ಬಿಗ್​ಬಾಸ್​ ಶೋ ಆರಂಭದಲ್ಲೇ ಕೇಳಿಬಂತು ಅಪಸ್ವರ: ಕಲರ್ಸ್​ ಕನ್ನಡಕ್ಕೆ ಜನರಿಟ್ಟ ಬೇಡಿಕೆ ಏನು?

BBK8
Published on

ಬೆಂಗಳೂರು: ಕನ್ನಡ ಕಿರಿತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 8 ಭಾನುವಾರ ಅದ್ಧೂರಿಯಾಗಿ ಆರಂಭವಾಗಿದೆ. ಎಲ್ಲ 17 ಸ್ಪರ್ಧಿಗಳನ್ನು ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್​ ಆತ್ಮೀಯವಾಗಿ ಬರಮಾಡಿಕೊಂಡು ಬಿಗ್​ಬಾಸ್​​ ಮನೆಯೊಳಗೆ ಕಳುಹಿಸಿಕೊಟ್ಟಿದ್ದು, ಇಂದಿನ ಶೋ ಅಸಲಿ ಆಟ ಆರಂಭವಾಗಲಿದೆ.

ಹೀಗಿರುವಾಗ ಬಿಗ್​ಬಾಸ್​ ಶೋ ಬಗ್ಗೆ ಆರಂಭದಲ್ಲೇ ಅಪಸ್ವರ ಕೇಳಿಬಂದಿದ್ದು, ಶೋನ ಪ್ರಸಾರ ಸಮಯದ ಬಗ್ಗೆ ಜನರು ಆಕ್ಷೇಪ ತೆಗೆದಿದ್ದಾರೆ. ಪ್ರತಿದಿನ ರಾತ್ರಿ 9.30ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. ಕಾರ್ಯಕ್ರಮದ ಬಗ್ಗೆ ನಮಗೆ ಖುಷಿಯಿದೆ. ಆದರೆ, ಸಮಯ ಬದಲಾವಣೆ ಬೇಕಿದೆ ಎಂದು ಜನರು ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ.

ಸದ್ಯದ ಸಮಯದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅನೇಕರು ಬಿಗ್​ಬಾಸ್​ ಶೋ ನಿರ್ದೇಶಕ ಪರಮೇಶ್ವರ್​ ಗುಂಡ್ಕಲ್​ ಅವರಿಗೆ ಸಮಯ ಬದಲಾಯಿಸುವಂತೆ ಮನವಿ ಮಾಡಿದ್ದಾರೆ. 9.30ಕ್ಕೆ ಆರಂಭವಾಗುವ ಶೋ 10.30ಕ್ಕೆ ಮುಗಿಯಲಿದೆ. ಕೆಲವೊಮ್ಮೆ ತಡವಾಗಬಹುದು. ಕಚೇರಿಗೆ ಹೋಗುವವರಿಗೆ ಮತ್ತು ಮಕ್ಕಳಿಗೆ ಈ ಸಮಯ ಸರಿಯಿಲ್ಲ. ಹೀಗಾಗಿ ಶೋ ಅನ್ನು 8 ರಿಂದ 9 ಗಂಟೆಯವರೆಗೆ ಬದಲಾಯಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಟ್ಟಿದ್ದಾರೆ.

ಟಿವಿಯಲ್ಲಿ 8 ರಿಂದ 10 ಅನ್ನು ಪ್ರೈಮ್ ಸ್ಲಾಟ್ ಎಂದು ಪರಿಗಣಿಸಿರುವುದು ನಮಗೆ ತಿಳಿದಿದೆ. ಅದಕ್ಕಾಗಿಯೇ ಪ್ರೈಮ್ ಟೈಮ್ ಸುದ್ದಿ ಮತ್ತು ಜನಪ್ರಿಯ ಟಿವಿ ಧಾರಾವಾಹಿಗಳನ್ನು ಈ ಸಮಯದಲ್ಲಿ ಪ್ರಸಾರ ಮಾಡಲಾಗುತ್ತದೆ. ಇದಕ್ಕಾಗಿಯೇ ಬಿಗ್​ಬಾಸ್ ಪ್ರದರ್ಶನ ತಯಾರಕರು ಕಾರ್ಯಕ್ರಮವನ್ನು 9.30ಕ್ಕೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಆದರೆ, ಜನರ ಒತ್ತಾಯದಿಂದ ಬಿಗ್​ಬಾಸ್ ಕನ್ನಡ ಸೀಸನ್ 8ಯ ಸಮಯ ಬದಲಾಗುತ್ತದೆಯೇ ಎಂದು ಕಾದ ನೋಡಬೇಕಿದೆ.

ಈ ಬಾರಿ ಯಾರೆಲ್ಲ ಬಿಗ್​ಬಾಸ್​ ಮನೆಗೆ ಪ್ರವೇಶಿಸಿದ್ದಾರೆ?

1. ಧನುಶ್ರೀ- ಟಿಕ್​ಟಾಕ್​ ಸ್ಟಾರ್

2. ಶುಭಾ ಪೂಂಜಾ- ನಟಿ

3. ಶಂಕರ್​ ಅಶ್ವಥ್​- ಹಿರಿಯ ನಟ

4. ವಿಶ್ವಾ – ಗಾಯಕ

5. ವೈಷ್ಣವಿ- ಕಿರುತೆರೆ ನಟಿ

6. ಬ್ರೋ ಗೌಡ – ಗಾಯಕ

7. ಅರವಿಂದ್​ – ಬೈಕ್​ ರೇಸರ್​

8. ಮಂಜು ಪಾವಗಡ- ಮಜ ಭಾರತ ಕಲಾವಿದ

9. ಚಂದ್ರಕಲಾ- ಪುಟ್ಟಗೌರಿ ಧಾರಾವಾಹಿಯ ಅಜ್ಜಮ್ಮ

10. ದಿವ್ಯಾ- ಕಿರುತೆರೆ ನಟಿ

11. ಗೀತಾ – ಬ್ರಹ್ಮಗಂಟು ಧಾರಾವಾಹಿ

12. ರಾಜೀವ್​- ಕ್ರಿಕೆಟರ್​

13. ನಿರ್ಮಲಾ ಚೆನ್ನಪ್ಪ- ಧಾರಾವಾಹಿ ನಿರ್ಮಾಪಕಿ

14. ನಿಧಿ ಸುಬ್ಬಯ್ಯಾ- ನಟಿ

15. ಪ್ರಶಾಂತ್​ ಸಂಬರಗಿ- ಮಾಧ್ಯಮ ವರದಿಗಾರ

16. ರಘು ಗೌಡ- ಟಿಕ್​ಟಾಕ್​ ಸ್ಟಾರ್​

17. ದೀಪಿಕಾ- ಕಿರುತೆರೆ ನಟಿ

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net