೀತಿ ಮತ್ತು ಅವರು ನೀಡುವ ಮನರಂಜನೆ ಮತ್ತು ನಡೆದುಕೊಳ್ಳುವ ರೀತಿಯನ್ನು ನೋಡಿ ವೀಕ್ಷಕರು ಬಿಗ್​ಬಾಸ್​ ವಿನ್ನರ್​ ಯಾರಾಗಬಹುದೆಂದು ಊಹಿಸುತ್ತಾರೆ. ಪ್ರಸ್ತುತ ಬಿಗ್​ಬಾಸ್​ 8ನೇ ಆವೃತ್ತಿಯು ಒಂದು ತಿಂಗಳು ಪೂರೈಸಿ ಮುನ್ನುಗುತ್ತಿದೆ. ಈಗಾಗಲೇ ಸ್ಪರ್ಧಿಗಳ ಬಗ್ಗೆ ವೀಕ್ಷಕರು ಜಡ್ಜ್​ ಮಾಡಿದ್ದು, ಉತ್ತರ ಮುಂದಿದೆ.

ಈ ಬಾರಿ ಉಡುಪಿ ಮೂಲಕ ಬೈಕ್​ ರೇಸರ್​ ಕೆ.ಪಿ. ಅರವಿಂದ್​ ಕುಮಾರ್​ ಗೆದ್ದೇ ಗೆಲ್ಲುತ್ತಾರೆಂದು ಬಹುತೇಕ ವೀಕ್ಷಕರು ಅಂದಾಜಿಸಿದ್ದಾರೆ. ಈಗಲೇ ಶೋ ಅನ್ನು ಅಂದಾಜಿಸಲು ಸಾಧ್ಯವಿಲ್ಲ. ಏಕೆಂದರೆ ಶೋ ಮುಗಿಯಲು ಇನ್ನು ಎರಡು ತಿಂಗಳಿದೆ. ಆದರೆ, ಈಗಲೇ ಅನೇಕ ನೆಟ್ಟಿಗರು ಅರವಿಂದ್​ ಗೆಲ್ಲಲಿದ್ದಾರೆಂದು ಭವಿಷ್ಯ ನುಡಿಯುತ್ತಿದ್ದಾರೆ. ಅರವಿಂದ್​ ಚೆನ್ನಾಗಿ ಆಡುತ್ತಿದ್ದು, ಮನೆಯವರಿಂದಲೇ ಮೆಚ್ಚುಗೆ ಪಡೆದಿದ್ದಾರೆಂದು ಹೇಳಿದ್ದಾರೆ. ಆದರೆ, ನೆಟ್ಟಿಗರು ಅಂದಾಜಿಗೆ ಉತ್ತರ ಸಿಗಬೇಕೆಂದರೆ ಶೋ ಮುಗಿಯೋವರೆಗೂ ಕಾಯಲೇಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net