ಬಾಲಿವುಡ್‌ಗೆ ಬಾಂಗ್ಲಾ ನಟಿ; ‘ಕಡಕ್ ಸಿಂಗ್’ ಮೂಲಕ ಎಂಟ್ರಿ ಕೊಡುತ್ತಿರುವ ಜಯಾ ಎಹ್ಸಾನ್

jaya
Published on

ಮಾಡೆಲ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಜಯಾ ಎಹ್ಸಾನ್ ಈವರೆಗೆ ಸುಮಾರು 110ಕ್ಕೂ ಅಧಿಕ ಬಾಂಗ್ಲಾ ಹಾಗೂ ಬೆಂಗಾಲಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ‘ಗೆರಿಲ್ಲಾ’, ‘ಝೀರೋ ಡಿಗ್ರಿ’, ‘ಡೆಬಿ’ ಸೇರಿ ಒಟ್ಟು ಆರು ಬಾರಿ ಬಾಂಗ್ಲಾದೇಶದ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದಾರೆ.

ಇಂತಹ ಜಯಾ ಇದೀಗ ಬಾಲಿವುಡ್ ಡೆಬ್ಯೂಗೆ ರೆಡಿಯಾಗಿದ್ದಾರೆ. ಅನಿರುದ್ಧ ರಾಯ್ ಚೌಧರಿ ನಿರ್ದೇಶನದ ‘ಕಡಕ್ ಸಿಂಗ್’ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಜತೆ ಅಭಿನಯಿಸುತ್ತಿದ್ದಾರೆ ಜಯಾ. ಇದೊಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಪಾರ್ವತಿ ತಿರುವೊತು, ಸಂಜನಾ ಸಂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೋವಾದಲ್ಲಿ ಆಯೋಜಿಸಲಾಗಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಕಡಕ್ ಸಿಂಗ್’ ಪ್ರದರ್ಶನಗೊಂಡಿದೆ. ಈ ಬಗ್ಗೆ ಜಯಾ,‘ಈವರೆಗೆ ಸುಮಾರು 32 ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಆದರೆ, ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಳ್ಳುವ ಅನುಭವ ವೃತ್ತಿಜೀವನದ ಮೈಲಿಗಲ್ಲಿದ್ದಂತೆ. ಅದರಲ್ಲೂ ಇದು ನನ್ನ ಮೊದಲ ಹಿಂದಿ ಸಿನಿಮಾ’ ಎಂದು ಸಂತೋಷ ಹಂಚಿಕೊಂಡಿದ್ದಾರೆ.

‘ಕಡಕ್ ಸಿಂಗ್’ ಜತೆಗೆ ಜಯಾ ಅಭಿನಯದ ಮೊದಲ ಇರಾನಿ ಸಿನಿಮಾ ‘ರಿಷ್ತಾ’ ಸೇರಿ ಇನ್ನೆರಡು ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವುದು ವಿಶೇಷ. ಅಂದಹಾಗೆ, ‘ಕಡಕ್ ಸಿಂಗ್’ ಇದೇ ಡಿ.8ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ.-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net